ಮಡಿಕೇರಿ, ಸೆ. ೧೪: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್‌ನ ಮಂಗಳೂರು ವಲಯ ವತಿಯಿಂದ ೨೫ ವರ್ಷದೊಳಗಿನವರ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲಾಮಟ್ಟದ ತಂಡಕ್ಕೆ ಆಯ್ಕೆ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದೆ.

ಕೊಡಗು ಜಿಲ್ಲಾ ತಂಡಕ್ಕೆ ತಾ. ೧೮ ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸೆಂಟಿನರಿ ಮೈದಾನದಲ್ಲಿ ಆಯ್ಕೆ ನಡೆಯಲಿದೆ. ಅಂದು ಬೆಳಿಗ್ಗೆ ೮ ಗಂಟೆಯಿAದ ಆಯ್ಕೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಭಾಗವಹಿಸಲಿಚ್ಚಿಸುವ ಆಟಗಾರರು ಆನ್‌ಲೈನ್ ಮೂಲಕ ತಮ್ಮ ಹೆಸರು, ಜನ್ಮ ದಿನಾಂಕ, ವಿವರಗಳೊಂದಿಗೆ ಸಂಪರ್ಕ ಸಂಖ್ಯೆ ಸಹಿತ ಞsಛಿಚಿmಟoಡಿezoಟಿe@gmಚಿiಟ.ಛಿom ಮೂಲಕ ನೋಂದಾಯಿಸಿ ಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಬಿ.ವಿ. ನಂದ (೯೮೪೫೫೦೫೨೦೦), ದಾಮೋದರ್ ಗೌಡ (೯೯೪೫೨೭೩೬೮೮) ಅವರುಗಳನ್ನು ಸಂಪರ್ಕಿಸ ಬಹುದಾಗಿದೆ ಎಂದು ವಾಂಡರ‍್ಸ್ ಕ್ಲಬ್ ಕಾರ್ಯದರ್ಶಿ ರಘು ಮಾದಪ್ಪ ತಿಳಿಸಿದ್ದಾರೆ.