ಸೋಮವಾರಪೇಟೆ, ಸೆ. ೧೬: ರಾಷ್ಟಿçÃಯ ಶಿಕ್ಷಣ ನೀತಿ (ಎನ್.ಇ.ಪಿ.೨೦೨೦)ರ ಕುರಿತು ಮಾಹಿತಿ ಕಾರ್ಯಾಗಾರ ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಕನ್ನಡ ಉಪನ್ಯಾಸಕ ಬಿ.ಎಸ್. ದೇವರಾಜು ಮಾತನಾಡಿ, ಶಿಕ್ಷಣ ಕೇವಲ ಜ್ಞಾನಕ್ಕೆ ಮಾತ್ರ ಮೀಸಲಾಗಿರಬಾರದು; ನಾವು ಪಡೆಯುವ ಉದ್ಯೋಗಕ್ಕೆ ಪೂರಕವಾಗಿರಬೇಕು. ಬದುಕು ಕಟ್ಟಿಕೊಳ್ಳುವ ಮಾರ್ಗಗಳನ್ನೂ ಸಹ ಒದಗಿಸಬೇಕು. ಆ ನಿಟ್ಟಿನಲ್ಲಿ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಬೇಕಾಗಿದೆ. ರಾಷ್ಟಿçÃಯ ಶಿಕ್ಷಣ ನೀತಿಯು ಈ ರೀತಿಯ ಉದ್ಯೋಗಾಧಾರಿತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಹಲವು ಅಂಶಗಳನ್ನು ಒಳಗೊಂಡಿದೆ ಎಂದರು. ರಾಷ್ಟಿçÃಯ ಶಿಕ್ಷಣ ನೀತಿ ಕಾರ್ಯಪಡೆಯ ಸಂಚಾಲಕ ಎಂ.ಎಸ್. ಶಿವಮೂರ್ತಿ ಮಾತನಾಡಿ, ನಮಗೆ ಬದುಕನ್ನು ಕಟ್ಟಿಕೊಡುವ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಅಭ್ಯಾಸ ಮಾಡಿದಲ್ಲಿ ಮಾತ್ರ ಯಶಸ್ಸುಗಳಿಸಲು ಸಾಧ್ಯ. ಆದುದರಿಂದ ಎಲ್ಲರೂ ಗುರಿಯನ್ನಿರಿಸಿಕೊಂಡು ಅದನ್ನು ಮುಟ್ಟಲು ಮುಂದಾಗಬೇಕೆAದರು.

ರಾಷ್ಟಿçÃಯ ಶಿಕ್ಷಣ ನೀತಿಯಲ್ಲಿರುವ ಅಂಶಗಳು, ಅಧ್ಯಯನ ವಿಧಾನ, ಅದರಿಂದಾಗುವ ಪ್ರಯೋಜನಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಹೆಚ್.ಎನ್. ರಾಜು, ರಾಜ್ಯಶಾಸ್ತç ಸಹಾಯಕ ಪ್ರಾಧ್ಯಾಪಕರಾದ ಕೆ.ಹೆಚ್. ಧನಲಕ್ಷಿö್ಮ, ಉಪನ್ಯಾಸಕರುಗಳು ಪಾಲ್ಗೊಂಡಿದ್ದರು.