ಮಡಿಕೇರಿ, ಸೆ. ೧೫: ಜಿಲ್ಲೆಯಲ್ಲಿ ಇದುರೆಗೆ ಒಟ್ಟು ೩೫ ಕೋವಿಡ್ ರೂಪಾಂತರಿ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕು ತಗುಲಿದ ಎಲ್ಲರೂ ಗುಣಮುಖರಾಗಿರು ವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಅವರು ಮಾಹಿತಿ ನೀಡಿದ್ದಾರೆ. ಜಿಲ್ಲೆಯ ಜನತೆ ರೂಪಾಂತರಿ ವೈರಸ್ ಬಗ್ಗೆ ಯಾವುದೇ ರೀತಿಯ ಆತಂಕ ಪಡುವುದು ಅಗತ್ಯವಿಲ್ಲ ಎಂದು ಕೂಡ ಅವರು ತಿಳಿಸಿದ್ದಾರೆ.

ಮೇ ತಿಂಗಳಿನಲ್ಲಿ ಒಟ್ಟು ೬೭ ಕೋವಿಡ್ ಪಾಸಿಟಿವಿಟಿ ಪ್ರಕರಣಗಳ ಮಾದರಿಗಳನ್ನು Whoಟe ಉeಟಿome Sequeಟಿಛಿiಟಿg (WಉS) ಪರೀಕ್ಷೆಗೆ ಬೆಂಗಳೂರಿನ ನಿಮಾನ್ಸ್ಗೆ ಕಳುಹಿಸಿದ್ದು, ಪರೀಕ್ಷೆಯ ನಂತರ ವರದಿಗಳು ಜಿಲ್ಲಾ ಆರೋಗ್ಯ ಇಲಾಖೆಗೆ ಲಭ್ಯವಾಯಿತು. ಈ ಪೈಕಿ ಜುಲೈವರೆಗೆ ರೂಪಾಂತರ ತಳಿಯ ಒಟ್ಟು ೧೬ ಪ್ರಕರಣಗಳು ಹಾಗೂ ಆಗಸ್ಟ್ನಿಂದ ಸೆಪ್ಟೆಂಬರ್‌ವರೆಗೆ ಒಟ್ಟು ೧೯ ಪ್ರಕರಣಗಳು ಪತ್ತೆಯಾಗಿರು ವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆ ತಿಳಿಸಿದೆ. ಈಗಾಗಲೇ ಎಲ್ಲರೂ ಗುಣಮುಖರಾಗಿದ್ದು ಯಾವುದೇ ರೀತಿಯ ಆತಂಕ ಪಡುವುದು ಅಗತ್ಯವಿಲ್ಲ ಎಂದು ಡಾ.ವೆಂಕಟೇಶ್ ಅವರು ಸ್ಪಷ್ಟಪಡಿಸಿದ್ದಾರೆ.