ಕಣಿವೆ, ಸೆ. ೧೬: ಹಟ್ಟಿಹೊಳೆಯಿಂದ ಸೂರ್ಲಬ್ಬಿಗೆ ತೆರಳುವ ಮಾರ್ಗ ಮಧ್ಯೆ ಸಿಗುವ ಆವಂಡಿ ಫಾಲ್ಸ್ ಮುಂಬದಿಯ ನದಿಯ ಅಂಚಿನಲ್ಲಿ ಇರುವ ಸ್ವಾಭಾವಿಕವಾದ ಕಲ್ಲು, ಕಾರೊಂದರAತೆ ನೋಡುಗರಿಗೆ ಭಾಸವಾಗುತ್ತದೆ.
ಕಾರಿನ ಮುಂಬದಿಯಲ್ಲಿರುವ ವಿಶಾಲವಾದ ಜಾಗ, ಹಾಗೆಯೇ ಕಾರಿನ ಮುಂಬದಿಯಲ್ಲಿ ಇರುವ ಲೈಟುಗಳು, ಹಾಗೆಯೇ ಎತ್ತರಿಸಿದಂತಿರುವ ಕಾರಿನ ಮಧ್ಯ ಭಾಗ ಎಲ್ಲವನ್ನು ಈ ಕಲ್ಲು ಬಂಡೆ ಹೋಲುತ್ತದೆ.
ಫಾಲ್ಸ್ ಮುಂಬದಿಯ ಹಳೆಯ ಸೇತುವೆ ಮೇಲೆ ನಿಂತಾಗ ನದಿಯ ಎಡದಂಡೆಯ ನೀರಿನೊಳಗೆ ಇರುವ ಈ ಕಲ್ಲು ನೋಡುಗರನ್ನು ಆಕರ್ಷಿಸುತ್ತದೆ.