ಕೂಡಿಗೆ, ಸೆ. ೧೭: ಕುಶಾಲನಗರ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಗೌರಿ ಗಣೇಶ ಹಬ್ಬದ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿಯು ಕೂಡಿಗೆ ಡಯಟ್ ಮೈದಾನದಲ್ಲಿ ನಡೆಯಿತು.
ಪಂದ್ಯಾವಳಿಯಲ್ಲಿ ಕುಶಾಲನಗರ ವಲಯದ ಕೂಡಿಗೆ, ಸುಂಟಿಕೊಪ್ಪ. ಕುಶಾಲನಗರ ವಿದ್ಯುತ್ ಗುತ್ತಿಗೆದಾರರ ಸಂಘದ ತಂಡ ಸೇರಿದಂತೆ ೫ ತಂಡಗಳು ಭಾಗವಹಿಸಿದ್ದವು. ಸುಂಟಿಕೊಪ್ಪ ತಂಡ ಪ್ರಥಮ, ಕುಶಾಲನಗರ ಬಿ ತಂಡ
ದ್ವಿತೀಯ, ಕೂಡಿಗೆ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.
ಕುಶಾಲನಗರ ಸಹಾಯಕ ಇಂಜಿನಿಯರ್ ವಿನಯ ಕುಮಾರ್, ಮಡಿಕೇರಿಯ ಕೇಂದ್ರ ಕಾರ್ಯಕಾರಿ ಸಮಿತಿಯ ಕೃಷ್ಣರಾಜ್, ಸುಂಟಿಕೂಪ್ಪ ವಲಯ ಇಂಜಿನಿಯರ್ ಲವಕುಮಾರ್, ಕುಶಾಲನಗರ ವಲಯ ಇಂಜಿನಿಯರ್ ರಾಣಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.