ಪೆರಾಜೆ, ಸೆ. ೧೭: ಕೊಡಗು ಜಿಲ್ಲಾ ಹಿಂದೂ ಜಾಗರಣ ವೇದಿಕೆಯ ಪೆರಾಜೆ ಘಟಕದ ಅಧ್ಯಕ್ಷರಾಗಿ ಲಿಂಗರಾಜನಮನೆ ರಂಜಿತ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸಚಿನ್ ಅಡ್ತಲೆ ಆಯ್ಕೆಯಾಗಿದ್ದಾರೆ. ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಕಿಶೋರ್ ಪೀಚೆಮನೆ ಮತ್ತು ಜಯರಾಮ್ ಪಿ.ಟಿ. ಪೆರಾಜೆ, ಕಾರ್ಯದರ್ಶಿಗಳಾಗಿ ಪ್ರಮೋದ್ ಮಜಿಕೋಡಿ, ನೋಹಿತ್ ನಿಡ್ಯಮಲೆ ಆಯ್ಕೆಯಾದರು. ಆಯ್ಕೆ ಸಂದರ್ಭ ಸಂಘಟನೆಯ ಮಡಿಕೇರಿ ತಾಲೂಕು ಅಧ್ಯಕ್ಷ ಬೆಳ್ಯಪ್ಪ ಮಡಿಕೇರಿ ನೂತನ ಪದಾಧಿಕಾರಿಗಳ ಜವಾಬ್ದಾರಿಗಳನ್ನು ಘೋಷಣೆ ಮಾಡಿದರು.
ಈ ಸಂದರ್ಭ ಸಂಘಟನಾ ಕಾರ್ಯದರ್ಶಿ ಮಹೇಶ್ ಕಡಗದಾಳು, ಜಿಲ್ಲಾ ಪ್ರಚಾರ್ ಪ್ರಮುಖ್ ಕುಮಾರ್, ಮಡಿಕೇರಿ ತಾಲೂಕು ಕಾರ್ಯದರ್ಶಿ ಚೇತನ್, ಸೇರಿದಂತೆ ಹಿಂ.ಜಾ. ವೇದಿಕೆಯ ಸದಸ್ಯರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮನೋಜ್ ಕುಂಟಿಕಾನ ಸ್ವಾಗತಿಸಿ, ಸೀತಾರಾಮ ಕದಿಕಡ್ಕ ವಂದಿಸಿದರು,