ಟೆಲಿಕಾಂ ಸುಧಾರಣೆಗಳಿಗೆ ಕೇಂದ್ರದ ಅಸ್ತು
ನವದೆಹಲಿ, ಸೆ. ೧೫: ಟೆಲಿಕಾಂ ಸುಧಾರಣೆಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಪರಿಹಾರ ಪ್ಯಾಕೇಜ್ಗಳನ್ನೂ ಈ ಕ್ಷೇತ್ರಕ್ಕೆ ಘೋಷಣೆ ಮಾಡಲಾಗಿದೆ. ಟೆಲಿಕಾಂ ಸಂಸ್ಥೆಗಳ ಶಾಸನಬದ್ಧ ಬಾಕಿಗಳ ಪಾವತಿಯ ಮೇಲೆ ೪ ವರ್ಷಗಳ ಮೊರಾಟೋರಿಯಂ, ಟೆಲಿಕಾಂ ಕ್ಷೇತ್ರದಲ್ಲಿ ಶೇ. ೧೦೦ ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ಕೇಂದ್ರ ಸಚಿವ ಸಂಪುಟದಲ್ಲಿ ಕ್ಷೇತ್ರಕ್ಕೆ ಸಂಬAಧಿಸಿದAತೆ ಕೈಗೊಳ್ಳಲಾದ ಮಹತ್ವದ ನಿರ್ಧಾರಗಳಾಗಿವೆ. ಕೇಂದ್ರ ಸಚಿವ ಸಂಪುಟದ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿರುವ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್, ಟೆಲಿಕಾಂಗೆ ಸಂಬAಧಿಸಿದAತೆ ೯ ರಚನಾತ್ಮಕ ಸುಧಾರಣೆಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದನ್ನು ತಿಳಿಸಿದ್ದಾರೆ. ಟೆಲಿಕಾಂ ಕ್ಷೇತ್ರದಲ್ಲಿ ಒತ್ತಡಕ್ಕೆ ಕಾರಣವಾಗಿದ್ದ ಎಜಿಆರ್ ವ್ಯಾಖ್ಯಾನವನ್ನು ಸಂಸ್ಥೆಗಳ ಟೆಲಿಕಾಮ್ ಏತರ ಆದಾಯವನ್ನು ಹೊರತುಪಡಿಸಿ ಕ್ರಮಬದ್ಧಗೊಳಿಸಲಾಗಿದೆ.
ರಾಜ್ಯದಲ್ಲಿ ಕೊರೊನಾ ದಿಢೀರ್ ಏರಿಕೆ
ಬೆಂಗಳೂರು, ಸೆ. ೧೫: ರಾಜ್ಯದಲ್ಲಿ ಇಳಿಮುಖದತ್ತ ಸಾಗಿದ್ದ ಕೊರೊನಾ ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು, ಕಳೆದ ೨೪ ಗಂಟೆಯಲ್ಲಿ ೧೧೧೬ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ ೨೯,೬೪,೦೮೩ಕ್ಕೆ ಏರಿಕೆಯಾಗಿದೆ. ಮಹಾಮಾರಿಗೆ ೮ ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ೩೭,೫೩೭ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ ಇಂದು ೪೬೨ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ ೧೨,೪೨,೩೩೨ಕ್ಕೆ ಏರಿಕೆಯಾಗಿದೆ. ನಗರದಲ್ಲಿ ೫ ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ೯೭೦ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿAದ ಚೇತರಿಸಿಕೊಂಡವರ ಸಂಖ್ಯೆ ೨೯,೧೦,೬೨೬ಕ್ಕೆ ಏರಿಕೆಯಾಗಿದೆ. ೧೫,೮೯೨ ಸಕ್ರಿಯ ಪ್ರಕರಣಗಳಿವೆ. ರಾಜ್ಯಾದ್ಯಂತ ೧,೭೦,೩೦೬ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ೧೧೧೬ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. ೦.೬೫ಕ್ಕೆ ಇಳಿದಿದೆ. ರಾಜ್ಯದ ನಾಲ್ಕು ಜಿಲ್ಲೆಗಳಾದ ಬಾಗಲಕೋಟೆ, ಬೀದರ್, ಗದಗ, ರಾಯಚೂರು, ರಾಮನಗರ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ.
ಪೇಮೆಂಟ್ ಆ್ಯಪ್ ಸರ್ಕಾರದ ವಶಕ್ಕೆ? ‘ಅಲಿಬಾಬಾ’ ಸಂಸ್ಥೆಗೆ ಚೀನಾ ಶಾಕ್!
ನವದೆಹಲಿ, ಸೆ. ೧೫: ಚೀನಾ ಸರ್ಕಾರ ಖಾಸಗಿ ಕಂಪೆನಿಗಳಿಗೆ ಮೂಗುದಾರ ಹಾಕಲು ದಿಟ್ಟ ಹೆಜ್ಜೆ ಇಟ್ಟಿದೆ. ಅದರಲ್ಲೂ ಟೆಕ್ ದೈತ್ಯರ ಅಶಿಸ್ತಿನ ಬೆಳವಣಿಗೆ ನಿಯಂತ್ರಿಸಲು ಚೀನಾದ ಕಮ್ಯೂನಿಸ್ಟ್ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಈಗಲೂ ಅಂತಹದ್ದೇ ಮಹತ್ವದ ಆದೇಶ ಹೊರಡಿಸಿರುವ ಜಿನ್ಪಿಂಗ್ ಆಡಳಿತ ಅಲಿಬಾಬಾ ಸಂಸ್ಥೆಗೆ ಶಾಕ್ ಕೊಟ್ಟಿದೆ. ಚೀನಾದ ಅತಿದೊಡ್ಡ ಆನ್ಲೈನ್ ಪೇಮೆಂಟ್ ಅಪ್ಲಿಕೇಶನ್ ಅಲಿಪೇನಲ್ಲಿ ಮಹತ್ವದ ಬದಲಾವಣೆ ತರಲು ಅಧಿಕಾರಿಗಳು ಆದೇಶಿಸಿದ್ದಾರೆ. ಚೀನಾ, ಭಾರತ ಸೇರಿದಂತೆ ಏಷ್ಯಾದ ಹಲವು ರಾಷ್ಟçಗಳಲ್ಲಿ ಈ ಅಲಿಪೇ ಹವಾ ಎಬ್ಬಿಸುತ್ತಿದೆ. ಭಾರತದಲ್ಲಿ ಇತ್ತೀಚೆಗೆ ಅಲಿಪೇ ಬಲಗೊಳ್ಳುತ್ತಿದ್ದರೂ ಚೀನಾದಲ್ಲಿ ಈಗಾಗಲೇ ಬಲಶಾಲಿ ಆನ್ಲೈನ್ ಪೇಮೆಂಟ್ ಆ್ಯಪ್ ಆಗಿದೆ. ಇಷ್ಟೆಲ್ಲದರ ನಡುವೆ ಚೀನಾ ಸರ್ಕಾರ ಅಲಿಬಾಬಾ ಸಂಸ್ಥೆಗೆ ಶಾಕಿಂಗ್ ಸುದ್ದಿ ಕೊಟ್ಟಿದೆ. ೧೦೦ ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಪೇಮೆಂಟ್ ಆ್ಯಪ್ನಲ್ಲಿ ಬದಲಾವಣೆ ಮಾಡಿ ಎಂದು ಸೂಚಿಸಿದೆ. ಐಟಿ ದೈತ್ಯರ ಮೇಲೆ ಹದ್ದಿನ ಕಣ್ಣಿಟ್ಟಿರುವ ಚೀನಾ ಸರ್ಕಾರ, ಬಳಕೆದಾರರ ಖಾಸಗಿ ಮಾಹಿತಿ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಬದಲಾವಣೆ ತರಲು ಆದೇಶಿಸಿದೆ. ಚೀನಾ ಸರ್ಕಾರದ ಅಧಿಕಾರಿಗಳು ಅಲಿಪೇನಲ್ಲಿ ಬದಲಾವಣೆಗೆ ಸೂಚಿಸಿದ ತಕ್ಷಣ ಮಾರುಕಟ್ಟೆ ಮೌಲ್ಯ ಅಲ್ಲಾಡಿ ಹೋಗಿದೆ. ಅಲಿಪೇ ಶೇರುಗಳೂ ಸೇರಿದಂತೆ ಅಲಿಬಾಬಾ ಸಂಸ್ಥೆಗೂ ದೊಡ್ಡ ನಷ್ಟವಾಗಿದೆ. ಸರ್ಕಾರದ ಆದೇಶ ತನ್ನ ವ್ಯವಹಾರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತಾಗಿ ಅಲಿಪೇ ಬಹಿರಂಗ ಹೇಳಿಕೆ ನೀಡಿಲ್ಲ. ಅಲಿಪೇ ಆ್ಯಪ್ನ ಮಾತೃಸಂಸ್ಥೆ ಆ್ಯಂಟ್ ಗ್ರೂಪ್ ಚೀನಾದಲ್ಲಿಯೇ ಅತಿದೊಡ್ಡ ಹಣಕಾಸು ಸಂಸ್ಥೆಯಾಗಿದೆ. ಆದರೆ ಚೀನಾದಲ್ಲಿ ಯಾವುದೇ ಸಂಸ್ಥೆ ಏಕಸೌಮ್ಯ ನೀತಿಯನ್ನ ಸರ್ಕಾರ ಒಪ್ಪುತ್ತಿಲ್ಲ. ಹೀಗಾಗಿಯೇ ಟೆಕ್ ದೈತ್ಯರ ಮೇಲೆ ಅಲ್ಲಿನ ಸರ್ಕಾರ ಹಾಗೂ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಸರ್ಕಾರಕ್ಕೇ ಮೋಸ ಮಾಡಿ ಹಣ ಸಂಪಾದಿಸುವ ಕೆಲವರಿಗೆ ಚೀನಾದಲ್ಲಿ ಅವಕಾಶವೇ ಇಲ್ಲ. ಬಿಲಿಯನೆರ್ಸ್ ಪಟ್ಟ ಕಟ್ಟಿಕೊಂಡವರ ಮೇಲೆ ಅಧಿಕಾರಿಗಳು ಕಣ್ಣಿಟ್ಟಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಬಿಲಿಯನೆರ್ಸ್ ಮೇಲಿನ ನಿಯಮಗಳು ಮತ್ತಷ್ಟು ಕಠಿಣವಾಗಿವೆ. ಬಡತನ ನಿರ್ಮೂಲನೆ ಮಾಡಿ ಮಹತ್ತರ ಸಾಧನೆ ಮಾಡಿರುವ ಚೀನಾ ಇದೀಗ ತನ್ನ ಆರ್ಥಿಕತೆಯಲ್ಲೂ ಮಹತ್ವದ ಬದಲಾವಣೆ ತರುತ್ತಿದೆ. ಇದು ಕೆಲವು ಖಾಸಗಿ ಸಂಸ್ಥೆಗಳಿಗೆ ಕಿರಿಕಿರಿ ಉಂಟು ಮಾಡಿದ್ರೂ, ಭವಿಷ್ಯದ ದೃಷ್ಟಿಯಿಂದ ಚೀನಾ ಇಂತಹ ಹಲವು ಖಡಕ್ ನಿರ್ಧಾರ ತೆಗೆದುಕೊಂಡಿದೆ.
ಕೋವಿಡ್ ಸಾಂಕ್ರಾಮಿಕ: ಅಗ್ರ ಸ್ಥಾನದಲ್ಲೇ ಉಳಿದ ಕೇರಳ
ನವದೆಹಲಿ, ಸೆ. ೧೫: ಕೋವಿಡ್ ಸಾಂಕ್ರಾಮಿಕ ನಿರ್ವಹಣೆಯಲ್ಲಿ ಹಿಂದೆ ಬಿದ್ದಿದ್ದ ಕರ್ನಾಟಕದಲ್ಲಿ ಚೇತೋಹಾರಿ ಬೆಳವಣಿಗೆ ಕಂಡು ಬಂದಿದ್ದು, ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ ಇದೀಗ ೪ನೇ ಸ್ಥಾನಕ್ಕೆ ಇಳಿದಿದೆ. ೪ನೇ ಸ್ಥಾನದಲ್ಲಿದ್ದ ತಮಿಳುನಾಡು ಇದೀಗ ಮೂರನೇ ಸ್ಥಾನಕ್ಕೇರಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಅತಿ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಅಗ್ರ ಸ್ಥಾನದಲ್ಲಿದ್ದು, ಇಲ್ಲಿ ೧,೯೯,೪೨೮ ಸಕ್ರಿಯ ಪ್ರಕರಣಗಳಿವೆ. ೨ನೇ ಸ್ಥಾನದಲ್ಲಿರುವ ಮಹಾರಾಷ್ಟçದಲ್ಲಿ ೫೩,೨೨೦ ಸಕ್ರಿಯ ಪ್ರಕರಣಗಳಿವೆ. ೧೬,೫೪೯ ಸಕ್ರಿಯ ಪ್ರಕರಣಗನ್ನು ಹೊಂದಿರುವ ತಮಿಳುನಾಡು ಮೂರು ಮತ್ತು ೧೫,೮೯೨ ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಕರ್ನಾಟಕ ೪ನೇ ಸ್ಥಾನದಲ್ಲಿವೆ. ೧೪,೪೧೨ ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಆಂಧ್ರಪ್ರದೇಶ ೫ನೇ ಸ್ಥಾನ ಮತ್ತು ೧೩,೫೨೫ ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಮಿಜೋರಂ ೬ನೇ ಸ್ಥಾನದಲ್ಲಿವೆ. ಕೋವಿಡ್ ೨ನೇ ಅಲೆ ವೇಳೆ ಅಗ್ರಸ್ಥಾನದಲ್ಲಿದ್ದ ದೆಹಲಿ ಬರೊಬ್ಬರಿ ೨೧ನೇ ಸ್ಥಾನಕ್ಕೆ ಕುಸಿದಿದ್ದು, ಅಲ್ಲಿ ಕೇವಲ ೪೦೦ ಸಕ್ರಿಯ ಪ್ರಕರಣಗಳು ಮಾತ್ರ ಇವೆ. ಲಕ್ಷದ್ವೀಪ ಕೊನೆಯ ಸ್ಥಾನದಲ್ಲಿದ್ದು ಇಲ್ಲಿ ಕೇವಲ ೪ ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.