ಮಡಿಕೇರಿ: ಮಡಿಕೇರಿ ಇನ್ನರ್ ವೀಲ್ ಸಂಸ್ಥೆ ವತಿಯಿಂದ ಕಡಗದಾಳು ಸರ್ಕಾರಿ ಶಾಲಾ ಶಿಕ್ಷಕಿ ಗಂಗಮ್ಮ ಅವರನ್ನು ಸನ್ಮಾನಿಸುವ ಮೂಲಕ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.

ಕಡಗದಾಳು ಸರ್ಕಾರಿ ಪ್ರಾಥಮಿಕ ಶಾಲೆಯ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ ಎಂ.ಜೆ. ಗಂಗಮ್ಮ ಅವರನ್ನು ಸನ್ಮಾನಿಸಲಾಯಿತಲ್ಲದೇ ಈ ಸಂದರ್ಭ ಶಾಲೆಗೆ ಸ್ಟಾಂಡ್ ಸಹಿತ ಸ್ಯಾನಿಟೈಸರ್ ಕೊಡುಗೆ ನೀಡಲಾಯಿತು.

ಇನ್ನರ್ ವೀಲ್ ಸದಸ್ಯೆ ಡಾ. ಶುಭಾ ರಾಜೇಶ್ ಆಯುರ್ವೇದ ಪದ್ಧತಿ ಮೂಲಕ ಕೋವಿಡ್ ತಡೆ ಸಂಬAಧಿತ ಉಪನ್ಯಾಸ ನೀಡಿದರು. ಶಾಲಾ ಶಿಕ್ಷಕಿಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಇನ್ನರ್ ವೀಲ್ ವತಿಯಿಂದ ಬಹುಮಾನ ನೀಡಲಾಯಿತು.

ಇನ್ನರ್ ವೀಲ್ ಅಧ್ಯಕ್ಷೆ ಶಪಾಲಿ ರೈ, ಕಾರ್ಯದರ್ಶಿ ಶಮ್ಮಿಪ್ರಭು, ನಿರ್ದೇಶಕಿಯರಾದ ನಮಿತಾ ರೈ, ಲಲಿತಾ ರಾಘವನ್, ಲತಾ ಸುಬ್ಬಯ್ಯ ಪಾಲ್ಗೊಂಡಿದ್ದರು.