ಮಡಿಕೇರಿ, ಸೆ. ೧೫: ಸಾಮಾಜಿಕ ಕಳಕಳಿಯೊಂದಿಗೆ ಶಿಕ್ಷಣ ಕ್ಷೇತ್ರಕ್ಕೆ ರೋಟರಿ ಸಂಸ್ಥೆಯು ಅಪಾರವಾದ ಕೊಡುಗೆ ನೀಡುತ್ತಿದೆ ಎಂದು ಕೂಡಿಗೆ ಸೈನಿಕ ಶಾಲೆಯ ನಿವೃತ್ತ ಪ್ರಾಂಶುಪಾಲೆ ಕುಂತಿ ಬೋಪಯ್ಯ ಶ್ಲಾಘಿಸಿದರು.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಐವರು ಶಿಕ್ಷಕರಿಗೆ ಮಡಿಕೇರಿ ರೋಟರಿ ಹಾಲ್‌ನಲ್ಲಿ ನೇಷನ್ ಬಿಲ್ಡರ್ಸ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕುಂತಿ ಬೋಪಯ್ಯ, ಭವಿಷ್ಯದ ಪ್ರಜೆಗಳು ದೇಶದ ಪ್ರಗತಿಯಲ್ಲಿ ಶಿಕ್ಷಣ ಮಹತ್ವದ ಸ್ಥಾನ ಪಡೆದಿದೆ. ಶಿಕ್ಷಣದ ಗುಣಮಟ್ಟ ಉತ್ತಮವಾಗಿದ್ದರೆ ಮಕ್ಕಳು ಕೂಡ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ಪ್ರತಿಯೋರ್ವ ವಿದ್ಯಾರ್ಥಿಗಳಲ್ಲಿಯೂ ಇರುವ ಪ್ರತಿಭೆ ಹೊರತರಲು ಶಿಕ್ಷಕರಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಕರಿಗೆ ಮಹತ್ತರ ಹೊಣೆಯಿದೆ ಎಂದು ಹೇಳಿದರು.
ಕೂಡಿಗೆ ಕ್ರೀಡಾ ಶಾಲೆಯಲ್ಲಿ ೩೫ ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಅನುಭವ ಹಂಚಿಕೊAಡ ಕುಂತಿ ಬೋಪಯ್ಯ, ಕ್ರೀಡೆಯೊಂದಿಗೆ ಶಿಕ್ಷಣಕ್ಕೂ ಕ್ರೀಡಾ ಶಾಲೆಯಲ್ಲಿ ಮಹತ್ವ ನೀಡಲಾಗಿತ್ತು. ಹೀಗಾಗಿಯೇ ಅಂರ‍್ರಾಷ್ಟಿçÃಯ ಮಟ್ಟದಲ್ಲಿಯೂ ಇಲ್ಲಿನ ಕ್ರೀಡಾಪಟುಗಳು ಸಾಧನೆ ಮಾಡಿರುವುದಲ್ಲದೇ ಶೈಕ್ಷಣಿಕ ವಾಗಿಯೂ ಕ್ರೀಡಾಶಾಲೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿತ್ತು ಎಂಬುದು ಸಾರ್ಥಕ ಭಾವನೆಗೆ ಕಾರಣವಾಗಿದೆ ಎಂದೂ ಸ್ಮರಿಸಿದರು.
ರೋಟರಿ ಉಪ ರಾಜ್ಯಪಾಲ ಅನಿಲ್ ಎಚ್.ಟಿ. ಮಾತನಾಡಿ, ಶಿಕ್ಷಕರು ಹಣತೆ ಇದ್ದಂತೆ. ಹಣತೆಯೊಂದು ನೂರಾರು ದೀಪ ಗಳನ್ನು ಬೆಳಗಿಸುವಂತೆ ಶಿಕ್ಷಕರ ಪ್ರತಿಭೆ ನೂರಾರು ವಿದ್ಯಾರ್ಥಿಗಳ ಪ್ರತಿಭೆ ಬೆಳಗಿಸಲು ಕಾರಣವಾಗುತ್ತದೆ. ರೋಟರಿ ಸಂಸ್ಥೆಯು ಸೆಪ್ಟೆಂಬರ್ ತಿಂಗಳನ್ನು ಶಿಕ್ಷಣ ರಂಗಕ್ಕೆ ಮೀಸಲಿಟ್ಟಿದ್ದು ಸಮಾಜದಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ ಈ ತಿಂಗಳು ಗೌರವ ಸಲ್ಲಿಸಲಾಗುತ್ತಿದೆ ಎಂದರು.
ಅAರ‍್ರಾಷ್ಟಿçÃಯ ರೋಟರಿ ಅಧ್ಯಕ್ಷ ಶೇಖರ್ ಮೆಹ್ತಾ, ಸ್ವಚ್ಛ ಭಾರತ್ ಮಾದರಿಯಲ್ಲಿಯೇ ಸಾಕ್ಷರ್ ಭಾರತ್ ಎಂಬ ಯೋಜನೆಗೆ ನಾಂದಿ ಹಾಡುತ್ತಿದ್ದು, ೩ ವರ್ಷದೊಳಗೆ ರೋಟರಿ ಮೂಲಕ ಭಾರತದಾದ್ಯಂತ ಪ್ರತೀ ಪ್ರಜೆಯೂ ಸಾಕ್ಷರಸ್ಥ ನಾಗಬೇಕೆಂಬ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಯವರನ್ನು ಶೇಖರ್ ಮೆಹ್ತಾ ಭೇಟಿ ಮಾಡಿ ಚರ್ಚಿಸಿದ್ದು, ಶೀಘ್ರವೇ ಸಾಕ್ಷರ್ ಭಾರತ್ ಯೋಜನೆ ಜಾರಿಗೊಳ್ಳಲಿದೆ ಎಂದು ಅನಿಲ್ ಹೇಳಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಮಿಸ್ಟಿ ಹಿಲ್ಸ್ ನಗರ ಮತ್ತು ಗ್ರಾಮೀಣ ಭಾಗದ ಶಿಕ್ಷಕರನ್ನು ಗುರುತಿಸಿ ಪ್ರತಿಷ್ಟಿತ ನೇಷನ್ ಬಿಲ್ಡರ್ಸ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದ್ದು, ಶಿಕ್ಷಣಕ್ಕೆ ಸದಾ ಆದ್ಯತೆ ನೀಡುತ್ತಿರುವ ರೋಟರಿಯು ಈ ತಿಂಗಳಿನಲ್ಲಿ ಸರ್ಕಾರಿ ಶಾಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರಯೋಜನಾಗಬಲ್ಲ ವಿದ್ಯಾಸೇತು ಹೆಸರಿನ ಮಾರ್ಗದರ್ಶಿ ಪುಸ್ತಕಗಳನ್ನು ವಿತರಿಸುತ್ತಿದೆ ಎಂದರು. ತಮ್ಮ ಶ್ರೇಯೋಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಗುರುವನ್ನು ಸದಾ ವಿದ್ಯಾರ್ಥಿಗಳು ಸ್ಮರಿಸುತ್ತಿರಬೇಕೆಂದು ಅನಿತಾ ಹೇಳಿದರು. ವಲಯ ಸೇನಾನಿ ಜಗದೀಶ್ ಪ್ರಶಾಂತ್, ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪಿ.ಆರ್. ರಾಜೇಶ್ ವೇದಿಕೆಯಲ್ಲಿದ್ದರು. ರೋಟರಿ ಮಿಸ್ಟಿ ಹಿಲ್ಸ್ ಸದಸ್ಯರಾದ ಕೆ.ಡಿ. ದಯಾನಂದ್, ಪ್ರಮೋದ್ ಕುಮಾರ್ ರೈ, ಡಾ. ಕುಶ್ವಂತ್ ಕೋಳಿಬೈಲು, ರಶ್ಮಿ ದೀಪಾ ಕಾರ್ಯಕ್ರಮ ನಿರ್ವಹಿಸಿದರು.
ಪ್ರಶಸ್ತಿ ಭಾಜನರು
ರಾಜ್ಯಮಟ್ಟದಲ್ಲಿ ಜಾನಪದ ಕ್ರೀಡೆಯಾದ ಲಗೋರಿಯ ಖ್ಯಾತಿ ವಿಸ್ತರಿಸಿದ ಪೆರಾಜೆ ಜ್ಯೋತಿ ಶಾಲೆಯ ನಿವೃತ್ತ ದೈಹಿಕ ಶಿಕ್ಷಕ ದೊಡ್ಡಣ್ಣ ಬರಮೇಲು, ಕಡಗದಾಳು ಸರ್ಕಾರಿ ಪ್ರೌಢಶಾಲಾ ಶಿಕ್ಷಕಿ ಚೋಕಿರ ಅನಿತಾ, ಮಡಿಕೇರಿ ನಗರಸಭೆ ಶಾಲೆಯ ಶಿಕ್ಷಕಿಯರಾದ ಪ್ರಪುಲ್ಲ ದೇವರಾಜ್, ಪ್ರಫುಲ್ಲ, ರೋಜಿ ಮತ್ತು ಸರೋಜಿನಿ ದೇವಿ ಅವರಿಗೆ ನೇಷನ್ ಬಿಲ್ಡರ್ಸ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸನ್ಮಾನ
ರಾಜ್ಯದ ಮೊದಲ ಕ್ರೀಡಾಶಾಲೆ ಎಂಬ ಹೆಗ್ಗಳಿಕೆಯ ಕೂಡಿಗೆ ಕ್ರೀಡಾ ಶಾಲೆಯಲ್ಲಿ ಶಿಕ್ಷಕಿಯಾಗಿ, ಪ್ರಾಂಶುಪಾಲೆಯಾಗಿ ಕಾರ್ಯ ನಿರ್ವಹಿಸಿದ್ದ ಕುಂತಿ ಬೋಪಯ್ಯ ಅವರನ್ನು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಅಧ್ಯಕ್ಷೆ ಅನಿತಾ ಪೂವಯ್ಯ, ಕಾರ್ಯದರ್ಶಿ ಪಿ.ಆರ್. ರಾಜೇಶ್ ಸನ್ಮಾನಿಸಿ, ಗೌರವಿಸಿದರು.