ಕಣಿವೆ, ಸೆ. ೧೫: ಮಡಿಕೇರಿ - ಹಾಸನ ರಾಜ್ಯ ಹೆದ್ದಾರಿ, ಕುಶಾಲನಗರದ ಸಾಯಿ ಬಡಾವಣೆಯ ಪ್ರವೇಶ ದ್ವಾರದ ಬಳಿ ಕಿತ್ತು ನಿಂತಿದ್ದು ಬೃಹತ್ ಹೊಂಡವಾಗಿ ಮಾರ್ಪಟ್ಟಿದೆ. ಇದು ವಾಹನ ಸವಾರರು ಹಾಗೂ ಚಾಲಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದರೂ ಕೂಡ ಸಂಬAಧಿ ಸಿದ ಲೋಕೋಪ ಯೋಗಿ ಇಲಾಖೆ ಯ ಅಧಿಕಾರಿಗಳು ಕಿತ್ತು ನಿಂತ ಹೆದ್ದಾರಿಯ ಗುಂಡಿ ಮುಚ್ಚುವಲ್ಲಿ ನಿರ್ಲಕ್ಷö್ಯವಹಿಸಿದ್ದಾರೆ ಎಂದು ಸಾರ್ವಜನಿಕರು ಆಪಾದಿಸಿದ್ದಾರೆ.
ಕಳೆದ ಒಂದು ವರ್ಷದ ಹಿಂದಷ್ಟೇ ರೂ ಒಂದು ಕೋಟಿ ವೆಚ್ಚದಲ್ಲಿ ನಿರ್ಮಿತವಾದ ಈ ಹೆದ್ದಾರಿ ಇಷ್ಟು ಬೇಗ ಕಿತ್ತು ನಿಲ್ಲಲು ಕಳಪೆ ಕಾಮಗಾರಿಯೇ ಕಾರಣ ಎಂದು ದೂರಿರುವ ಪಟ್ಟಣ ಪಂಚಾಯಿತಿ ಸದಸ್ಯ ಜಗದೀಶ್, ಕೂಡಲೇ ಗುಂಡಿ ಬಿದ್ದ ಈ ರಸ್ತೆಯನ್ನು ಡಾಂಬರಿನಿAದ ಸರಿಪಡಿಸಿ ವಾಹನ ಚಾಲಕರಿಗೆ ಹಾಗೂ ವಾಹನಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.