ಪೊನ್ನಂಪೇಟೆ, ಸೆ. ೧೪: ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಗ್ರಾ.ಪಂ.ವ್ಯಾಪ್ತಿಯ ಕುಮಟೂರು ಗ್ರಾಮದ ಮಾಚೀರ ಪ್ರಕಾಶ್ ಕಾಳಯ್ಯ ಎಂಬವರ ತೋಟದಲ್ಲಿ ಹುಲಿ ಹೆಜ್ಜೆ ಗುರುತು ಕಂಡು ಬಂದಿದೆ. ಪ್ರಕಾಶ್ ಕಾಳಯ್ಯ ಅವರ ಮನೆಯ ಸಮೀಪವೇ ಇರುವ ತೋಟದಲ್ಲಿ ಮನೆಯಿಂದ ಸುಮಾರು ೧೦ ಅಡಿ ದೂರದಲ್ಲಿ ಹುಲಿಯ ಹೆಜ್ಜೆ ಗುರುತು ಕಂಡು ಬಂದಿರುವುದರಿAದ ಆತಂಕಗೊAಡಿದ್ದಾರೆ. ಕಾಡಿನಿಂದ ನಾಡಿಗೆ ಬಂದಿರುವ ಹುಲಿಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಕಳೆದ ವರ್ಷ ಕುಮಟೂರು ವ್ಯಾಪ್ತಿಯಲ್ಲಿ ಹುಲಿಯ ಅಟ್ಟಹಾಸಕ್ಕೆ ಜಾನುವಾರುಗಳು ಬಲಿಯಾಗಿದ್ದವು. ಫೆಬ್ರವರಿ ತಿಂಗಳಿನಲ್ಲಿ ಒಬ್ಬ ಬಾಲಕ ಹುಲಿದಾಳಿಗೆ ಜೀವಕಳೆದುಕೊಂಡ ಘಟನೆ ನಡೆದಿತ್ತು.

-ಚನ್ನನಾಯಕ