ಸೋಮವಾರಪೇಟೆ, ಸೆ. ೧೫: ಕನ್ನಡ ನೆಲದಲ್ಲಿ ಕನ್ನಡವೇ ರಾಷ್ಟçಭಾಷೆ, ಸರ್ಕಾರಗಳು ಕರ್ನಾಟಕದಲ್ಲಿ ಅನಗತ್ಯವಾಗಿ ಹಿಂದಿ ಹೇರಿಕೆ ಮಾಡಬಾರದು ಎಂದು ಆಗ್ರಹಿಸಿ, ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯ ಕರ್ತರು ಇಲ್ಲಿನ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕರ್ನಾಟಕದಲ್ಲಿ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವುದನ್ನು ಕರವೇ ಖಂಡಿಸುತ್ತದೆ. ಭಾಷೆಯನ್ನು ಪ್ರೀತಿಯಿಂದ ಬೆಳೆಸಬೇಕೇ ಹೊರತು ಒತ್ತಡ-ಒತ್ತಾಯದಿಂದಲ್ಲ. ಹಿಂದಿ ಭಾಷೆಯು ಭಾರತದ ಅಧಿಕೃತ ಭಾಷೆಯಲ್ಲ; ಆದ್ದರಿಂದ ಸರ್ಕಾರ ಹಿಂದಿ ಭಾಷೆಯ ದಿನವನ್ನಾಗಿ ಆಚರಿಸುವುದು ಖಂಡನೀಯ ಎಂದು ಕರವೇ ಅಧ್ಯಕ್ಷ ಎಸ್.ವಿ. ದಿವಾಕರ್ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಹಿಂದಿ ಭಾಷೆ ದಿನವನ್ನಾಗಿ ಆಚರಿಸುವುದನ್ನು ತಕ್ಷಣ ಕೈಬಿಡಬೇಕು. ಕರ್ನಾಟಕದ ಮೇಲೆ ಇದನ್ನು ಹೇರಬಾರದು. ಕರ್ನಾಟಕದಲ್ಲಿ ಕನ್ನಡವೇ ಮಾತೃಭಾಷೆ. ಇದನ್ನು ಸರ್ಕಾರಗಳು ಮನಗಾಣಬೇಕು. ಹಿಂದಿ ಹೇರಿಕೆಯನ್ನು ಕೈಬಿಡಬೇಕೆಂದು ಕರವೇ ಕಾರ್ಯಕರ್ತರು ಆಗ್ರಹಿಸಿದರು.
ಈ ಸಂದರ್ಭ ಕರವೇ ನಗರಾಧ್ಯಕ್ಷ ಹೆಚ್.ಆರ್. ಮಂಜುನಾಥ್, ಪದಾಧಿಕಾರಿಗಳಾದ ಮಾಚಯ್ಯ, ಗೌರಮ್ಮ, ಪೂವಮ್ಮ ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಈ ಸಂಬAಧಿತ ಮನವಿಯನ್ನು ತಾಲೂಕು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.
ಇದರೊಂದಿಗೆ ಬ್ಯಾಂಕ್‌ಗಳಲ್ಲಿ ಗ್ರಾಹಕರ ಮೇಲೆ ಹಿಂದಿ ಹೇರಿಕೆ ಮಾಡಲಾಗುತ್ತಿದ್ದು, ಇದನ್ನು ಹೋಗಲಾಡಿಸಿ ಕನ್ನಡ ಭಾಷೆಯಲ್ಲೇ ಎಲ್ಲಾ ರೀತಿಯ ಸೇವೆಯನ್ನು ನೀಡಬೇಕೆಂದು ಒತ್ತಾಯಿಸಿ ಕರವೇ ನಾರಾಯಣ ಗೌಡ ಬಣದ ಕಾರ್ಯಕರ್ತರು ಪಟ್ಟಣದ ಬ್ಯಾಂಕ್‌ಗಳ ಎದುರು ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಕರವೇ ತಾಲೂಕು ಘಟಕದ ವತಿಯಿಂದ ಪಟ್ಟಣದಲ್ಲಿರುವ ಎಸ್‌ಬಿಐ ಬ್ಯಾಂಕ್‌ನ ಎದುರು ಪ್ರತಿಭಟನೆ ನಡೆಯಿತು. ಈ ಸಂದರ್ಭ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್, ಸದಸ್ಯರಾದ ಸುದರ್ಶನ್, ದೀಪಿಕಾ, ಸುಶೀಲ, ಅಶ್ವಿನಿ ಕೃಷ್ಣಕಾಂತ್, ಚಂದ್ರು, ಮಣಿಕಂಠ, ವೆಂಕಟೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕರವೇ ನಗರ ಘಟಕದಿಂದ ಇಲ್ಲಿನ ಬ್ಯಾಂಕ್ ಆಫ್ ಬರೋಡಾ ಶಾಖಾ ಕಚೇರಿ ಎದುರು ಪ್ರತಿಭಟನೆ ನಡೆಯಿತು. ನಗರಾಧ್ಯಕ್ಷ ಬಿ.ಎಸ್. ಮಂಜುನಾಥ್, ಕಾರ್ಯದರ್ಶಿ ಕೆ.ಪಿ. ರವೀಶ್, ಇಬ್ರಾಹಿಂ, ಸಂತೋಷ್, ದೇವರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.
*ವೀರಾಜಪೇಟೆ: ಹಿಂದಿ ದಿವಸ ಆಚರಣೆಯನ್ನು ವಿರೋಧಿಸಿ ವೀರಾಜಪೇಟೆಯ ಮಿನಿ ವಿಧಾನಸೌಧದ ಮುಂಭಾಗ ಕನ್ನಡ ರಕ್ಷಣಾ ವೇದಿಕೆ ಹಾಗೂ ಆಟೋ ಸಂಘದಿAದ ಪ್ರತಿಭಟನೆ ಮಾಡಲಾಯಿತು.
ಕರ್ನಾಟಕ ರಾಜ್ಯದಲ್ಲಿ ಕನ್ನಡಕ್ಕಷ್ಟೇ ಆದ್ಯತೆ ನೀಡಬೇಕು. ಹಿಂದಿ ನಮ್ಮ ರಾಷ್ಟçಭಾಷೆಯಲ್ಲ, ಹಿಂದಿ ರಾಷ್ಟçಭಾಷೆಯಾದರೆ, ಕನ್ನಡ ನಮ್ಮ ರಾಜ್ಯ ಭಾಷೆಯಾಗಬೇಕು. ಈ ಕೂಡಲೇ ಹಿಂದಿ ದಿವಸ ಆಚರಣೆಯ ಆದೇಶವನ್ನು ಸರ್ಕಾರ ಹಿಂಪಡೆಯಬೇಕು. ಹಿಂದಿಗೆ ನಮ್ಮ ವಿರೋಧವಿಲ್ಲ; ಆದರೆ ಹಿಂದಿ ದಿವಸ ಆಚರಣೆ ಕರ್ನಾಟಕದಲ್ಲಿ ಬೇಡ ಎಂದು ಕ.ರ.ವೇ.ಯ ತಾಲೂಕು ಅಧ್ಯಕ್ಷ ಅನಿಲ್‌ಕುಮಾರ್ ಆಗ್ರಹಪಡಿಸಿದರು. ಬಳಿಕ ತಹಶೀಲ್ದಾರ್ ಪ್ರವೀಣ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೆ ತರುವುದಾಗಿ ತಹಶೀಲ್ದಾರ್ ಪ್ರವೀಣ್ ತಿಳಿಸಿದರು.
ಪ್ರತಿಭಟನೆಯಲ್ಲಿ ರಕ್ಷಣಾ ವೇದಿಕೆಯ ಗೌರವ ಅಧ್ಯಕ್ಷ ಪೊನ್ನಪ್ಪ, ಉಪಾಧ್ಯಕ್ಷ ಸಂಪತ್ ಕುಮಾರ್, ಖಜಾಂಚಿ ಸಫ್ರೇಜ್, ಭಾವ ಮಾಲ್ದಾರೆ, ರಂಗನಾಥ್, ಸಬಾಸ್ಟಿನ್ ಹಾಜರಿದ್ದರು.
ಕುಶಾಲನಗರ: ದೇಶಾದ್ಯಂತ ತಾ. ೧೪ ರಂದು ಆಚರಿಸಲ್ಪಡುವ ಹಿಂದಿ ದಿವಸ್ ಅಂಗವಾಗಿ ಬ್ಯಾಂಕಿನ ವ್ಯವಹಾರದಲ್ಲಿ ಹಿಂದಿ ಭಾಷೆ ಬಳಕೆಯನ್ನು ಖಂಡಿಸಿ ಟಿ.ಎ. ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ವೆಂಕಟೇಶ್‌ಪೂಜಾರಿ ನೇತೃತ್ವದಲ್ಲಿ ಕುಶಾಲನಗರದ ಬ್ಯಾಂಕ್ ಆಫ್ ಬರೋಡಾದ ಎದುರು ಪ್ರತಿಭಟನೆ ನಡೆಸಲಾಯಿತು. ರಾಜ್ಯಾದ್ಯಂತ ನಡೆದ ಪ್ರತಿಭಟನೆಗೆ ಕೊಡಗು ಜಿಲ್ಲೆಯಿಂದ ಕರವೇ ಬೆಂಬಲ ನೀಡಿದ್ದು, ಬ್ಯಾಂಕಿನಲ್ಲಿ ನಡೆಯುವ ಪ್ರತಿಯೊಂದು ವ್ಯವಹಾರ ಕನ್ನಡದಲ್ಲಿ ನಡೆಯಬೇಕು, ಸ್ಥಳೀಯರಿಗೆ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸುವ ಸಿಬ್ಬಂದಿಗಳ ನೇಮಕ, ಬ್ಯಾಂಕಿನ ನಾಮಫಲಕ ಕನ್ನಡದಲ್ಲೇ ಇರುವಂತೆ ಮಾಡಲು ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಕರವೇ ಕುಶಾಲನಗರ ತಾಲೂಕು ಅಧ್ಯಕ್ಷ ಪ್ರದೀಪ್, ಪ್ರಮುಖರಾದ ಬಿ.ಎ. ನಾಗೇಗೌಡ, ಎ.ಎಸ್. ಹರೀಶ್, ಸತೀಶ್, ಗೀತಾ ಧರ್ಮಪ್ಪ, ರೂಪ, ಲಲಿತ, ಹರ್ಷ ಪಾಲ್ಗೊಂಡಿದ್ದರು.