ಮಡಿಕೇರಿ, ಸೆ. ೧೭: ಅದ್ಯಾವ ಘಳಿಗೆಯಲ್ಲಿ ಕೊರೊನಾ ಮಹಾಮಾರಿ ಈ ಭೂಮಿಗೆ ಕಾಲಿಟ್ಟಿತ್ತೋ, ಅಲ್ಲಿಂದ ಎಲ್ಲವೂ ಶೂನ್ಯ..., ಕೆಲಸ, ವ್ಯಾಪಾರ, ಶಿಕ್ಷಣ ಎಲ್ಲವೂ ಗೌಣ... ಕಳೆದೆರಡು ವರ್ಷಗಳಿಂದ ಕೊರೊನಾ ಮಹಾಮಾರಿಗೆ ಸಮಾಜದ ವ್ಯವಸ್ಥೆಯೇ ಅಲ್ಲೋಲ-ಕಲ್ಲೋಲವಾಗಿದ್ದು, ಶಿಕ್ಷಣ ವ್ಯವಸ್ಥೆ ಕೂಡ ಇದರ ಹೊಡೆತಕ್ಕೆ ಬಲಿಯಾಗಿತ್ತು. ರಾಜ್ಯದ ವಿವಿಧೆಡೆ ಕೋವಿಡ್ ಪಾಸಿಟಿವಿಟಿ ಕರಿಮೋಡದ ಹಿನ್ನೆಲೆಯಲ್ಲಿ ಎಲ್ಲ ಕಡೆಗಳಲ್ಲೂ ಶಾಲಾ-ಕಾಲೇಜುಗಳು ಆರಂಭಗೊAಡಿದ್ದವು. ಆದರೆ ಕೊಡಗು ಜಿಲ್ಲೆಯಲ್ಲಿ ಮಾತ್ರ ಪಾಸಿಟಿವಿಟಿ ಪ್ರಮಾಣ ಹೆಚ್ಚಾಗಿದ್ದರಿಂದ ಶಾಲೆಗಳು ತೆರೆದಿರಲಿಲ್ಲ. ಇದೀಗ ಪಾಸಿಟಿವಿಟಿ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಇಂದಿನಿAದ ೯, ೧೦ ಹಾಗೂ ಪದವಿ ಪೂರ್ವ ಕಾಲೇಜುಗಳು ಆರಂಭಗೊAಡಿವೆ. ಕಳೆದ ಎರಡು ವರ್ಷಗಳಿಂದ ಶಾಲಾ-ಕಾಲೇಜುಗಳ ಮುಖ ನೋಡದೆ ಮನೆಯಲ್ಲಿಯೇ ಬಂಧಿಯಾಗಿದ್ದ ವಿದ್ಯಾರ್ಥಿಗಳಿಂದು ಸಂಭ್ರಮದಿAದಲೇ ಶಾಲೆಯತ್ತ ಮುಖ ಮಾಡಿದರು. ಆರಂಭದ ದಿನವಾದ್ದರಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದರೂ ಬಂದಿದ್ದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದದವರು ಹೃದಯಸ್ಪರ್ಶಿ ಸ್ವಾಗತದೊಂದಿಗೆ ಬರಮಾಡಿಕೊಂಡರು. ಶಾಲಾ-ಕಾಲೇಜುಗಳಲ್ಲಿಂದು ಸಂಭ್ರಮ ಮನೆ ಮಾಡಿತ್ತು.

ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ. ೨ಕ್ಕಿಂತ ಕಡಿಮೆಯಾದ ಹಿನ್ನೆಲೆಯಲ್ಲಿ ಇಂದಿನಿAದ ೯, ೧೦ ಹಾಗೂ ಪದವಿಪೂರ್ವ ಕಾಲೇಜುಗಳನ್ನು ಪುನರಾರಂಭ ಮಾಡುವಂತೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳ ಗೇಟ್ ತೆರೆದಿದ್ದು, ಆಸಕ್ತ ಹಾಗೂ ಸೌಲಭ್ಯವುಳ ವಿದ್ಯಾರ್ಥಿಗಳು ಸಂತಸದಿAದಲೇ ತರಗತಿಗಳಿಗೆ ಹಾಜರಾಗಿದ್ದರು. ಕೊರೊನಾ ಸೋಂಕು ಹರಡುವಿಕೆಯ ಹೆದರಿಕೆ, ಬಸ್, ಇನ್ನಿತರ ವಾಹನ ಸೌಕರ್ಯಗಳ ಕೊರತೆಯಿಂದಾಗಿ ಹಾಗೂ ವಾರದ ಕೊನೆಯ ದಿನವಾಗಿರುವುದರಿಂದ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿತ್ತು. ಆದರೂ ಆಗಮಿಸಿದ ವಿದ್ಯಾರ್ಥಿಗಳನ್ನು ಶಾಲಾ-ಕಾಲೇಜು ಆಡಳಿತ ಮಂಡಳಿ, ಶಿಕ್ಷಕರು ಹೂವೂ, ಸಿಹಿ, ಗಿಡ ಪುಸ್ತಕಗಳನ್ನು ನೀಡುವುದರ ಮೂಲಕ ಪ್ರೀತಿಪೂರ್ವಕವಾಗಿ ಸ್ವಾಗತಿಸಿ ಬರಮಾಡಿಕೊಂಡರು.ಸೋಮವಾರಪೇಟೆ : ಕೊರೊನಾ ಲಾಕ್‌ಡೌನ್ ನಂತರ ಆರಂಭಗೊAಡ ೯ ಮತ್ತು ೧೦ನೇ ತರಗತಿಗಳಿಗೆ ಇಂದು ವಿದ್ಯಾರ್ಥಿಗಳು ಸಂಭ್ರಮದಿAದ ಆಗಮಿಸಿದರು.

ತಾಲೂಕಿನ ಗ್ರಾಮೀಣ ಭಾಗದಲ್ಲಿರುವ ಶಾಲೆಗಳೂ ಸೇರಿದಂತೆ ಪಟ್ಟಣ ವ್ಯಾಪ್ತಿಯ ಸರ್ಕಾರಿ, ಖಾಸಗಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ೯ ಮತ್ತು ೧೦ನೇ ತರಗತಿಗಳಿಗೆ ವಿದ್ಯಾರ್ಥಿಗಳು ಆಗಮಿಸಿದರು.

ಶಾಲಾ ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ನೀಡಿ, ಕೊರೊನಾ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳುವಳಿಕೆ ನೀಡಿದರು. ಶಾಲೆಗೆ ಆಗಮಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಥರ್ಮಲ್ ಸ್ಕಿçÃನಿಂಗ್ ನಡೆಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಭೌತಿಕ ತರಗತಿಗಳಿಗೆ ಹಾಜರಾಗುವಂತೆ ಸೂಚನೆ ನೀಡಿದರು.

ಬಹುತೇಕ ಶಾಲೆಗಳಲ್ಲಿ ಶೇ. ೫೦ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದರು. ಒಂದು ಬೆಂಚ್‌ನಲ್ಲಿ ಈರ್ವರು ವಿದ್ಯಾರ್ಥಿಗಳಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ತರಗತಿಗಳ ಆರಂಭಕ್ಕೂ ಮುನ್ನ ಕೊಠಡಿ, ಶೌಚಾಲಯಗಳನ್ನು ಸ್ಯಾನಿಟೈಸರ್ ಮೂಲಕ ಸ್ವಚ್ಛಗೊಳಿಸಲಾಗಿತ್ತು.

ಇದರೊಂದಿಗೆ ತಾಲೂಕು ವ್ಯಾಪ್ತಿಯಲ್ಲಿರುವ ಪದವಿ ಪೂರ್ವ ಕಾಲೇಜುಗಳೂ ಸಹ ಇಂದಿನಿAದ ಆರಂಭಗೊAಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ತರಗತಿಗಳಿಗೆ ವಿದ್ಯಾರ್ಥಿಗಳು ಆಗಮಿಸಿದರು. ಕೋವಿಡ್ ಮೊದಲನೇ ಹಾಗೂ ೨ನೇ ಲಸಿಕೆ ಪಡೆದಿರುವ ಶಿಕ್ಷಕರು-ಉಪನ್ಯಾಸಕರು ಶಾಲಾ ಕಾಲೇಜಿಗೆ ಆಗಮಿಸಿ ಪಾಠ-ಪ್ರವಚನದಲ್ಲಿ ಭಾಗಿಯಾದರು.ವೀರಾಜಪೇಟೆ: ಸರಕಾರದ ಆದೇಶದಂತೆ ಭೌತಿಕವಾಗಿ ಆರಂಭಗೊAಡ ಶಾಲೆಗೆ ಆಗಮಿಸಿದ ಮಕ್ಕಳಿಗೆ ಶಾಲಾ ಶಿಕ್ಷಕರು ಆರತಿಯನ್ನು ಬೆಳಗಿಸಿ ಪ್ರೀತಿ ಪೂರ್ವಕವಾಗಿ ಸ್ವಾಗತಿಸಿ ಶಾಲೆಗೆ ಬರ ಮಾಡಿಕೊಂಡರು.

ವೀರಾಜಪೇಟೆ ಸಮೀಪದ ದೇವಣಗೇರಿ ಸರಕಾರಿ ಶಾಲೆಯಲ್ಲಿ ಬಿ.ಆರ್.ಪಿ. ಯಲ್ಲಪ್ಪ ಪೂಜಾರಿ ವಿದ್ಯಾರ್ಥಿಗಳಿಗೆ ಜ್ಞಾನದ ಮೌಲ್ಯಗಳನ್ನು ತಿಳಿಸಿ ಮುಂದಿನ ದಿನಗಳಲ್ಲಿ ವಿದ್ಯಾಭ್ಯಾಸವನ್ನು ಚೆನ್ನಾಗಿ ಕಲಿಯವಂತೆ ಶುಭ ಹಾರೈಸಿದರು.

ಮುಖ್ಯ ಶಿಕ್ಷಕ ಲೋಕೇಶ್, ಕೋವಿಡ್ -೧೯ ರ ಮಾರ್ಗ ಸೂಚಿಯನ್ವಯ ಮಕ್ಕಳಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ತಿಳಿಸಿದರು. ಶಿಕ್ಷಕ ವಿ.ಆರ್. ಸಂದೀಪ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಸರ್ವರನ್ನು ಸ್ವಾಗತಿಸಿದರು. ಮಕ್ಕಳಿಗೆ ಥರ್ಮಲ್ ಸ್ಕಾನಿಂಗ್ ನೊಂದಿಗೆ ಸ್ಯಾನಿಟೈಸ್ ಮಾಡಿದ ನಂತರ ಎಲ್ಲಾ ಮಕ್ಕಳಿಗೆ ಸಿಹಿ ಹಂಚುವುದರೊAದಿಗೆ ಮಕ್ಕಳನ್ನು ಶಾಲೆಗೆ ಬರಮಾಡಿಕೊಂಡರು.

ವೀರಾಜಪೇಟೆ ಪಟ್ಟಣದ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾರಂಭದ ಮೊದಲ ದಿನ ಉತ್ತಮ ಪ್ರತಿಕ್ರಿಯೇ ವ್ಯಕ್ತವಾಗಿದೆ. ವಿದ್ಯಾರ್ಥಿಗಳು ಅತಿ ಉತ್ಸಾಹದಿಂದ ತರಗತಿಗಳಿಗೆ ಆಗಮಿಸಿ ಪಾಠ ಪ್ರವಚನದಲ್ಲಿ ತಮ್ಮನ್ನು ತೊಡಗಿದ್ದರು.

ತರಗತಿಗಳನ್ನು ಸ್ಯಾನಿಟೈಜ್ ಮಾಡಲಾಗಿದ್ದು, ವಿದ್ಯಾರ್ಥಿಗಳು ಸಾಮಾಜಿಕ ಅಂತರದ ಪಾಲನೆಯೊಂದಿಗೆ ತರಗತಿಯಲ್ಲಿ ಪಾಲ್ಗೊಂಡಿದ್ದಾರೆ. ವಿದ್ಯಾರ್ಥಿಗಳು ಪಾಠ ಪ್ರವಚನದಲ್ಲಿ ಪಾಲ್ಗೊಳ್ಳಲು ಅತೀ ಉತ್ಸಾಹದಿಂದ ಆಗಮಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು. ಸಂಸ್ಥೆಯಲ್ಲಿ ಕೋವಿಡ್ ನಿಯಮ ಪಾಲನೆಯನ್ನು ಕಡ್ಡಾಯಗೊಳಿಸಿದೆ ಎಂದು ಪ್ರಾಂಶುಪಾಲರಾದ ರೆ. ಫಾ. ಮದಲೈ ಮುತ್ತು ಮಾಹಿತಿ ನೀಡಿದರು.

ತಾಲೂಕಿನ ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ೯ ಹಾಗೂ ೧೦ ನೇ ತರಗತಿ ಪ್ರಾರಂಭವಾಗಿದ್ದು, ತರಗತಿಗಳಿಗೆ ಸ್ಯಾನಿಟೈಸರ್ ಮಾಡಿಸಲಾಗಿರುತ್ತದೆ. ಇಲಾಖಾ ಅಧಿಕಾರಿಗಳು ಭೇಟಿ ನೀಡಿ ಮಕ್ಕಳನ್ನು ಸ್ವಾಗತಿಸಿ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡಿದರು, ಹಾಗೂ ಎಲ್ಲಾ ವಿದ್ಯಾರ್ಥಿಗಳು ಮುಖಗವಸನ್ನು ಧರಿಸಿದ್ದು, ಎಲ್ಲಾ ಶಾಲೆಗಳಲ್ಲಿ ನಿಯಮವನ್ನು ಪಾಲಿಸಲಾಗಿರುತ್ತದೆ. ವೀರಾಜಪೇಟೆ: ಸರಕಾರದ ಆದೇಶದಂತೆ ಭೌತಿಕವಾಗಿ ಆರಂಭಗೊAಡ ಶಾಲೆಗೆ ಆಗಮಿಸಿದ ಮಕ್ಕಳಿಗೆ ಶಾಲಾ ಶಿಕ್ಷಕರು ಆರತಿಯನ್ನು ಬೆಳಗಿಸಿ ಪ್ರೀತಿ ಪೂರ್ವಕವಾಗಿ ಸ್ವಾಗತಿಸಿ ಶಾಲೆಗೆ ಬರ ಮಾಡಿಕೊಂಡರು.

ವೀರಾಜಪೇಟೆ ಸಮೀಪದ ದೇವಣಗೇರಿ ಸರಕಾರಿ ಶಾಲೆಯಲ್ಲಿ ಬಿ.ಆರ್.ಪಿ. ಯಲ್ಲಪ್ಪ ಪೂಜಾರಿ ವಿದ್ಯಾರ್ಥಿಗಳಿಗೆ ಜ್ಞಾನದ ಮೌಲ್ಯಗಳನ್ನು ತಿಳಿಸಿ ಮುಂದಿನ ದಿನಗಳಲ್ಲಿ ವಿದ್ಯಾಭ್ಯಾಸವನ್ನು ಚೆನ್ನಾಗಿ ಕಲಿಯವಂತೆ ಶುಭ ಹಾರೈಸಿದರು.

ಮುಖ್ಯ ಶಿಕ್ಷಕ ಲೋಕೇಶ್, ಕೋವಿಡ್ -೧೯ ರ ಮಾರ್ಗ ಸೂಚಿಯನ್ವಯ ಮಕ್ಕಳಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ತಿಳಿಸಿದರು. ಶಿಕ್ಷಕ ವಿ.ಆರ್. ಸಂದೀಪ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಸರ್ವರನ್ನು ಸ್ವಾಗತಿಸಿದರು. ಮಕ್ಕಳಿಗೆ ಥರ್ಮಲ್ ಸ್ಕಾನಿಂಗ್ ನೊಂದಿಗೆ ಸ್ಯಾನಿಟೈಸ್ ಮಾಡಿದ ನಂತರ ಎಲ್ಲಾ ಮಕ್ಕಳಿಗೆ ಸಿಹಿ ಹಂಚುವುದರೊAದಿಗೆ ಮಕ್ಕಳನ್ನು ಶಾಲೆಗೆ ಬರಮಾಡಿಕೊಂಡರು.

ವೀರಾಜಪೇಟೆ ಪಟ್ಟಣದ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾರಂಭದ ಮೊದಲ ದಿನ ಉತ್ತಮ ಪ್ರತಿಕ್ರಿಯೇ ವ್ಯಕ್ತವಾಗಿದೆ. ವಿದ್ಯಾರ್ಥಿಗಳು ಅತಿ ಉತ್ಸಾಹದಿಂದ ತರಗತಿಗಳಿಗೆ ಆಗಮಿಸಿ ಪಾಠ ಪ್ರವಚನದಲ್ಲಿ ತಮ್ಮನ್ನು ತೊಡಗಿದ್ದರು.

ತರಗತಿಗಳನ್ನು ಸ್ಯಾನಿಟೈಜ್ ಮಾಡಲಾಗಿದ್ದು, ವಿದ್ಯಾರ್ಥಿಗಳು ಸಾಮಾಜಿಕ ಅಂತರದ ಪಾಲನೆಯೊಂದಿಗೆ ತರಗತಿಯಲ್ಲಿ ಪಾಲ್ಗೊಂಡಿದ್ದಾರೆ. ವಿದ್ಯಾರ್ಥಿಗಳು ಪಾಠ ಪ್ರವಚನದಲ್ಲಿ ಪಾಲ್ಗೊಳ್ಳಲು ಅತೀ ಉತ್ಸಾಹದಿಂದ ಆಗಮಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು. ಸಂಸ್ಥೆಯಲ್ಲಿ ಕೋವಿಡ್ ನಿಯಮ ಪಾಲನೆಯನ್ನು ಕಡ್ಡಾಯಗೊಳಿಸಿದೆ ಎಂದು ಪ್ರಾಂಶುಪಾಲರಾದ ರೆ. ಫಾ. ಮದಲೈ ಮುತ್ತು ಮಾಹಿತಿ ನೀಡಿದರು.

ತಾಲೂಕಿನ ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ೯ ಹಾಗೂ ೧೦ ನೇ ತರಗತಿ ಪ್ರಾರಂಭವಾಗಿದ್ದು, ತರಗತಿಗಳಿಗೆ ಸ್ಯಾನಿಟೈಸರ್ ಮಾಡಿಸಲಾಗಿರುತ್ತದೆ. ಇಲಾಖಾ ಅಧಿಕಾರಿಗಳು ಭೇಟಿ ನೀಡಿ ಮಕ್ಕಳನ್ನು ಸ್ವಾಗತಿಸಿ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡಿದರು, ಹಾಗೂ ಎಲ್ಲಾ ವಿದ್ಯಾರ್ಥಿಗಳು ಮುಖಗವಸನ್ನು ಧರಿಸಿದ್ದು, ಎಲ್ಲಾ ಶಾಲೆಗಳಲ್ಲಿ ನಿಯಮವನ್ನು ಪಾಲಿಸಲಾಗಿರುತ್ತದೆ. ಪೊನ್ನಂಪೇಟೆ : ಕೊರೊನಾ ಹಿನ್ನೆಲೆಯಲ್ಲಿ ದೀರ್ಘಕಾಲದ ರಜೆಯ ನಂತರ ಶಾಲೆಗಳು ಆರಂಭಗೊAಡಿದ್ದು, ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಗೆ ವಿದ್ಯಾರ್ಥಿಗಳು ಖುಷಿಯಿಂದ ಆಗಮಿಸಿದರು. ಶಾಲೆಯ ದ್ವಾರಕ್ಕೆ ತಳಿರು ತೋರಣದಿಂದ ಸಿಂಗರಿಸಲಾಗಿತ್ತು. ಎಸ್‌ಡಿಎಂಸಿ ಅಧ್ಯಕ್ಷೆ ಉಮಾದೇವಿ ವಿದ್ಯಾರ್ಥಿಗಳಿಗೆ ಹೂವು ನೀಡುವ ಮೂಲಕ ಶಿಕ್ಷಕರ ಸಮ್ಮುಖದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಬರಮಾಡಿಕೊಂಡರು. ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ನೀಡಿಲಾಯಿತು. ಈ ಸಂದರ್ಭ ವೀಕ್ಷಕರಾಗಿ ಆಗಮಿಸಿದ್ದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಯವಂಡ ಉತ್ತಪ್ಪ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಓದಿನ ಕಡೆಗೆ ಗಮನ ನೀಡುವುದರ ಜೊತೆಗೆ, ಪ್ರತಿ ನಿತ್ಯ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಅರೋಗ್ಯವನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು. ಕರ್ನಾಟಕ ಪಬ್ಲಿಕ್ ಶಾಲೆಯ ಒಟ್ಟು ೩೧೦ ವಿದ್ಯಾರ್ಥಿಗಳಲ್ಲಿ ಮೊದಲ ದಿನ ೮ ಹಾಗೂ ೯ ನೇ ತರಗತಿಯ ೧೧೧ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದು, ಶೇ.೩೫ ರಷ್ಟು ಹಾಜರಾತಿ ಇತ್ತು.

ಈ ಸಂದರ್ಭ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ತಿರುನೆಲ್ಲಿಮಾಡ ಜೀವನ್, ಪುಷ್ಪ, ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲರಾದ ಎಂ.ಯು.ಚAಗಪ್ಪ, ಎಸ್‌ಡಿಎಂಸಿ ಸದಸ್ಯ ಶರಿನ್, ಶಿಕ್ಷಕರಾದ ಅನಿತಾ ಪೊಟ್ರೋಡೊ , ಚಂದನ, ವಾಸಂತಿ, ಡ್ಯಾನಿ ಈರಪ್ಪ, ಕೀರ್ತಿ ಹೆಗ್ಗಡೆ, ಮಂಜುನಾಥ್, ಚಿದಾನಂದಪ್ಪ, ರಜನಿ, ಅನಿತ ಕುಮಾರಿ, ಬೋಜಮ್ಮ, ಸರ್ಫಾನ, ಭಾಗ್ಯ ಇದ್ದರು. ಇಲ್ಲಿನ ಪದವಿ ಪೂರ್ವ ಕಾಲೇಜಿನಲ್ಲಿ ಮೊದಲ ದಿನ ಶೇ.೪೦ ರಷ್ಟು ವಿದ್ಯಾರ್ಥಿ ಹಾಜರಿದ್ದರು.ಸುಂಟಿಕೊಪ್ಪ : ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆ ಶಾಲೆಯ ೯, ೧೦ ಹಾಗೂ ಪದವಿ ಪೂರ್ವ ಕಾಲೇಜು ಪ್ರಥಮ ಪಿಯುಸಿ ದ್ವಿತೀಯ ಪಿಯುಸಿ ತರಗತಿಗಳು ಆರಂಭಗೊAಡಿದ್ದು ವಿದ್ಯಾರ್ಥಿಗಳು ಎಂದಿನAತೆ ತರಗತಿಗಳಿಗೆ ಆಗಮಿಸಿ ಪಾಠ ಪ್ರವಚನದಲ್ಲಿ ತೊಡಗಿಸಿಕೊಂಡರು.

ಜಿಲ್ಲೆಯಲ್ಲಿ ಕೊÀರೊನಾ ಲಾಕ್‌ಡೌನ್ ತೆರವುಗೊಂಡು ನಿಬಂಧನೆಗಳನ್ನು ಸಡಿಲಗೊಳಿಸಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಜಿಲ್ಲಾಧಿಕಾರಿಗಳ ಆದೇಶದ ಮೇರೆ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಕಾರ್ಯಚರಿಸುತ್ತಿರುವ ಪ್ರೌಢಶಾಲೆ ಹಾಗೂ ಪದವಿ ಕಾಲೇಜು ಆರಂಭಗೊAಡವು. ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಬಾಳೆ ತಳಿರು ತೋರಣಗಳಿಂದ ಸಿಂಗರಿಸಿ ವಿದ್ಯಾರ್ಥಿಗಳಿಗೆ ಮುಖ್ಯೋಪಾದ್ಯಾಯ ಬಾಲಕೃಷ್ಣ, ಶಿಕ್ಷಕ ಸಿ.ಟಿ. ಸೋಮಶೇಖರ್ ಸಹ ಶಿಕ್ಷಕರು ಅದ್ಧೂರಿ ಸ್ವಾಗತವನ್ನು ಕೋರಿದರು. ಮಕ್ಕಳಿಗೆ ಸ್ಯಾನಿಟೈಸರ್ ಥರ್ಮಲ್ ಸ್ಕಾö್ಯನಿಂಗ್ ಮಾಡಿಸಿ ತರಗಳಿಗೆ ಬರಮಾಡಿಕೊಂಡರು.

ಪ್ರೌಢಶಾಲೆಯ ೯ ತರಗತಿಯಲ್ಲಿ ಒಟ್ಟು ೫೫ ಮಕ್ಕಳಲ್ಲಿ ೨೨, ೧೦ನೇ ತರಗತಿಯಲ್ಲಿ ೬೩ ಮಕ್ಕಳಲ್ಲಿ ೩೬ ವಿದ್ಯಾರ್ಥಿಗಳು ಹಾಜರಾಗಿದ್ದರು.

ಸರಕಾರಿ ಪದವಿ ಪೂರ್ವ ಕಾಲೇಜಿನ ಆರಂಭವಾದ ಶೇ. ೮೦ ರಷ್ಟು ಮಕ್ಕಳು ಕಾಲೇಜಿಗೆ ಆಗಮಿಸಿದ್ದರು. ಪ್ರಾಂಶುಪಾಲ ಪಿ.ಯು.ಜಾನ್ ಹಾಗೂ ಉಪನ್ಯಾಸಕರು ಎಲ್ಲಾ ಮಕ್ಕಳಿಗೆ ಮೊದಲಿಗೆ ಥರ್ಮಲ್ ಸ್ಕಾö್ಯನಿಂಗ್ ಹಾಗೂ ಸ್ಯಾನಿಟೈಸರ್ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕಡ್ಡಾಯವಾಗಿ ವಿದ್ಯಾರ್ಥಿಗಳು ಮಾಸ್ಕ್ ಧರಿಸಬೇಕೆಂದು ಮಾಹಿತಿ ನೀಡಿದರು. ನಂತರ ಮೊದಲ ದಿನದ ಪಾಠ ಪ್ರವಚನ ಎಂದಿನAತೆ ನೆರವೇರಿಸಿದರು. ಪಂಚಾಯಿತಿ ಸದಸ್ಯೆ ವಸಂತಿ ಪ್ರೌಢಶಾಲಾ ಮಕ್ಕಳಿಗೆ ಸಿಹಿತಿಂಡಿ ವಿತರಿಸಿ ಸ್ವಾಗತಿಸಿದರು.ಮುಳ್ಳೂರು: ಕೊಡಗು ಜಿಲ್ಲೆಯಲ್ಲಿ ಪ್ರೌಢಶಾಲೆಯ ೯ನೇ ಮತ್ತು ೧೦ನೇ ತರಗತಿ ಪ್ರಾರಂಭಗೊAಡಿದೆ. ಶನಿವಾರಸಂತೆ, ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿರುವ ಸರಕಾರಿ, ಅನುದಾನಿತ ಪ್ರೌಢಶಾಲೆಯ ೯ನೇ ತರಗತಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಡಗರ ಉತ್ಸಾಹ ಮತ್ತು ಹುರುಪಿನಿಂದ ತಮ್ಮ ಶಾಲೆಗಳಿಗೆ ಆಗಮಿಸಿದರು. ಶಾಲೆಯ ಶಿಕ್ಷಕರು ಅಷ್ಟೇ ಸಂಭ್ರಮದಿAದ ತಮ್ಮ ವಿದ್ಯಾರ್ಥಿಗಳನ್ನು ತರಗತಿಗೆ ಸ್ವಾಗತಿಸಿದರು. ಕೆಲವು ಶಾಲೆಗಳಲ್ಲಿ ಶಾಲಾ ಪ್ರವೇಶ ದ್ವಾರದಲ್ಲಿ ವಿದ್ಯಾರ್ಥಿಗಳ ಆಗಮನಕ್ಕಾಗಿ ತಳಿರು ತೋರಣ ಕಟ್ಟಿದ್ದರು. ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಹೂವು ನೀಡಿ ಸ್ವಾಗತಿಸಿದರೆ, ವಿದ್ಯಾರ್ಥಿಗಳು ಶಿಕ್ಷಕರಿಗೆ ಹೂವು ನೀಡಿ ಗೌರವಿಸಿದರು.

ಕುಶಾಲನಗರ : ಕೋವಿಡ್ -೧೯ ರ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಶಾಲೆಗಳು ಶುಕ್ರವಾರ ಆರಂಭಗೊAಡ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳನ್ನು ಸ್ವಾಗತಿಸಿ ಬರಮಾಡಿಕೊಂಡ ದೃಶ್ಯ ಕಂಡುಬAತು.

ಕುಶಾಲನಗರ ಪಟ್ಟಣದ ಶಾಲೆಗಳು ಸೇರಿದಂತೆ ಸಮೀಪದ ಸರ್ಕಾರಿ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಾಲಾ ದ್ವಾರದ ಬಳಿ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಮಕ್ಕಳಿಗೆ ಹೂವು ನೀಡುವ ಮೂಲಕ ಸ್ವಾಗತಿಸಿದರು. ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಥರ್ಮಲ್ ಸ್ಕಾö್ಯನಿಂಗ್‌ನಿAದ ತಾಪಮಾನ ಪರೀಕ್ಷಿಸಿ ಸ್ಯಾನಿಟೈಸ್ ಮಾಡುವ ಕಾರ್ಯ ನಡೆಯಿತು. ಮಕ್ಕಳಿಗೆ ಕೋವಿಡ್ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು. ಬಹುತೇಕ ಶಾಲೆಗಳಲ್ಲಿ ಮಕ್ಕಳು ಶಾಲೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾಜರಾಗಿದ್ದು ಕಂಡುಬAತು. ಹೆಚ್ಚಿನ ವಿದ್ಯಾರ್ಥಿಗಳಿಗೆ ಪೋಷಕರು ಶಾಲೆಗೆ ಆಗಮಿಸಿ ದೃಶ್ಯ ಗೋಚರಿಸಿತು.ಕೂಡಿಗೆ : ಕೋವಿಡ್ -೧೯ ರ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಶಾಲೆಗಳು ಶುಕ್ರವಾರ ಆರಂಭಗೊAಡ ಸಂದರ್ಭದಲ್ಲಿ ಸಮೀಪದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಕೂಡಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಸ್ವಾಗತಿಸಿ ಶಾಲೆಗೆ ಬರ ಮಾಡಿಕೊಂಡರು.

ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಗೆ ಆಗಮಿಸಿದ ಮಕ್ಕಳಿಗೆ ಶಾಲಾ ದ್ವಾರದ ಬಳಿ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಹೂವು ನೀಡುವ ಮೂಲಕ ಸ್ವಾಗತಿಸಿ, ಮಕ್ಕಳು ಎಂದಿನAತೆ ಶಾಲೆಗೆ ಬಂದು ಕಲಿಕೆಯಲ್ಲಿ ತೊಡಗಬೇಕು ಎಂದರು. ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಥರ್ಮಲ್ ಸ್ಕಾö್ಯನಿಂಗ್ ನಿಂದ ತಾಪಮಾನ ಪರೀಕ್ಷಿಸಿ ಸ್ಯಾನಿಟೈಸ್ ನೀಡಿದರು. ನಂತರ ಶಿಕ್ಷಕರು ಎಲ್ಲಾ ಮಕ್ಕಳಿಗೆ ಸಿಹಿ ವಿತರಿಸಿ ಬಾಲ ವಿಜ್ಞಾನ ಪುಸ್ತಕ ಹಾಗೂ ಗಿಡಗಳನ್ನು ನೀಡುವ ಮೂಲಕ ಸ್ವಾಗತಿಸಿದರು.

ಶಾಲೆಗೆ ಭೇಟಿ ನೀಡಿದ್ದ ಶಿಕ್ಷಣ ಸಂಯೋಜಕ ಕೆ.ಬಿ.ರಾಧಾಕೃಷ್ಣ ಮಕ್ಕಳಿಗೆ ಕೋವಿಡ್ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು. ಮಕ್ಕಳು ಶಾಲೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾಜರಾಗಿದ್ದು ಕಂಡುಬAತು. ಶಿಕ್ಷಕರು ಮಕ್ಕಳನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸಿದ್ದು ವಿದ್ಯಾರ್ಥಿ ಪೋಷಕರಿಗೆ ತುಂಬಾ ಸಂತಸ ತಂದಿತು.

ಕೂಡಿಗೆ : ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಮತ್ತು ಪದವಿ ತರಗತಿಗಳು ಆರಂಭಗೊAಡಿವೆ.

ಕೂಡಿಗೆಯ ಖಾಸಗಿ ಪ್ರೌಢಶಾಲೆಯಲ್ಲಿ ೯ನೇ ೧೦ನೇ ತರಗತಿಗಳಿಗೆ ಹೆಚ್ಚಿನ ವಿದ್ಯಾರ್ಥಿಗಳು ಬಂದಿದ್ದರು. ಕೂಡಿಗೆ ಪದವಿ ಪೂರ್ವ ಕಾಲೇಜಿನಲ್ಲಿ ಶೇ. ೮೦ ರಷ್ಟು ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿಗಳು ಹೆಚ್ಚಿನ ಲವಲವಿಕೆಯಿಂದ ಬರುತ್ತಿರುವುದು ಕಂಡುಬAದಿತು.

ಹೆಬ್ಬಾಲೆ ಶಿರಂಗಾಲ ಗ್ರಾಮದಲ್ಲಿರುವ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳು ಪ್ರಾರಂಭಗೊAಡಿವೆ. ವಿದ್ಯಾರ್ಥಿಗಳ ಸಂಖ್ಯೆಯ ಪ್ರಮಾಣವು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರುವುದು ಕಂಡುಬAದಿತು.

ಮುAಜಾಗೃತಾ ಕ್ರಮದೊಂದಿಗೆ ಶಾಲಾ ಕಾಲೇಜು ಆರಂಭ

ನಾಪೋಕ್ಲು : ಸರಕಾರ ಹಾಗೂ ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ನಾಪೋಕ್ಲು ವ್ಯಾಪ್ತಿಯಲ್ಲಿ ಥರ್ಮಲ್ ಸ್ಕಿçÃನಿಂಗ್, ಸ್ಯಾನಿಟೈಸರ್, ಸಾಮಾಜಿಕ ಅಂತರದೊAದಿಗೆ ೯ರಿಂದ ಪದವಿವರೆಗಿನ ತರಗತಿಗಳನ್ನು ಆರಂಭಿಸಲಾಯಿತು. ಕೊರೊನಾ ಕಾರಣದಿಂದ ಸರಕಾರಿ ಮತ್ತು ಖಾಸಗಿ ಬಸ್‌ಗಳ ಓಡಾಟ ವಿರಳವಿರುವ ಕಾರಣದಿಂದ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ಎದುರಾಯಿತು. ಖಾಸಗಿ ವಿದ್ಯಾಸಂಸ್ಥೆಗಳು ತಮ್ಮ ಶಾಲಾ ವಾಹನಗಳ ಮೂಲಕ ಮಕ್ಕಳಿಗೆ ಸಂಚಾರದ ವ್ಯವಸ್ಥೆ ಕಲ್ಪಿಸಿದ್ದರು.

ಆರಂಭದ ದಿನದಂದು ನಾಪೋಕ್ಲು ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಶೇ.೭೫. ಪದವಿ ಪೂರ್ವ ಕಾಲೇಜಿನಲ್ಲಿ ಶೇ.೪೪. ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶೇ. ೭೦. ಬಲ್ಲಮಾವಟಿ ನೇತಾಜಿ ಪ್ರೌಢಶಾಲೆಯಲ್ಲಿ ಶೇ.೪೩. ಕಕ್ಕಬ್ಬೆ ಕೇಂದ್ರ ವಿದ್ಯಾ ಸಂಸ್ಥೆಯಲ್ಲಿ ಶೇ. ೮೦ ವಿದ್ಯಾರ್ಥಿಗಳು ತರಗತಿಗೆ ಹಾಜರಾದ ಬಗ್ಗೆ ತಿಳಿದು ಬಂದಿದೆ.ಸಿದ್ದಾಪುರ : ನೆಲ್ಲಿಹುದಿಕೇರಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲೆಯಲ್ಲಿ ಶಾಲೆ ಪ್ರಾರಂಭವಾಯಿತು. ಬೆಳಿಗ್ಗೆ ಮಕ್ಕಳನ್ನು ಶಿಕ್ಷಕರುಗಳು ಶಾಲೆಯ ಗೇಟ್‌ನ ಬಳಿ ನಿಂತು ಬರ ಮಾಡಿಕೊಂಡರು. ನಂತರ ಜ್ವರ ತಪಾಸಣೆ ಮಾಡಿ ಸ್ಯಾನಿಟೈಸರ್ ನೀಡಿ ತರಗತಿ ಒಳಗೆ ಬಿಡಲಾಯಿತು. ಪ್ರೌಢಶಾಲೆಯಲ್ಲಿ ೯ನೇ ತರಗತಿಯಲ್ಲಿ ೩೭ ಮಂದಿ ವಿದ್ಯಾರ್ಥಿಗಳು ಹಾಗೂ ೧೦ನೇ ತರಗತಿಗೆ ೨೦ ವಿದ್ಯಾರ್ಥಿಗಳು ಹಾಜರಾದರು. ಕಾಲೇಜು ವಿದ್ಯಾರ್ಥಿಗಳು ಕೂಡ ಕಾಲೇಜಿಗೆ ಹಾಜರಾಗಿದ್ದರು. ಕಾಲೇಜು ಹಾಗೂ ಪ್ರೌಢಶಾಲೆಗಳನ್ನು ೨ ದಿನಗಳಿಂದ ಸ್ವಚ್ಛಗೊಳಿಸಿ ಪಾಠ ಪ್ರವಚನಕ್ಕೆ ಸಿದ್ಧಗೊಳಿಸಲಾಗಿತ್ತು. ಕರಿಕೆ : ಇಲ್ಲಿನ ಸರ್ಕಾರಿ ಪ್ರೌಢಶಾಲೆ ಯಲ್ಲಿ ಪ್ರಾರಂಭ ದಿನದಂದು ಮಕ್ಕಳು ಸಂಭ್ರಮದಿAದ ಶಾಲೆಗೆ ಹಾಜರಾದರು.

೯ನೇ ತರಗತಿಯ ೩೦ ವಿದ್ಯಾರ್ಥಿಗಳಲ್ಲಿ ೧೫ ವಿದ್ಯಾರ್ಥಿಗಳು ಹಾಗೂ ೧೦ನೇ ತರಗತಿಯ ೩೬ ವಿದ್ಯಾರ್ಥಿಗಳಲ್ಲಿ ೨೪ ವಿದ್ಯಾರ್ಥಿಗಳು ಹಾಜರಾಗಿದ್ದರು. ಮಕ್ಕಳಿಗೆ ಉಚಿತ ಪಠ್ಯ ಪುಸ್ತಕಗಳನ್ನು ನೀಡಿ ಸ್ವಾಗತಿಸಲಾಯಿತು. ಪ್ರತೀ ಮಕ್ಕಳಿಗೂ ಥರ್ಮಲ್ ಸ್ಕಾನ್ ಮಾಡಲಾಯಿತು.

ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಕೊರೊನಾ ಬಗ್ಗೆ ಜಾಗೃತಿ ಮತ್ತು ಖಾತ್ರಿಪಡಿಸುವ ಸಲುವಾಗಿ ಶಾಲಾ ಗೋಡೆಗಳ ಮೇಲೆ ಕೊರೊನಾ ಜಾಗೃತಿ ಘೋಷಣಾ ಚೀಟಿಗಳನ್ನು ಪ್ರದರ್ಶಿಸಲಾಗಿದೆ. ಅಲ್ಲದೇ ಕೇರಳದಲ್ಲಿ ಕೊರೊನಾ ಹೆಚ್ಚಿರುವ ಹಿನ್ನೆಲೆಯಲ್ಲಿ ಮಕ್ಕಳನ್ನು ಕೇರಳ ಕಡೆಗೆ ಕಳುಹಿಸದಂತೆ ಪೋಷಕರಲ್ಲಿ ಮನವಿ ಮಾಡಲಾಯಿತು.