ಗೋಣಿಕೊಪ್ಪಲು, ಸೆ. ೧೨: ರೈತ ಸಂಘದ ನಿರಂತರ ಹೋರಾಟದ ಫಲವಾಗಿ ಕಷ್ಟದಲ್ಲಿ ಸಿಲುಕಿದ್ದ ಕಾರ್ಮಿಕನಿಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಸಾಧಿಸುವ ಮೂಲಕ ಒಂದೂವರೆ ವರ್ಷದ ನಂತರ ಪೂರ್ಣ ಪ್ರಮಾಣದ ಪರಿಹಾರವನ್ನು ನೊಂದ ಫಲಾನುಭವಿಗೆ ಕೊಡಿಸುವಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಯಶಸ್ವಿಯಾಗಿದೆ. ಇತ್ತೀಚೆಗೆ ಕಾವಲನಿಗೆ ರೂ. ೫ ಲಕ್ಷದ ಪರಿಹಾರದ ಚೆಕ್ ಅನ್ನು ಅರಣ್ಯ ಇಲಾಖಾ ಅಧಿಕಾರಿಗಳ ಸಮ್ಮುಖದಲ್ಲಿ ನೀಡಲಾಯಿತು. ಕಾಡಾನೆಯಿಂದ ದಾಳಿಗೆ ಒಳಗಾಗಿ ತನ್ನ ಬಲಗಾಲನ್ನು ಕಳೆದುಕೊಂಡು ಇವರು ಮನೆಯಲ್ಲಿಯೇ ಉಳಿದಿದ್ದರು.

ದಕ್ಷಿಣ ಕೊಡಗಿನ ಮಾಯಮುಡಿ ಗ್ರಾಮದ ಕಲ್ತೊಡು ನಿವಾಸಿ ಯರವರ ಕಾವಲ ಎಂಬವರು ೨೦೨೦ ಮಾರ್ಚ್ ೨೦ರ ಸಂಜೆ ೭ ಗಂಟೆ ಸುಮಾರಿಗೆ ತನ್ನ ದೈನಂದಿನ ಕೂಲಿ ಕೆಲಸ ಮುಗಿಸಿ ತನ್ನ ಮನೆಗೆ ಬರುತ್ತಿದ್ದ ವೇಳೆ ರಸ್ತೆ ಬದಿಯಲ್ಲಿಯೇ ಕಾಡಾನೆ ಎದುರಾಗಿ ದಾಳಿ ನಡೆಸಿತ್ತು. ಈ ವೇಳೆ ಬಲಗಾಲು ಮುರಿತಗೊಂಡು ಜೀವನ್ಮರಣ ಸ್ಥಿತಿಯಲ್ಲಿ ನರಳಾಡಿದ್ದ ಇವರನ್ನು ಸ್ಥಳೀಯ ಗ್ರಾಮಸ್ಥರು ಕೂಡಲೇ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಕಾವಲನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಕರ್ನಾಟಕ ರಾಜ್ಯ ರೈತ ಸಂಘದ ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಗೋಣಿಕೊಪ್ಪಲು, ಸೆ. ೧೨: ರೈತ ಸಂಘದ ನಿರಂತರ ಹೋರಾಟದ ಫಲವಾಗಿ ಕಷ್ಟದಲ್ಲಿ ಸಿಲುಕಿದ್ದ ಕಾರ್ಮಿಕನಿಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಸಾಧಿಸುವ ಮೂಲಕ ಒಂದೂವರೆ ವರ್ಷದ ನಂತರ ಪೂರ್ಣ ಪ್ರಮಾಣದ ಪರಿಹಾರವನ್ನು ನೊಂದ ಫಲಾನುಭವಿಗೆ ಕೊಡಿಸುವಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಯಶಸ್ವಿಯಾಗಿದೆ. ಇತ್ತೀಚೆಗೆ ಕಾವಲನಿಗೆ ರೂ. ೫ ಲಕ್ಷದ ಪರಿಹಾರದ ಚೆಕ್ ಅನ್ನು ಅರಣ್ಯ ಇಲಾಖಾ ಅಧಿಕಾರಿಗಳ ಸಮ್ಮುಖದಲ್ಲಿ ನೀಡಲಾಯಿತು. ಕಾಡಾನೆಯಿಂದ ದಾಳಿಗೆ ಒಳಗಾಗಿ ತನ್ನ ಬಲಗಾಲನ್ನು ಕಳೆದುಕೊಂಡು ಇವರು ಮನೆಯಲ್ಲಿಯೇ ಉಳಿದಿದ್ದರು.

ದಕ್ಷಿಣ ಕೊಡಗಿನ ಮಾಯಮುಡಿ ಗ್ರಾಮದ ಕಲ್ತೊಡು ನಿವಾಸಿ ಯರವರ ಕಾವಲ ಎಂಬವರು ೨೦೨೦ ಮಾರ್ಚ್ ೨೦ರ ಸಂಜೆ ೭ ಗಂಟೆ ಸುಮಾರಿಗೆ ತನ್ನ ದೈನಂದಿನ ಕೂಲಿ ಕೆಲಸ ಮುಗಿಸಿ ತನ್ನ ಮನೆಗೆ ಬರುತ್ತಿದ್ದ ವೇಳೆ ರಸ್ತೆ ಬದಿಯಲ್ಲಿಯೇ ಕಾಡಾನೆ ಎದುರಾಗಿ ದಾಳಿ ನಡೆಸಿತ್ತು. ಈ ವೇಳೆ ಬಲಗಾಲು ಮುರಿತಗೊಂಡು ಜೀವನ್ಮರಣ ಸ್ಥಿತಿಯಲ್ಲಿ ನರಳಾಡಿದ್ದ ಇವರನ್ನು ಸ್ಥಳೀಯ ಗ್ರಾಮಸ್ಥರು ಕೂಡಲೇ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಕಾವಲನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಕರ್ನಾಟಕ ರಾಜ್ಯ ರೈತ ಸಂಘದ ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಸ್ಪತ್ರೆಗೆ ದಾಖಲು ಮಾಡಿಸಿದರು. ಕಾವಲನ ಬಲಗಾಲು ಕೊಳೆತ ಸ್ಥಿತಿಯಲ್ಲಿದ್ದ ಕಾರಣ ಕಾಲನ್ನು ತುಂಡರಿಸಿ ಚಿಕಿತ್ಸೆ ನೀಡಿದರೆ ಜೀವ ಉಳಿಸಬಹುದು ಎಂದು ವೈದ್ಯರು ರೈತ ಮುಖಂಡರ ಬಳಿ ಹೇಳಿದ್ದರು.

ಇದರಿಂದ ಕಾವಲನ ಜೀವ ಉಳಿಸಲು ವೈದ್ಯರ ಸಲಹೆಯಂತೆ ಚಿಕಿತ್ಸೆ ನೀಡಲು ಮನವಿ ಮಾಡಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹಿರಿಯ ವೈದ್ಯರನ್ನು ಭೇಟಿ ಮಾಡಿ ಕಾಲನ್ನು ಶಸ್ತç ಚಿಕಿತ್ಸೆಯ ಮೂಲಕ ಗುಣಪಡಿಸಲು ಹಾಗೂ ಇದಕ್ಕೆ ಬೇಕಾದ ಸಂಪೂರ್ಣ ವೆಚ್ಚವನ್ನು ಇಲಾಖೆಯಿಂದ ಭರಿಸುವ ವ್ಯವಸ್ಥೆ ಮಾಡುವುದಾಗಿ ವೈದ್ಯರಿಗೆ ಭರವಸೆ ನೀಡಿದರು.

ಕೂಡಲೇ ಶಸ್ತçಚಿಕಿತ್ಸೆ ಮುಂದಾದ ವೈದ್ಯರು ಚಿಕಿತ್ಸೆಯನ್ನು ಸಫಲಗೊಳಿಸಿದರು. ಕೆಲ ದಿನದ ನಂತರ ಕಾವಲ ತನ್ನ ಮನೆಗೆ ಮರಳುವಂತಾಯಿತು. ಈ ವೇಳೆ ಕಾಲು ಕಳೆದುಕೊಂಡ ಕಾವಲನ ದಿನ ಬಳಕೆಯ ಸಾಮಗ್ರಿಗಳಿಗಾಗಿ ಒಂದು ಲಕ್ಷ ಹಣವನ್ನು ಕಾವಲನಿಗೆ ಇಲಾಖೆಯಿಂದ ಕೊಡಿಸುವ ಪ್ರಯತ್ನ ನಡೆಸುವಲ್ಲಿ ಸಫಲರಾದರು. ಅರಣ್ಯ ಇಲಾಖೆಯ ನಿರ್ಲಕ್ಷತೆಯಿಂದಾಗಿ ಕಾರ್ಮಿಕ ಕಾವಲ ಕಾಲು ಕಳೆದುಕೊಳ್ಳುವಂತಾಯಿತು. ಕುಟುಂಬಕ್ಕೆ ಜೀವನದಾರವಾಗಿದ್ದ ಮನೆ ಯಜಮಾನನ ಅಂಗವಿಕಲತೆಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿ ಕುಟುಂಬಕ್ಕೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದರು.

ಮನು ಸೋಮಯ್ಯ ನೇತೃತ್ವದಲ್ಲಿ ರೈತ ಸಂಘದ ಪದಾಧಿಕಾರಿಗಳ ತಂಡ ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳೊಡನೆ ಸಭೆ ನಡೆಸಿ ಕಾವಲನ ಈ ಸ್ಥಿತಿಗೆ ಕಾರಣವಾದ ಕಾಡುಪ್ರಾಣಿಗಳ ಹಾವಳಿಯನ್ನು ಕೂಡಲೇ ನಿಯಂತ್ರಿಸಬೇಕು. ಹಾಗೂ ಈ ಪ್ರಕರಣವು ವಿಶಿಷ್ಟ ಪ್ರಕರಣವೆಂದು ಪರಿಗಣಿಸಿ ಸರಕಾರದಿಂದ ಕಾಡುಪ್ರಾಣಿಗಳಿಂದ ಮರಣಪಟ್ಟವರಿಗೆ ನೀಡುವ ಪರಿಹಾರ ಮೊತ್ತದಂತೆ ಕಾವಲನನ್ನು ಶಾಶ್ವತ ಅಂಗವಿಕಲನೆAದು ಪರಿಗಣಿಸಿ ಮುಂದಿನ ಜೀವನಾದರಕ್ಕೆ ರೂ. ೫ ಲಕ್ಷ ನೀಡುವಂತೆಯೂ ಹಾಗೂ ೫ ಸಾವಿರದ ಮಾಸಿಕ ಪಿಂಚಣಿ ನೀಡಲು ಅಧಿಕಾರಿಗಳನ್ನು ಮನವೊಲಿಸ ಲಾಯಿತು.

ಕಾವಲನ ಪರಿಹಾರ ಬಿಡುಗಡೆಗೆ ಬೇಕಾದ ಅಗತ್ಯ ದಾಖಲೆಗಳನ್ನು ರೈತ ಸಂಘದ ಪದಾಧಿಕಾರಿಗಳು ಒದಗಿಸಿದ ತರುವಾಯ ಅರಣ್ಯ ಇಲಾಖೆಯ ಅಧಿಕಾರಿಗಳು ರೂ. ೫ ಲಕ್ಷದ ಪರಿಹಾರವನ್ನು ಬಿಡುಗಡೆಗೊಳಿಸಿದರು. ಇದರಿಂದ ಕಾಲು ಕಳೆದುಕೊಂಡ ಕಾವಲನ ಜೀವನೋಪಾಯಕ್ಕೆ ಸಹಕಾರಿಯಾಯಿತು. ಮಾಸಿಕ ಪಿಂಚಣಿ ಸದ್ಯದಲ್ಲಿಯೇ ಬಿಡುಗಡೆಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ಕಾವಲನಿಗೆ ಅರಣ್ಯ ಇಲಾಖೆಯ ವತಿಯಿಂದ ಮಂಜೂರಾದ ಪರಿಹಾರವನ್ನು ವಿತರಿಸುವ ವೇಳೆ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಬಾಳೆಲೆ ಹೋಬಳಿ ಅಧ್ಯಕ್ಷ ಕಿಶಮಾಚಯ್ಯ, ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ಪೊನ್ನಂಪೇಟೆ ಅಧ್ಯಕ್ಷ ಚೊಟ್ಟೆಕಾಳಪಂಡ ಮನು, ನಲ್ಲೂರು ರೈತ ಮುಖಂಡ ತೀತರಮಾಡ ರಾಜ, ಮಾಯಮುಡಿಯ ಎಸ್.ಎಸ್. ಸುರೇಶ್, ಕಿರುಗೂರಿನ ಚಾರಿಮಂಡ ಮಧು, ಮಾಯಮುಡಿಯ ಜಗದೀಶ್, ಕಾಕೇರ ಮಂಜುನಾಥ್, ಅರಣ್ಯ ಇಲಾಖೆಯ ಅಧಿಕಾರಿಗಳಾದ ಉಮಾಶಂಕರ್, ಆರ್‌ಎಫ್‌ಒ ಅಶೋಕ್ ಮುಂತಾದವರು ಉಪಸ್ಥಿತರಿದ್ದರು.

- ಹೆಚ್.ಕೆ. ಜಗದೀಶ್