ಸೋಮವಾರಪೇಟೆ, ಸೆ. ೧೫: ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕಂದೂರು ಕಾಲೋನಿಯಲ್ಲಿ ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರೂ. ೨ ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಕಾಂಕ್ರಿಟ್ ರಸ್ತೆ ಕಾಮಗಾರಿ ಆರಂಭದಲ್ಲೇ ಕಳಪೆಯಾಗಿದೆ ಎಂದು ಕಲ್ಕಂದೂರು ಗ್ರಾಮದ ಜನಶಕ್ತಿ ವೇದಿಕೆ ಪ್ರಮುಖರು ಹಾಗೂ ಗ್ರಾಮಸ್ಥರು ದೂರಿದ್ದಾರೆ.
ಹಲವು ವರ್ಷಗಳ ಬಳಿಕ ಕಾಲೋನಿಗೆ ಕಾಂಕ್ರಿಟ್ ರಸ್ತೆ ಒದಗಿಬಂದಿದ್ದು, ರೂ. ೨ಲಕ್ಷ ವೆಚ್ಚದ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದೆ. ಗ್ರಾಮದ ಈಶ್ವರಿ ಅವರ ಮನೆಯಿಂದ ಅಕ್ಬರ್ ಆಲಿ ಮನೆವರೆಗಿನ ರಸ್ತೆ ಕಾಮಗಾರಿ ಕೈಗೊಳ್ಳುವ ಸಂದರ್ಭ ಕುಡಿಯುವ ನೀರಿನ ಪೈಪ್‌ಗಳಿಗೂ ಹಾನಿ ಮಾಡಿದ್ದು, ಕೊಳಚೆ ನೀರು ಪೈಪ್ ಸೇರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾ.ಪಂ. ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಬೇಕು. ಪೈಪ್‌ಲೈನ್ ಮತ್ತು ಚರಂಡಿ ವ್ಯವಸ್ಥೆಯನ್ನು ಸಮರ್ಪಕಗೊಳಿಸಬೇಕೆಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅಸ್ಮಾ ಅವರಿಗೆ ಜನಶಕ್ತಿ ವೇದಿಕೆ ಮೂಲಕ ಮನವಿ ಸಲ್ಲಿಸಿದರು. ಜನಶಕ್ತಿ ವೇದಿಕೆ ಅಧ್ಯಕ್ಷ ಕೆ.ಪಿ. ರವೀಶ್, ಕಾರ್ಯದರ್ಶಿ ಸಲಾಂ, ಪದಾಧಿಕಾರಿ ನಾರಾಯಣ ಪೂಜಾರಿ, ಗ್ರಾಮಸ್ಥರಾದ ಹಸೈನಾರ್, ಈಶ್ವರಿ, ಲಕ್ಷö್ಮಮ್ಮ, ಸಚಿನ್, ಬಾಲನ್, ಪುತ್ತು ಸೇರಿದಂತೆ ಇತರರು ಗ್ರಾ.ಪಂ.ಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಲಕ್ಷಿö್ಮÃ ಪಾಂಡ್ಯನ್, ಉಪಾಧ್ಯಕ್ಷ ಹೆಚ್.ವಿ. ಮಿಥುನ್, ಸದಸ್ಯರಾದ ವಿಜಯ್, ಯಶಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.