ಸೋಮವಾರಪೇಟೆ, ಸೆ.೧೧: ತೋಟದಲ್ಲಿದ್ದ ಸಿಲ್ವರ್ ಮರಗಳನ್ನು ಕಳವು ಮಾಡಿ ಸಾಗಾಟಗೊಳಿಸಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಶನಿವಾರಸಂತೆ ಪೊಲೀಸರು, ಕಳುವಾಗಿದ್ದ ಮರ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠಕ್ಕೆ ಸೇರಿದ ತೋಟದಲ್ಲಿ ಬೆಳೆಯಲಾಗಿದ್ದ ಸಿಲ್ವರ್ ಮರಗಳನ್ನು ಕಳವು ಮಾಡಿ ಸಾಗಾಟಗೊಳಿಸಿದ್ದ ಹಾಸನ ಜಿಲ್ಲೆ ಕೆಂಚಮ್ಮನ ಹೊಸಕೋಟೆಯ ಸೋಮಶೇಖರ, ಕಿರಿಕೊಡ್ಲಿ ಗ್ರಾಮದ ಪುಟ್ಟಸ್ವಾಮಿ, ಹೊಸೂರು ಗ್ರಾಮದ ಗೌತಮ್ ಅವರುಗಳನ್ನು ಶನಿವಾರಸಂತೆ ಪೊಲೀಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ ನೇತೃತ್ವದ ತಂಡ ಬಂಧಿಸಿದೆ.
ಇದರೊAದಿಗೆ ಕಳುವಾಗಿದ್ದ ರೂ. ೨೦ ಸಾವಿರ ಮೌಲ್ಯದ ಮರಗಳು, ಕೃತ್ಯಕ್ಕೆ ಬಳಸಿದ್ದ ೪.೫೦ ಲಕ್ಷ ಮೌಲ್ಯದ ಟಾಟಾ ಸುಮೋ, ಟ್ರಾö್ಯಕ್ಟರ್‌ನ್ನು ವಶಕ್ಕೆ ಪಡೆಯಲಾಗಿದೆ. ಎಸ್.ಪಿ. ಕ್ಷಮಾ ಮಿಶ್ರ ಹಾಗೂ ಡಿವೈಎಸ್‌ಪಿ ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ, ಎಎಸ್‌ಐ ಶಶಿಧರ್, ಸಿಬ್ಬಂದಿಗಳಾದ ಲೋಕೇಶ್, ಶಶಿಕುಮಾರ್, ಡಿಂಪಲ್, ಮುರುಳಿ, ಷಣ್ಮುಖನಾಯಕ, ಧನಂಜಯ ಅವರುಗಳು ಭಾಗವಹಿಸಿದ್ದರು.