ಮಡಿಕೇರಿ, ಸೆ.೧೫: ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಚೆಂಬು, ಸಂಪಾಜೆ ಭಗವಾನ್ ಯುವಜನ ಸಂಘ ಇವರ ಸಹಯೋಗದಲ್ಲಿ ಸ್ವಾತಂತ್ರö್ಯ-೭೫ ಅಮೃತ ಮಹೋತ್ಸವ ಆಚರಣೆ ಪ್ರಯುಕ್ತ ಸೆಪ್ಟೆಂಬರ್, ೨೫ ರಂದು ಸಂಜೆ ೪ ಗಂಟೆಗೆ ಫಿಟ್ ಇಂಡಿಯಾ ಸ್ವಾತಂತ್ರö್ಯ ಓಟ ಕಾರ್ಯಕ್ರಮವು ಸಂಪಾಜೆ ಚೆಕ್‌ಪೋಸ್ಟ್ ನಲ್ಲಿ ಚಾಲನೆಗೊಳ್ಳಲಿದೆ.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಜಿಲ್ಲಾ ಯುವ ಕಾರ್ಯಕ್ರಮಗಳ ಸಲಹಾ ಸಮಿತಿ ಸದಸ್ಯರಾದ ಡಾ.ಮನು ಮೆನನ್, ಹೆಲ್ಪಿಂಗ್ ಏಡ್ಸ್ ನಿರ್ದೇಶಕರಾದ ಜಯಣ್ಣ, ಚೆಂಬು ಭಗವಾನ್ ಯುವಜನ ಸಂಘದ ಅನಂತು, ನೆಹರು ಯುವ ಕೇಂದ್ರದ ಉಪ ನಿರ್ದೇಶಕರಾದ ಸಿದ್ದರಾಮಪ್ಪ ಇತರರು ಪಾಲ್ಗೊಳ್ಳಲಿದ್ದಾರೆ.