ಮಡಿಕೇರಿ, ಸೆ. ೧೭: ನಂಜನಗೂಡಿನ ಹರದ ಹಳ್ಳಿಯ ದೇಗುಲ ಧ್ವಂಸ ಮಾಡಿದ ಪ್ರಕರಣವನ್ನು ಕೊಡಗು ಜಿಲ್ಲಾ ಬ್ರಾಹ್ಮಣ ಅರ್ಚಕರ ಸಂಘ ಖಂಡಿಸಿದೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಸಂಘದ ಮೂಲಕ ಪೊನ್ನಂಪೇಟೆ ತಹಶೀಲ್ದಾರ್ ಕಚೇರಿ ಮೂಲಕ ಮನವಿ ಸಲ್ಲಿಸಲಾಯಿತು. ಈ ದೇವಾಲಯವನ್ನು ತಕ್ಷಣ ಪುನರ್‌ನಿರ್ಮಾಣ ಮಾಡಬೇಕು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯಬಾರದು ಎಂದು ಸಂಘ ಒತ್ತಾಯಿಸಿದೆ.

ಸಂಘದ ಅಧ್ಯಕ್ಷ ಕೆ.ಎಸ್. ಶಿವಪ್ರಸಾದ್, ಕಾರ್ಯದರ್ಶಿ ನಾಗೇಶ್ ಭಾರದ್ವಾಜ್, ಸದಸ್ಯರಾದ ರಾಘವೇಂದ್ರ, ಸುಂದರೇಶ್, ಲೋಹಿತ್ ರಾವ್, ಮೋಹನ್, ಅಶೋಕ್ ಮನವಿ ಸಲ್ಲಿಸಿದರು.