ಪೆರಾಜೆ, ಸೆ. ೧೪: ಇಲ್ಲಿನ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ತಲತಲಾಂತರದಿAದ ನಡೆದುಕೊಂಡು ಬಂದ ಪದ್ಧತಿಯಂತೆ ಭಾಗಮಂಡಲ ಭಗಂಡೇಶ್ವರ ದೇವಸ್ಥಾನ ಮತ್ತು ತಲಕಾವೇರಿ ಶ್ರೀ ಕಾವೇರಿ ಸನ್ನಿಧಿಗೆ ಕದಿರು ತೆಗೆದುಕೊಂಡು ಹೋಗುವ ಕಾರ್ಯಕ್ರಮ ನಡೆಯಿತು. ದೇವಾಲಯದ ಕಾವೇರಿ ಗದ್ದೆಯಿಂದ ಕದಿರು ತೆಗೆದು ಕೊಂಡೊಯ್ದು ಭಾಗಮಂಡಲ ಹಾಗೂ ತಲಕಾವೇರಿಗೆ ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಶಾಸ್ತಾವು ದೇವಸ್ಥಾನದ ಆಡಳಿತ ಮೊಕ್ತೇಸರ ಕುಂಬಳಚೇರಿ , ವಿಶ್ವನಾಥ್, ಕಾರ್ಯದರ್ಶಿ ಕೊಳಂಗಾಯ ಹೊನ್ನಪ್ಪ, ಸಹಕಾರ್ಯದರ್ಶಿ ಜೋಯಪ್ಪ ನಿಡ್ಯಮಲೆ, ತಕ್ಕ ಮುಖ್ಯಸ್ಥರುಗಳಾದ ಕೋಡಿ ಮೋಟಯ್ಯ, ಬಳ್ಳಡ್ಕ ಅಪ್ಪಾಜಿ, ಮಡಿಕೇರಿ ತಾ.ಪಂ. ಮಾಜಿ ಸದಸ್ಯ ನಾಗೇಶ್ ಕುಂದಲ್ಪಾಡಿ, ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಭಕ್ತಾದಿಗಳು ಇದ್ದರು.
ಇತಿಹಾಸದಲ್ಲಿ ಕೊಡಗಿನ ಭಾಗವಾಗಿ ಸೇರಿದ ಪ್ರದೇಶ
ಅದು ಇಂದಿನ ಸುಳ್ಯ ತಾಲೂಕು ಸೇರಿದಂತೆ ಅಖಂಡ ಕೊಡಗು ರಾಜ್ಯವನ್ನು ಬ್ರಿಟಿಷರು ಆಳುತ್ತಿದ್ದ ಸಮಯ. ಆ ದಿನಗಳಲ್ಲಿ ಬ್ರಿಟಿಷರ ದಬ್ಬಾಳಿಕೆ, ರಾಜರುಗಳನ್ನು ಅಧಿಕಾರದಿಂದ ಪದಚ್ಯುತಿಗೊಳಿಸುವ ಪಿತೂರಿ, ಇದರಿಂದ ಅಸಮಾಧಾನ ಗೊಂಡ ಜಿಲ್ಲೆಯ ಜನತೆ ಕಿ.ಶ. ೧೮೩೫-೩೭ರಲ್ಲಿ ಬ್ರಿಟಿಷರೊಂದಿಗೆ ‘ಅಮರ ಸುಳ್ಯ ದಂಗೆ ಅಥವಾ ಕಲ್ಯಾಣಪ್ಪನ ಕಾಟುಕಾಯಿ’ ಎಂಬ ಹೆಸರಿನೊಂದಿಗೆ ಇಂದು ಕರೆಸಿಕೊಳ್ಳುವ ಕ್ರಾಂತಿಯಲ್ಲಿ ಕೆಚ್ಚೆದೆಯ ಹೋರಾಟ ನಡೆಸುತ್ತಾರೆ.
ಕೊಡಗು ಮತ್ತು ಇಂದಿನ ಸುಳ್ಯದ ರೈತಾಪಿ ವರ್ಗದವರು ಮೊದಲು ಯಶಸ್ಸು ಕಂಡರು. ನಂತರದಲ್ಲಿ ಬ್ರಿಟಿಷರ ಆಧುನಿಕ ಶಸ್ತಾçಸ್ತç ಹಾಗೂ ಕೆಲ ದೇಶದ್ರೋಹಿಗಳು ಬ್ರಿಟಿಷರಿಗೆ ಸಹಾಯ ಮಾಡಿದುದರ ಪರಿಣಾಮ ಅಮರ ಸುಳ್ಯ ದಂಗೆಯಲ್ಲಿ ಬ್ರಿಟಿಷರು ಜಯ ಗಳಿಸುತ್ತಾರೆ. ಈ ಕ್ರಾಂತಿಯಲ್ಲಿ ಪೆರಾಜೆ ಭಾಗದ ಕೆಲವು ಹೋರಾಟಗಾರರು ಯಶಸ್ವಿಯಾಗಿ ಪಾಲ್ಗೊಂಡಿದ್ದರು ಮತ್ತು ಈ ಹೋರಾಟಕ್ಕೆ ಪೆರಾಜೆಯಲ್ಲೇ ಯೋಜನೆ ರೂಪಿಸಲಾಗಿತ್ತು ಎಂಬ ಸಿಟ್ಟಿನಿಂದ ಬ್ರಿಟಿಷರು ಪೆರಾಜೆ, ಚೆಂಬು ಗ್ರಾಮಗಳ ಜಮ್ಮಾ ಹಕ್ಕನ್ನು ಕಸಿದುಕೊಂಡು ಈ ಗ್ರಾಮಗಳ ಸಹಿತ ಸುಳ್ಯ ತಾಲೂಕನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸಿ ಮದರಾಸು ಪ್ರಾಂತ್ಯದ ಭಾಗವನ್ನಾಗಿ ಮಾಡಿ ಬ್ರಿಟಿಷರು ತಮ್ಮ ನೇರ ಆಡಳಿತಕ್ಕೆ ತೆಗೆದುಕೊಂಡರು.
ಭಾಗಮAಡಲ ನಾಡಿನ ಪೆರಾಜೆ ಮತ್ತು ಚೆಂಬು ಗ್ರಾಮ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿ ಹೋಗುವುದನ್ನು ಮನಗಂಡು ಕೊಡಗಿನ ಅಂದಿನ ಜನತೆ ಬ್ರಿಟಿಷರಲ್ಲಿ ಕಾವೇರಿಗೆ ಸುಳ್ಯ ಸಹಿತ ಪೆರಾಜೆ, ಚೆಂಬು, ಸಂಪಾಜೆ ಗ್ರಾಮಗಳಿಂದ ಹಿಂಗಾರ ಮತ್ತು ಕದಿರು, ತೆಂಗಿನಕಾಯಿ ಇತ್ಯಾದಿಗಳನ್ನು ತಲಕಾವೇರಿ ಮತ್ತು ಭಾಗಮಂಡಲಕ್ಕೆ ಧಾರ್ಮಿಕ ಕ್ರಿಯಾಭಾಗವಾಗಿ ಸಲ್ಲುವ ಸಂಪ್ರದಾಯ ಸಲ್ಲಿಸುವ ಊರುಗಳಾದುದರಿಂದ ಕೊಡಗಿನಲ್ಲೇ ಉಳಿಸಿಕೊಳ್ಳಲು ಕೋರಿಕೊಂಡರು. ಹಾಗಾಗಿ ಸುಳ್ಯವನ್ನು ಹೊರತುಪಡಿಸಿ ಪೆರಾಜೆ, ಚೆಂಬು ಮತ್ತು ಸಂಪಾಜೆ ಕೊಡಗಿಗೆ ಸೇರಿದವು. ಇಂದಿಗೂ ಪೆರಾಜೆಯಿಂದ ತಲಕಾವೇರಿ ಮತ್ತು ಭಾಗಮಂಡಲಕ್ಕೆ ಕದಿರು, ಹೂ, ಹಿಂಗಾರ ತೆಗೆದುಕೊಂಡು ಹೋಗುವ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಾ ಬಂದಿದೆ.
-ಕಿರಣ್ ಕುಂಬಳಚೇರಿ