ಸೋಮವಾರಪೇಟೆ,ಸೆ.೧೪: ಪಟ್ಟಣದ ಮಹದೇಶ್ವರ ಬಡಾವಣೆ ನಿವಾಸಿ, ಹಾಸನದ ಗೊರೂರು ಗ್ರಾಮದ ಯುವಕನಿಗೆ ವಿವಾಹ ಮಾಡಿಕೊಟ್ಟಿದ್ದ ನವ ವಿವಾಹಿತೆಯೋರ್ವರು ಹಾಸನದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಮಹದೇಶ್ವರ ಬಡಾವಣೆ ನಿವಾಸಿ ಸುರೇಶ್ ಹಾಗೂ ರಾಣಿ ದಂಪತಿ ಪುತ್ರಿ, ಕಳೆದ ೬ ತಿಂಗಳ ಹಿಂದಷ್ಟೇ ಗೊರೂರು-ಕಾರ್ಲೆ ಗ್ರಾಮದ ಶ್ಯಾಂ ಎಂಬವರಿಗೆ ಮದುವೆ ಮಾಡಿಕೊಟ್ಟಿದ್ದ ರಂಜಿತಾ (೨೫) ಎಂಬವರೇ ಆತ್ಮಹತ್ಯೆಗೆ ಶರಣಾದವರು. ಗೊರೂರು ಕಾರ್ಲೆ ಗ್ರಾಮದಿಂದ ಹಬ್ಬಕ್ಕೆಂದು ಹಾಸನದಲ್ಲಿರುವ ತಮ್ಮ ಪತಿಯ ಸಹೋದರಿಯ ಮನೆಗೆ ತೆರಳಿದ್ದ ೩ ತಿಂಗಳ ಗರ್ಭಿಣಿ ರಂಜಿತಾ, ನಿನ್ನೆ ದಿನ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೇಣು ಬಿಗಿದುಕೊಂಡಿದ್ದಾರೆ.

ಹೊರಗಡೆ ತೆರಳಿದ್ದ ಮನೆಯವರು ವಾಪಸ್ ಬಂದ ಸಂದರ್ಭ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ಹಾಸನದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮೃತಪಟ್ಟಿರುವ ಬಗ್ಗೆ ವೈದ್ಯರು ಖಚಿತಪಡಿಸಿದ್ದಾರೆ. ಸೋಮವಾರಪೇಟೆಯಿಂದ ಸಂಬAಧಿಕರು ಹಾಸನಕ್ಕೆ ತೆರಳಿ ಘಟನೆಯ ವಿವರ ಪಡೆದಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪತಿಯ ಊರಿನಲ್ಲೇ ಅಂತ್ಯಸAಸ್ಕಾರ ನೆರವೇರಿಸಲಾಗಿದೆ.