ಸೋಮವಾರಪೇಟೆ, ಸೆ. ೧೫: ಪಟ್ಟಣದ ಎಸ್‌ಜೆಎಂ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಪ್ರಭಾರ ಅಧ್ಯಕ್ಷ ಬಿ. ಸಂಜೀವ ಹಾಗೂ ತರಕಾರಿ ವ್ಯಾಪಾರಿ ಸೋಮಶೇಖರ್ ಅವರುಗಳು ಲ್ಯಾಪ್‌ಟಾಪ್‌ನ್ನು ಕೊಡುಗೆಯಾಗಿ ನೀಡಿದರು. ಆಧುನಿಕ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಅವಶ್ಯಕವಾಗಿದೆ. ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳು ಇದರ ಬಗ್ಗೆ ತಿಳುವಳಿಕೆ ಪಡೆಯಬೇಕು ಎಂಬ ಉದ್ದೇಶದಿಂದ ಲ್ಯಾಪ್‌ಟಾಪ್ ನೀಡಲಾಗಿದೆ ಎಂದು ಸಂಜೀವ ತಿಳಿಸಿದರು. ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯಿನಿ ರಾಣಿ ರವೀಂದ್ರ ಸೇರಿದಂತೆ ಶಿಕ್ಷಕರು, ಹಿರಿಯ ಸಾಹಿತಿ ನ.ಲ. ವಿಜಯ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.