ಗುಡ್ಡೆಹೊಸೂರು, ಸೆ. ೧೪: ಇಲ್ಲಿಗೆ ಸಮೀಪದ ಬಸವನಹಳ್ಳಿಯ ದಿಡ್ಡಳ್ಳಿಯ ನಿರಾಶ್ರಿತರ ವಸತಿ ನಿಲಯದ ಆವರಣದಲ್ಲಿ ವನವಾಸಿ ಕಲ್ಯಾಣ ಆಶ್ರಮ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಆಚರಿಸಲಾಯಿತು.

ವನವಾಸಿ ಕಲ್ಯಾಣ ಆಶ್ರಮದ ರಾಜ್ಯ ಅಧ್ಯಕ್ಷ ಚಕ್ಕೆರ ಮನು, ರಾಜೇಶ್‌ನಾಥ್, ಆಶ್ರಮದ ಜಿಲ್ಲಾ ಮಟ್ಟದ ಪ್ರಮುಖ ಭರತ್ ಮಾಚಯ್ಯ, ಆರ್.ಎಸ್.ಎಸ್. ಪ್ರಮುಖರಾದ ಬೊಟ್ಟುಮನ ರಮೇಶ್ ಹಾಗೂ ಗುಡ್ಡೆಹೊಸೂರು ಮಂಡಲ ಪ್ರಮುಖರು ಭಾಗವಹಿಸಿದ್ದರು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು.