ವೀರಾಜಪೇಟೆ, ಸೆ.೧೭: ಕೊಡಗು ಜಿಲ್ಲೆಯ ಪ್ರಮುಖ ಇಸ್ಲಾಮೀ ವಿದ್ವಾಂಸ, ಸಂಘಟಕ, ಹಲವು ಧಾರ್ಮಿಕ ಶಿಕ್ಷಣ ಸಂಸ್ಥೆಗಳ ರೂವಾರಿ, ಕೆ.ಎ.ಮಹಮೂದ್ ಮುಸ್ಲಿಯಾರ್ ಎಡಪ್ಪಲ(೭೭) ಶುಕ್ರವಾರ ಮಧ್ಯಾಹ್ನ ದೈವಾಧೀನರಾದರು. ದೀರ್ಘಕಾಲದಿಂದ ಅನಾರೋಗ್ಯ ಪೀಡಿತರಾಗಿದ್ದ ಉಸ್ತಾದ್ರವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಕೊಡಗು ಜಿಲ್ಲಾ ನಾಯಿಬ್ ಖಾಝಿ, ಜಂಇಯತುಲ್ ಉಲಮಾ ರಾಜ್ಯ ಪ್ರಧಾನ ಕಾರ್ಯದರ್ಶಿ, ಕೊಟ್ಟಮುಡಿ ಮರ್ಕಝುಲ್ ಹಿದಾಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ಎಡಪ್ಪಲ ಸಮೀಪದ ಕಿಕ್ಕರೆ ಅಬ್ದುಲ್ ಖಾದರ್ ಹಾಗೂ ಅಸ್ಮಾ ದಂಪತಿ ಪುತ್ರ ಮಹಮೂದ್ರವರು ಪ್ರಾಥಮಿಕ ಶಿಕ್ಷಣ ಕೊಡಗಿನಲ್ಲಿ ಪಡೆದ ನಂತರ ಜಿಲ್ಲೆಯ ಕೊಂಡAಗೇರಿ, ಕೇರಳದ ತಲಚೇರಿ, ತಳಿಪರಂಬು, ಪಾಪಿನಿಶೇರಿಗಳಲ್ಲಿ ಧಾರ್ಮಿಕ ಶಿಕ್ಷಣವನ್ನು ಪಡೆದರು. ೧೯೬೩ರಿಂದ ಜಿಲ್ಲೆಯ ನಾಪೋಕ್ಲು ಎಡಪಾಲ, ಮೂರ್ನಾಡು, ವೀರಾಜಪೇಟೆ, ಎಮ್ಮೆಮಾಡು ಅಲ್ಲದೆ ಮೈಸೂರಿನಲ್ಲಿ ಮುರ್ರಿಸ್ ಹಾಗೂ ಖತೀಬರಾಗಿ ಸೇವೆ ಸಲ್ಲಿಸಿದ್ದಾರೆ. ಕೊಡಗು ಜಿಲ್ಲೆಯ ಖತೀಬರನ್ನು ಒಟ್ಟುಗೂಡಿಸಿ “ಜಂಇಯತುಲ್ ಖುತ್ಬಾ”, ೧೯೭೦ರಲ್ಲಿ ಕೂರ್ಗ್ ಮುಸ್ಲಿಮ್ ಅಸೋಸಿಯೇಷನ್, ೧೯೭೨ರಲ್ಲಿ ಕೂರ್ಗ್ ಜಿಲ್ಲಾ ಜಂಇಯತುಲ್ ಉಲಮಾ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಕೊಡಗು ಜಿಲ್ಲೆಗೆ ಪ್ರತ್ಯೇಕ ಮದ್ರಸಾ ಪಠ್ಯಕ್ರಮ ರೂಪಿಸುವುದಕ್ಕಾಗಿ “ಕೊಡಗು ಜಿಲ್ಲಾ ಇಸ್ಲಾಮ್ ವಿದ್ಯಾಭ್ಯಾಸ ಸಂಸ್ಥೆ” ಎಂಬ ಹೆಸರಿನಲ್ಲಿ ಶೈಕ್ಷಣಿಕ ಮಂಡಳಿಯನ್ನು ಸ್ಥಾಪಿಸಿದ್ದರು.
ಅಪರಾಹ್ನ ಮೃತರ ಅಂತ್ಯಸAಸ್ಕಾರ ಎಡಪಾಲ ಕಿಕ್ಕರೆ ಜುಮಾ ಮಸ್ಜಿದ್ನಲ್ಲಿ ನಡೆಯಿತು. ಜನಾಝ ನಮಾಝ್ಗೆ ಸುಲ್ತಾನುಲ್ ಉಲಮಾ ಎ. ಪಿ.ಉಸ್ತಾದ್ ನೇತೃತ್ವ ನೀಡಿದರು.
ಸಂತಾಪ : ಕೊಡಗು ಜಿಲ್ಲೆಯ ಪ್ರಮುಖ ಧಾರ್ಮಿಕ ವಿದ್ವಾಂಸ, ಸಂಘಟಕ ಕೆ.ಎ.ಮಹಮೂದ್ ಮುಸ್ಲಿಯಾರ್ ರವರ ನಿಧನಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ಕೊಡಗು ಜಿಲ್ಲಾ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕೆ.ಎ. ಯಾಕೂಬ್, ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಎಂ.ಕೆ. ಮನ್ಸೂರ್ ಆಲಿ, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ನಾಪೋಕ್ಲು ಯುವ ಕಾಂಗ್ರೆಸ್ ಅಧ್ಯಕ್ಷ ಪರವಂಡ ಸಿರಾಜ್ ಸಂತಾಪ ಸೂಚಿಸಿದ್ದಾರೆ.