ಮಡಿಕೇರಿ, ಸೆ. ೧೭: ನದಿ ಸೇರಿದಂತೆ ಹೊಳೆಗಳಲ್ಲಿ ತುಂಬಿರುವ ಹೂಳು ತೆಗೆಯಲು ಕ್ರಮವಹಿಸುವಂತೆ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಅಧಿವೇಶನದಲ್ಲಿ ಒತ್ತಾಯಿಸಿದರು.

ಕಾವೇರಿ ಹಾಗೂ ಹಾರಂಗಿ ಜಲಾನಯನ ಪ್ರದೇಶದ ಕೆಲವೆಡೆ ಮಾತ್ರ ಹೂಳು ತೆಗೆಯಲು ಕ್ರಮವಹಿಸಲಾಗಿದೆ. ಹಲವೆಡೆ ಹೂಳು ತುಂಬಿದ ಪರಿಣಾಮ ಮಳೆಗಾಲದಲ್ಲಿ ನೀರು ಕೃಷಿ ಭೂಮಿಗೆ ನುಗ್ಗಿ ನಷ್ಟ ಉಂಟು ಮಾಡಿದೆ. ಈ ಹಿನ್ನೆಲೆ ಚಿಕ್ಕಪುಟ್ಟ ನದಿಗಳಲ್ಲಿ ಹೂಳು ತೆಗೆಯಲು ಸರಕಾರ ಮುಂದಾಗಬೇಕೆAದು ಗಮನ ಸೆಳೆದರು.

ಈ ಬಗ್ಗೆ ಉತ್ತರಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ, ಕಾವೇರಿ ನದಿ ಪಾತ್ರದಲ್ಲಿ ಕುಶಾಲನಗರದ ಕೊಪ್ಪ ಸೇತುವೆ ಬಳಿ ನೀರಿನ ಹರಿವಿಗೆ ಅಡಚಣೆಯಾಗಿದ್ದ ಸ್ಥಳಗಳಲ್ಲಿ ಜೊಂಡು ಹಾಗೂ ಮಣ್ಣು ಮಿಶ್ರಿತ ಹೂಳು ತೆಗೆಯುವ ಕಾಮಗಾರಿಯನ್ನು ಎನ್.ಡಿ.ಆರ್.ಎಫ್. ಮೂಲಕ ರೂ. ೮೭.೯೨ ಲಕ್ಷ ಕೈಗೊಂಡು ಪೂರ್ಣಗೊಳಿಸಲಾಗಿದೆ.

ಭಾಗಮಂಡಲದಿAದ ನದಿಯ ನೀರಿನ ಹರಿವಿಗೆ ಅಡಚಣೆಯಾಗಿರುವ ಗಿಡಗಂಟಿಗಳು ಮತ್ತು ಜೊಂಡನ್ನು ತೆಗೆಯಲು ಕ್ರಮವಹಿಸಲಾಗಿದೆ. ಹಾರಂಗಿ ಜಲಾನಯನ ಪ್ರದೇಶ ಮತ್ತು ನದಿ ಪಾತ್ರದ ಪುನಶ್ಚೇತನ ಹಾಗೂ ರಕ್ಷಣಾ ಕಾಮಗಾರಿಯು ರೂ. ೧೩೦ ಕೋಟಿಗಳ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಈ ಪೈಕಿ ಪ್ರಸಕ್ತ ಸಾಲಿನ ಕಾರ್ಯಕ್ರಮ ಪಟ್ಟಿಯಲ್ಲಿ ರೂ. ೨೫ ಕೋಟಿಗಳ ಅನುದಾನ ಒದಗಿಸಲಾಗಿದೆ. ಉಳಿದ ವಿಚಾರದ ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ಮಾಹಿತಿ ನೀಡಿದರು.

ಮರಳು ಮಾರಾಟಕ್ಕೆ ಕ್ರಮವಹಿಸಿ

ನದಿ, ಹೊಳೆಗಳಲ್ಲಿ ಹೂಳು ತೆಗೆದು ಸಂಗ್ರಹವಾಗುವ ಮರಳು ಮಾರಾಟಕ್ಕೆ ಕ್ರಮವಹಿಸುವಂತೆ ವೀಣಾ ಅಚ್ಚಯ್ಯ ಸಲಹೆ ನೀಡಿದರು. ಜಿಲ್ಲೆಯಲ್ಲಿ ಮರಳಿನ ಕೊರತೆ ಇದೆ. ಜೊತೆಗೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಈ ಕ್ರಮ ಅಗತ್ಯವಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.

ಸಚಿವ ಗೋವಿಂದ ಕಾರಜೋಳ ಅವರು, ಇದು ಉತ್ತಮ ಸಲಹೆಯಾಗಿದ್ದು, ಸಂಬAಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು