ಕೂಡಿಗೆ, ಸೆ. ೧೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮಕ್ಕೆ ಭೇಟಿ ನೀಡಿದ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್ ಹದಗೆಟ್ಟ ಭುವನಗಿರಿ-ಸೀಗೆಹೊಸೂರು ರಸ್ತೆಯನ್ನು ಪರಿಶೀಲನೆ ಮಾಡಿದರು.
ಈ ಸಂದರ್ಭ ಸ್ಥಳದಲ್ಲಿದ್ದ ಗ್ರಾಮದ ರೈತರು ರಸ್ತೆ ಸಮಸ್ಯೆಯಿಂದ ಉಂಟಾಗಿರುವ ಅನಾನುಕೂಲತೆಗಳನ್ನು ವಿವರಿಸಿದರು. ಕೂಡಲೆ ರಸ್ತೆಯನ್ನು ಸರಿಪಡಿಸಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಹೇಂದ್ರ ಕುಮಾರ್, ಅನುದಾನ ಕೊರತೆಯಿಂದ ರಸ್ತೆ ಅಭಿವೃದ್ದಿ ಕಷ್ಟಸಾಧ್ಯ. ಅಗತ್ಯ ಅನುದಾನ ಲಭಿಸಿದಲ್ಲಿ ರಸ್ತೆ ಅಭಿವೃದ್ದಿಗೆ ಕ್ರಮಕೈಗೊಳ್ಳಲಾಗುವುದು ಎಂದರು. ಸಂಬAಧಿಸಿದ ಗ್ರಾ.ಪಂ. ಕಾಳಜಿ ವಹಿಸಿದಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸಲು ಸಾಧ್ಯ ಎಂದರು. ಇದರಿಂದ ಸಮಾಧಾನಗೊಳ್ಳದ ರೈತರ ನಿಯೋಗ ಕುಶಾಲನಗರದಲ್ಲಿರುವ ಹಾರಂಗಿ ಯೋಜನಾ ವೃತ್ತದ ಕಚೇರಿಗೆ ತೆರಳಿ ರಸ್ತೆ ದುರಸ್ಥಿಗೆ ಒತ್ತಾಯಿಸಿ ಅಧೀಕ್ಷಕ ಅಭಿಯಂತರ ಚನ್ನಕೇಶವ ಅವರಿಗೆ ಮನವಿ ಸಲ್ಲಿಸಿತು.
ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧೀಕ್ಷಕ ಅಭಿಯಂತರ ಚನ್ನಕೇಶವ ಭರವಸೆ ನೀಡಿದರು.
ಈ ಸಂದರ್ಭ ಕೂಡಿಗೆ ಗ್ರಾ.ಪಂ. ಸದಸ್ಯ ಅನಂತ್, ಗ್ರಾಮದ ರೈತರಾದ ದೀಪು ಬಸವರಾಜು, ನಾಗರಾಜ್, ಮೋಹನ್, ಗೌರಮ್ಮ ಮತ್ತಿತರರು ಇದ್ದರು.