ವೀರಾಜಪೇಟೆ: ಗ್ರಾಮೀಣ ಕ್ರೀಡೆಗಳು ಶಾಶ್ವತವಾಗಿ ಉಳಿಯ ಬೇಕಾದರೆ ಹಬ್ಬಹರಿದಿನಗಳನ್ನು ಎಲ್ಲರೂ ಆಚರಿಸುವಂತಾಗಬೇಕು ಎಂದು ಕಾಫಿ ಬೆಳೆಗಾರ ಮಂಡೇಪAಡ ರತನ್ ಕುಟ್ಟಯ್ಯ ಹೇಳಿದರು.

ಚೆಂಬೆಬೆಳ್ಳೂರು ಕೊಡವ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಕೈಲ್‌ಪೋಳ್ದ್ ಕ್ರೀಡಾಕೂಟದಲ್ಲಿ ಮಾತನಾಡಿ ಕ್ರೀಡಾ ಜಿಲ್ಲೆ ಎಂದೇ ಹೆಸರುವಾಸಿಯಾದ ಕೊಡಗು ಹಾಕಿ ಆಟದ ತವರೂರು. ಈ ಬಾರಿ ಕೊಡಗಿನ ಓರ್ವ ಆಟಗಾರನಿಗೂ ಅವಕಾಶ ಲಭಿಸದಿರುವುದು ವಿಷಾದನೀಯ. ಇಂದಿನ ಬಹುತೇಕ ಯುವಪೀಳಿಗೆ ಮಾದಕ ಚಟಕ್ಕೆ ಬಲಿಯಾಗುತ್ತಿದ್ದು, ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಿರಿಯರ ಮಾತಿಗೆ ಗೌರವ ಕೊಡದೆ ನಡೆಯುತ್ತಿದ್ದು, ನಾವುಗಳು ಕಂಡುಕಾಣದ ರೀತಿಯಲ್ಲಿ ಇರುವ ಪರಿಸ್ಥಿತಿ ಎದುರಾಗಿದೆ ಎಂದು ವಿಷಾದಿಸಿದರು.

ಪ್ರಗತಿಪರ ರೈತ ಚಾರಿಮಂಡ ಜೀವನ್ ಮಾತನಾಡಿ ಭಾರತ ಕೃಷಿ ಪ್ರಧಾನವಾದ ದೇಶ. ಕೃಷಿಗೆ ಹೆಚ್ಚಿನ ಒತ್ತು ನೀಡಿದರೆ ನಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ವಿವಿಧ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಉನ್ನತ ಹುದ್ದೆಯಲ್ಲಿರುವವರು ಇಂದು ಕೃಷಿಯತ್ತ ಒಲವು ತೋರುತ್ತಿದ್ದಾರೆ. ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದರೆ ಉತ್ತಮ ಇಳುವರಿ ಪಡೆದುಕೊಳ್ಳಬಹುದು ಎಂದು ಹೇಳಿದರು.

ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಕ್ರೀಡಾಕೂಟದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಕಲ್ಲೆಂಗಡ ನವೀನ್ (ಪ್ರ), ಪ್ರಸನ್ನಕುಮಾರ (ದ್ವಿ), ಚೀಯಕಪೂಳಂಡ ಪಳಂಗಪ್ಪ (ತೃ), ಸ್ಥಾನ ಪಡೆದುಕೊಂಡರು. ಸಾರ್ವಜನಿಕರಿಗೆ ವಿವಿಧ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಲಾಗಿತ್ತು.

ಇದೇ ಸಂದರ್ಭ ಪ್ರಗತಿಪರ ಕೃಷಿಕರಾದ ಚಾರಿಮಂಡ ಜೀವನ್, ಮಚ್ಚಮಾಡ ರವಿ ಅಪ್ಪಣ್ಣ, ಮಂಡೇಪAಡ ರಘುಚಂಗಪ್ಪ ಅವರನ್ನು ಸನ್ಮಾನಿಲಾಯಿತು. ಚೆÀಂಬೆಬೆಳ್ಳೂರು ಕೊಡವ ಅಸೋಸಿಯೇಷನ್ ಅಧ್ಯಕ್ಷ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪೊರಕೊಂಡ ಬೋಪಣ್ಣ, ಚೇಂದAಡ ಶಮ್ಮಿ ಮಾದಯ್ಯ, ಕಾರ್ಯದರ್ಶಿ ಮಂಡೇಪAಡ ಮುತ್ತಪ್ಪ ಉಪಸ್ಥಿತರಿದ್ದರು.