ಪೊನ್ನಂಪೇಟೆ, ಸೆ. ೧೬: ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ಕಳೆದ ಒಂದು ವಾರದಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಸಲಾದ ‘ಜೆಸಿಐ ಸಪ್ತಾಹ-೨೦೨೧'ಕ್ಕೆ ಸಮಾರೋಪ ಸಮಾರಂಭದ ಮೂಲಕ ತೆರೆ ಎಳೆಯಲಾಯಿತು.
ಸಪ್ತಾಹದ ಸಮಾರೋಪ ಸಮಾರಂಭದ ಅಂಗವಾಗಿ ಘಟಕದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಅತ್ಯುತ್ತಮ ಯುವ ವ್ಯಕ್ತಿ (ಓ.ವೈ.ಪಿ.) ಪ್ರಶಸ್ತಿಯನ್ನು ಅಂರ್ರಾಷ್ಟಿçÃಯ ರಗ್ಬಿ ಆಟಗಾರರಾದ ವೀರಾಜಪೇಟೆಯ ಮಾದಂಡ ಪಿ. ತಿಮ್ಮಯ್ಯ ಅವರಿಗೆ ಪ್ರದಾನ ಮಾಡಲಾಯಿತು. ವೀರಾಜಪೇಟೆಯ ಪ್ರಗತಿ ಶಾಲಾ ಸಭಾಂಗಣದಲ್ಲಿ ಘಟಕದ ವತಿಯಿಂದ ನಡೆದ ಜೆಸಿಐ ಸಪ್ತಾಹ-೨೦೨೧ರ ಸಮಾರೋಪ ಸಮಾರಂಭದಲ್ಲಿ ಮಾದಂಡ ಪಿ. ತಿಮ್ಮಯ್ಯ ಅವರು ಓ.ವೈ.ಪಿ. ಪ್ರಶಸ್ತಿಯನ್ನು ಸ್ವೀಕರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷ ಎಂ.ಎನ್. ವನಿತ್ಕುಮಾರ್ ಮಾತನಾಡಿ, ರಗ್ಬಿ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡ ಎಂ.ಪಿ. ತಿಮ್ಮಯ್ಯ ರಗ್ಬಿ ಕ್ರೀಡೆಯ ಘನತೆ ಮತ್ತು ಮಹತ್ವವನ್ನು ಕೊಡಗು ಜಿಲ್ಲೆಗೆ ಪರಿಚಯಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನಿಗದಿತ ಕ್ಷೇತ್ರವೊಂದರಲ್ಲಿ ಅಸಾಧಾರಣ ಸಾಧನೆ ಮಾಡಿರುವ ೧೮ ರಿಂದ ೪೦ ವರ್ಷದೊಳಗಿನ ಜೇಸಿಯೇತರ ಯುವ ಸಾಧಕರನ್ನು ಗುರುತಿಸುವ ಜೆಸಿಐ ಭಾರತದ ಮಾರ್ಗಸೂಚಿಯ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಓ.ವೈ.ಪಿ. ಪ್ರಶಸ್ತಿಗೆ ತಿಮ್ಮಯ್ಯ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ವನಿತ್ ಕುಮಾರ್ ಪ್ರತಿವರ್ಷ ಸೆಪ್ಟಂಬರ್ ೯ ರಿಂದ ೧೫ ರವರೆಗೆ ದೇಶದಾದ್ಯಂತ ಏಕಕಾಲಕ್ಕೆ ಈ ಸಪ್ತಾಹವನ್ನು ಆಚರಿಸುತ್ತದೆ. ಈ ಹಿನ್ನೆಲೆಯಲ್ಲಿ ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ಸಪ್ತಾಹದ ಅಂಗವಾಗಿ ಕಳೆದ ೭ ದಿನಗಳಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ದೇಶದ ವಿವಿಧೆಡೆ ಸಾಕಷ್ಟು ಕ್ರೀಡಾಕೂಟವನ್ನು ಆಯೋಜಿಸುವಲ್ಲಿ ಎಂ.ಪಿ. ತಿಮ್ಮಯ್ಯ ಅವರು ನಿರ್ವಹಿಸಿದ ಪಾತ್ರ ಪ್ರಮುಖವಾದದ್ದು. ರಗ್ಬಿ ಕ್ರೀಡೆಗೆ ತಿಮ್ಮಯ್ಯ ಅವರ ಕೊಡುಗೆ ಅಪಾರವಾದದ್ದು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಎಂ.ಪಿ. ತಿಮ್ಮಯ್ಯ, ನಿರಂತರ ಪರಿಶ್ರಮ, ಬದ್ಧತೆ ಮತ್ತು ವೃತ್ತಿ ನಿಷ್ಠೆಯನ್ನು ಪ್ರಾಮಾಣಿಕವಾಗಿ ಮೈಗೂಡಿಸಿಕೊಂಡರೆ ಯಶಸ್ಸು ಖಂಡಿತ ಸಾಧ್ಯ. ಛಲ, ಆತ್ಮವಿಶ್ವಾಸ ಮತ್ತು ಗುರಿಯನ್ನು ಭದ್ರಪಡಿಸಿಕೊಂಡರೆ ಪ್ರತಿಯೊಬ್ಬರೂ ಸಾಧಕರಾಗಬಹುದು ಎಂದು ಅಭಿಪ್ರಾಯಪಟ್ಟರಲ್ಲದೆ, ಯಾವುದೇ ಲಾಬಿ ನಡೆಸದೆ, ಶಿಫಾರಸುಗಳ ಒತ್ತಡವಿಲ್ಲದೆ ದೊರೆಯುವ ಪ್ರಶಸ್ತಿ-ಪುರಸ್ಕಾರಗಳು ಹೆಚ್ಚು ಮೌಲ್ಯಯುತವಾದದ್ದು. ಇದರಿಂದ ಸಾಧಿಸುವ ಛಲ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಘಟಕದ ಕೋಶಾಧಿಕಾರಿ ಕುಪ್ಪಂಡ ದಿಲನ್ ಬೋಪಣ್ಣ, ಯೋಜನಾ ನಿರ್ದೇಶಕರಾದ ಎನ್.ಜಿ. ಸುರೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ವಕೀಲ ಎಂ.ಎಸ್. ಪೂವಯ್ಯ, ಜೆಸಿಐ ಭಾರತದ ವಲಯ ೧೪ರ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ನಿರ್ದೇಶಕ ರಫೀಕ್ ತೂಚಮಕೇರಿ, ವೀರಾಜಪೇಟೆ ಕಾವೇರಿ ಕಾಲೇಜಿನ ಉಪನ್ಯಾಸಕ ಸೋಮಣ್ಣ, ಸಪ್ತಾಹದ ಸಂಯೋಜಕ ಎಂ.ಪಿ. ಬೋಪಣ್ಣ, ಪಿ.ಬಿ. ಗೌತಮ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆರಂಭದಲ್ಲಿ ಕೆ.ಎಸ್. ಬೋಪಣ್ಣ ಜೇಸಿವಾಣಿ ವಾಚಿಸಿದರು. ವನಿತ್ ಕುಮಾರ್ ಸ್ವಾಗತಿಸಿದರು. ಸುರೇಶ್ ಅವರು ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು.