ಮಡಿಕೇರಿ, ಸೆ. ೧೩: ಜಿಲ್ಲೆಯಲ್ಲೀಗ ಕೃಷಿ ಚಟುವಟಿಕೆಯ ಸಮಯ., ಕಾಫಿ ತೋಟಗಳಲ್ಲಿ ಕಳೆಕೊಚ್ಚುವದು, ಎರಡನೇ ಹಂತದ ರಸಗೊಬ್ಬರ ಹಾಕುವದು ನಾಟಿಮಾಡಿದ ಗದ್ದೆಗಳಿಗೂ ಗೊಬ್ಬರ ಹಾಕುವ ಸಮಯವಾಗಿದೆ. ಆದರೆ ರಸಗೊಬ್ಬರ ಕೊರತೆಯಿಂದಾಗಿ ಗೊಬ್ಬರಕ್ಕಾಗಿ ರೈತರು ಪರದಾಡುವ ಪರಿಸ್ಥಿತಿ ಕಂಡು ಬರುತ್ತಿದೆ. ಕೆಲವು ಕಡೆಗಳಲ್ಲಿ ಇತರ ಗೊಬ್ಬರಗಳಿದ್ದರೂ ಪ್ರಮುಖವಾಗಿ ಬೇಕಾಗಿರುವ ಯೂರಿಯಾ ಗೊಬ್ಬರ ಇಲ್ಲದ್ದರಿಂದ ರೈತರು ವಾಪಸ್ ಮರಳುತ್ತಿದ್ದಾರೆ. ಇನ್ನೂ ಕೆಲವು ಕಡೆಗಳಲ್ಲಿ ಇತರ ಗೊಬ್ಬರಗಳ ಕೊರತೆಯೂ ಕಂಡು ಬರುತ್ತಿದೆ. ಗೊಬ್ಬರ ಮಾರಾಟ ವ್ಯವಸ್ಥೆಯಲ್ಲಿ ಉಂಟಾಗುತ್ತಿರುವ ಗೊಂದಲದಿAದಾಗಿ ರೈತರು ಹೈರಾಣಾಗುವಂತಾಗಿದೆ.
ಮುAಗಾರು ಪೂರ್ವದಲ್ಲಿ ಏಕಕಾಲಕ್ಕೆ ಉತ್ತಮ ಮಳೆಯಾದ್ದರಿಂದ ಈ ಬಾರಿ ಕಾಫಿ ತೋಟಗಳಲ್ಲಿ ಒಂದೇ ಸಲಕ್ಕೆ ಹೂಬಿಟ್ಟು ಎಲ್ಲೆಡೆ ಉತ್ತಮ ಫಸಲು ಕಟ್ಟಿತ್ತು. ನಂತರದಲ್ಲಿ ಅತಿಯಾದ ಮಳೆ ಹಾಗೂ ಶೀತದಿಂದಾಗಿ ಕೆಲವೆಡೆ ಕಾಫಿ ಕಾಯಿಗಳು ಉದುರತೊಡಗಿದವು. ಕಾಫಿ ಮಂಡಳಿ ಹಾಗೂ ತಜ್ಞರ ಸಲಹೆಯಂತೆ ರೈತರು ಉದುರುವಿಕೆ ತಡೆಗಟ್ಟಲು ಕ್ರಮಕೈಗೊಂಡಿದ್ದರು. ಇದೀಗ ಕಾಫಿ ಕಾಯಿ ಬಲಿಯುವ ಸಮಯವಾಗಿದೆ.
(ಮೊದಲ ಪುಟದಿಂದ) ಆದರೆ ಇದೀಗ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಮತ್ತೆ ಉದುರತೊಡಗಿದೆ. ಈ ಸಂದರ್ಭದಲ್ಲಿ ಕಾಫಿ ಗಿಡಗಳ ಬುಡಗಳನ್ನು ಸ್ವಚ್ಛ ಮಾಡಿ ಗೊಬ್ಬರ ಹಾಕಿದರೆ ಕಾಯಿ ಬಲಿಷ್ಠಗೊಳ್ಳುವದಲ್ಲದೆ, ಉದುರುವಿಕೆಯನ್ನು ತಡೆಯಬಹುದಾಗಿದೆ. ಆದರೆ ಗೊಬ್ಬರದ ಕೊರತೆಯಿಂದಾಗಿ ರೈತರು ಪರದಾಡುವಂತಾಗಿದೆ.
ಯೂರಿಯಾ ಕೊರತೆ
ಖಾಸಗಿ ಗೊಬ್ಬರ ಮಾರಾಟ ಮಳಿಗೆಗಳಲ್ಲಿ ಯೂರಿಯಾ ಗೊಬ್ಬರ ಕೊರತೆ ಕಾಡುತ್ತಿದೆ. ಡಿಎಪಿ, ಎಂಬಿಪಿ, ರಾಕ್ ಹೀಗೆ ಇತರ ಗೊಬ್ಬರಗಳೊಂದಿಗೆ ಮಿಶ್ರಣ ಮಾಡಿ ಹಾಕಲು ಯೂರಿಯಾ ಗೊಬ್ಬರ ಅತ್ಯವಶ್ಯವಾಗಿದೆ. ಆದರೆ ಯೂರಿಯಾ ಸಿಗುತ್ತಿಲ್ಲ. ಕೆಲವೆಡೆಗಳಲ್ಲಿ ಯೂರಿಯಾ ಗೊಬ್ಬರ ಇದ್ದರೂ ಬೇರೆ ಗೊಬ್ಬರಗಳನ್ನು ಖರೀದಿಸಿದರೆ ಇಂತಿಷ್ಟು ಮಾತ್ರ ಎಂದು ಲೆಕ್ಕಾಚಾರದಲ್ಲಿ ಯೂರಿಯಾ ನೀಡಲಾಗುತ್ತಿದೆ. ಹಾಗಾಗಿ ಗೊಬ್ಬರ ಸಾಕಾಗದೇ ರೈತರು ಅಂಗಡಿಯಿAದ ಅಂಗಡಿಗೆ ಅಲೆದಾಡುತ್ತಿರುವದು ಕಂಡುಬರುತ್ತಿದೆ. ಕೆಲವು ಕಡೆಗಳಲ್ಲಿ ಇತರ ಗೊಬ್ಬರಗಳು ಕೂಡ ಲಭ್ಯವಿಲ್ಲದಾಗಿದೆ.
ಸರಬರಾಜು ಇಲ್ಲ
ಗೊಬ್ಬರ ವ್ಯಾಪಾರಿಗಳ ಪ್ರಕಾರ ಪ್ರಧಾನ ಮಂತ್ರಿಗಳ ಸಲಹೆಯಂತೆ ರಸಗೊಬ್ಬರ ಪೂರೈಕೆಯಲ್ಲಿ ಆಯಾ ಜಿಲ್ಲೆಗಳಿಗೆ ಪ್ರಥಮ ಆದ್ಯತೆ ನೀಡಬೇಕಿದ್ದು, ಹಾಗಾಗಿ ಸರಬರಾಜಾಗುತ್ತಿಲ್ಲ. ಮಂಡ್ಯ, ಮೈಸೂರುಗಳಿಂದ ಪ್ರಮುಖವಾಗಿ ಜಿಲ್ಲೆಗೆ ಗೊಬ್ಬರ ಸರಬರಾಜಾಗುತ್ತದೆ. ಆದರೆ ಇದೀಗ ಆ ಜಿಲ್ಲೆಗಳಿಗೆ ಪೂರೈಕೆ ಮಾಡಿ ನಂತರ ಉಳಿದ ಗೊಬ್ಬರಗಳನ್ನು ಕೊಡಗು ಜಿಲ್ಲೆಗೆ ಕೊಡುತ್ತಾರೆ. ಇದು ಸಾಕಾಗುವದಿಲ್ಲವೆಂದು ಹೇಳುತ್ತಾರೆ.
ಕೂಲಿ ಹಣದ ಸಮಸ್ಯೆ
ಇನ್ನೂ ಕೆಲವರ ಪ್ರಕಾರ ರಸಗೊಬ್ಬರ ಸರಬರಾಜು ಸಂದರ್ಭ ಲಾರಿಗಳಿಂದ ಗೊಬ್ಬರ ಇಳಿಸಲು ದಿನಕೂಲಿಗಳಿಗೆ ಲಾರಿ ಚಾಲಕರು ಇಂತಿಷ್ಟು ಹಣ ನೀಡುತ್ತಿದ್ದರು. ಇದೀಗ ದಿನಕೂಲಿ ನೌಕರರು ಇಂತಿಷ್ಟೇ ನೀಡಬೇಕೆಂದು ಹಣ ನಿಗದಿ ಮಾಡಿದ್ದಾರೆ. ಇದೀಗ ದಿನಕೂಲಿ ನೌಕರರು ಇಂತಿಷ್ಟೇ ನೀಡಬೇಕೆಂದು ಹಣ ನಿಗದಿ ಮಾಡಿದ್ದಾರೆ. ಈ ಹಣ ನೀಡಲು ಗೊಬ್ಬರ ತಯಾರಿಕಾ ಕಂಪೆನಿ ಹಾಗೂ ವಿತರಕರು ತಯಾರಿಲ್ಲ. ಲಾರಿ ಚಾಲಕರೂ ನೀಡಲು ನಿರಾಕರಿಸಿದ್ದಾರೆ. ಹಾಗಾಗಿ ಲಾರಿಯಿಂದ ಗೊಬ್ಬರ ಇಳಿಸಲು ಕೂಲಿಯವರು ಬಾರದೇ ಇರುವದರಿಂದ ಲಾರಿಗಳೂ ಬರುತ್ತಿಲ್ಲ. ಇದರಿಂದಾಗಿಯೂ ಗೊಬ್ಬರ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ ಎಂದು ಹೇಳುತ್ತಾರೆ.
ಲಿಂಕ್ ವ್ಯವಸ್ಥೆಯಿಂದ ಅಭಾವ
ರೈತರು ಹೇಳುವ ಪ್ರಕಾರ ಗೊಬ್ಬರ ಮಾರಾಟಗಾರರು ಲಿಂಕ್ ವ್ಯವಸ್ಥೆ ಅಳವಡಿಸಿಕೊಂಡಿರುವದರಿAದ ಗೊಬ್ಬರದ ಅಭಾವ ಉಂಟಾಗುತ್ತಿದೆ. ಯೂರಿಯಾದೊಂದಿಗೆ ಇತರ ಗೊಬ್ಬರಗಳನ್ನು ಖರೀದಿಸಬೇಕೆಂಬ ಲಿಂಕ್ ವ್ಯವಸ್ಥೆ ಮಾಡಿಕೊಂಡಿರುವದರಿAದ ಈ ರೀತಿ ಅಭಾವ ತಲೆದೋರುತ್ತಿರುವದಾಗಿ ಹೇಳುತ್ತಾರೆ. ಆದರೆ ವಿಎಸ್‌ಎಸ್‌ಎನ್‌ಗಳಲ್ಲಿ ಗೊಬ್ಬರಗಳು ಲಭಿಸುತ್ತಿವೆ. ಕೃಷಿ ಇಲಾಖೆ ಮೂಲಕ ವಿಎಸ್‌ಎಸ್‌ಎನ್‌ಗಳಿಗೆ ಸರಬರಾಜಾಗುತ್ತಿದೆ. @ಸಂತೋಷ್