ಮಡಿಕೇರಿ, ಸೆ. ೧೫: ಇಲ್ಲಿನ ಫೀ.ಮಾ. ಕಾರ್ಯಪ್ಪ ಕಾಲೇಜು ಬಳಿ ಇರುವ ಬಾಲಕಿಯರ ಬಾಲಮಂದಿರದ ವಿದ್ಯಾರ್ಥಿನಿಯರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಬಾಲಮಂದಿರದಲ್ಲಿರುವ ೪೫ ವಿದ್ಯಾರ್ಥಿನಿಯರ ಪೈಕಿ ೩೫ ಮಂದಿಯಲ್ಲಿ ಪಾಸಿಟಿವ್ ಕಂಡುಬAದಿದೆ.

ಬಾಲಮAದಿರದಲ್ಲಿರುವ ವಿದ್ಯಾರ್ಥಿನಿಯರ ಪೈಕಿ ಈರ್ವರು ವಿದ್ಯಾರ್ಥಿನಿಯರು ೧೮ ವರ್ಷ ಮೇಲ್ಪಟ್ಟವರಾದ್ದರಿಂದ ಅವರುಗಳನ್ನು ಮೈಸೂರಿನಲ್ಲಿರುವ ರಾಜ್ಯ ಮಹಿಳಾ ನಿಲಯಕ್ಕೆ ಕಳುಹಿಸಿ ಕೊಡಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ನಿಯಮಾನುಸಾರ ಕೋವಿಡ್ ಪರೀಕ್ಷೆಗೊಳಪಡಿಸಿದಾಗ ಒಬ್ಬಾಕೆಯಲ್ಲಿ ಪಾಸಿಟಿವ್ ಕಂಡುಬAದಿದೆ. ಇದರಿಂದಾಗಿ ಇನ್ನುಳಿದ ಎಲ್ಲ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳನ್ನು ಪರೀಕ್ಷೆಗೊಳಪಡಿಸಲಾಗಿ ಇನ್ನು ೩೪ ಮಂದಿಯಲ್ಲಿ ಪಾಸಿಟಿವ್ ಕಂಡುಬAದಿದೆ. ಆದರೆ ಸಿಬ್ಬಂದಿಗಳಿಗೆ ನೆಗೆಟಿವ್ ಬಂದಿದೆ.

ಇದೀಗ ಪಾಸಿಟಿವ್ ಬಂದಿರುವ ೩೫ ವಿದ್ಯಾರ್ಥಿನಿಯರನ್ನು ಒಂದು ಕಡೆಯಲ್ಲಿ ಹಾಗೂ ಇನ್ನುಳಿದ ನೆಗೆಟಿವ್ ಬಂದಿರುವ ೮ ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿರಿಸಿ ಆರೈಕೆ ಮಾಡಲಾಗುತ್ತಿದೆ. ಇನ್ನಿಬ್ಬರು ವಿದ್ಯಾರ್ಥಿನಿಯರನ್ನು ಪರೀಕ್ಷೆಗೊಳಪಡಿಸುವ ಮುನ್ನವೇ ಪೋಷಕರು ಮನೆಗೆ ಕರೆದೊಯ್ದಿದ್ದಾರೆ. ಮಕ್ಕಳಲ್ಲಿ ಕೋವಿಡ್‌ನ ಯಾವುದೇ ಲಕ್ಷಣಗಳು ಇಲ್ಲವೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಅರುಂದತಿ ಅವರು ತಿಳಿಸಿದ್ದಾರೆ. ಸೋಂಕು ದೃಢಪಟ್ಟ ಹಾಗೂ ಇನ್ನೊಬ್ಬಾಕೆ ವಿದ್ಯಾರ್ಥಿನಿ ಕಾಲೇಜಿಗೆ ಹಾಗೂ ವ್ಯಾಜ್ಯ ಸಂಬAಧ ನ್ಯಾಯಾಲಯಗಳಿಗೆ ಹಾಜರಾಗಿದ್ದು, ಸೋಂಕು ಹೇಗೆ ಹರಡಿದೆ ಎಂದು ತಿಳಿದಿಲ್ಲ.