ಮಡಿಕೇರಿ, ಸೆ. ೧೫: ತಾ. ೧೫ ರವರೆಗೆ ಮಡಿಕೇರಿ - ಚೆಟ್ಟಳ್ಳಿ ಮತ್ತು ಮಡಿಕೇರಿ - ಸಂಪಾಜೆ ರಸ್ತೆಗಳಲ್ಲಿ ವಾಹನಗಳ ನೋಂದಣಿ ತೂಕ ೧೬,೨೦೦ ಕೆ.ಜಿ.ಗೂ ಅಧಿಕ ನೋಂದಣಿ ತೂಕದ ಸರಕು ಸಾಗಾಣಿಕೆ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶಿಸಲಾಗಿತ್ತು.
ರಸ್ತೆಗಳ ನಿರ್ವಹಣೆ ಮತ್ತು ದುರಸ್ತಿ ಕಾರ್ಯ ಮುಂದುವರಿಯಲಿದ್ದು, ದುರಸ್ತಿ ಕಾರ್ಯ ಮುಕ್ತಾಯಗೊಳಿಸಲು ಕಾಲಾವಕಾಶ ಬೇಕಾಗಿರುವುದರಿಂದ ತಾ. ೩೦ ರವರೆಗೆ ಭಾರೀ ವಾಹನಗಳ ನಿಷೇಧಾಜ್ಞೆಯನ್ನು ಮುಂದುವರೆಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.