ನಾಪೋಕ್ಲು, ಸೆ. ೧೬: ನಾಪೋಕ್ಲುವಿನ ಬಾವಲಿ ಗ್ರಾಮದ ಬಿದ್ದಂಡ ಕಾಲೋನಿಗೆ ದಲಿತ ಸಂಘರ್ಷ ಸಮಿತಿ ಭೇಟಿ ಮಾಡಿ ಸಭೆ ನಡೆಸಿತು.

ಜಿಲ್ಲಾ ಸಂಚಾಲಕ ದಿವಾಕರ್ ಅವರು ಸಂಘಟನೆಯ ಮುಖ್ಯ ಉದ್ದೇಶ ಮತ್ತು ಸಂಘಟನೆಯ ಅವಶ್ಯಕತೆ ಬಗ್ಗೆ ಮಾತನಾಡಿದರೆ ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ ಅವರು ಸರ್ಕಾರದ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಊರಿನ ಜನರು ಸಂಘಟನೆಯ ಪ್ರಾಥಮಿಕ ಸದಸ್ಯತ್ವ ಸ್ವೀಕಾರ ಮಾಡಿ ನಾಪೋಕ್ಲುವಿನಲ್ಲಿ ಹೋಬಳಿ ಮಟ್ಟದ ಕಾರ್ಯಕ್ರಮ ಮಾಡಿ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಮತ್ತು ಕ್ರೀಡಾಪಟುಗಳಿಗೆ ಸನ್ಮಾನ ಮಾಡುವುದಾಗಿ ತೀರ್ಮಾನಿಸಲಾಯಿತು.