ಗುಜರಾತ್ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್
ಅಹಮದಾಬಾದ್, ಸೆ. ೧೨: ಗುಜರಾತಿನ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಆಯ್ಕೆಯಾಗಿದ್ದಾರೆ. ಇಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಭೂಪೇಂದ್ರ ಪಟೇಲ್ ಅವರ ಹೆಸರನ್ನು ಮುಖ್ಯಮಂತ್ರಿ ಹುದ್ದೆಗೆ ಅಂತಿಮಗೊಳಿಸಲಾಯಿತು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪಕ್ಷದ ವೀಕ್ಷಕರಾಗಿ ಸಭೆಯಲ್ಲಿ ಪಾಲ್ಗೊಂಡಿದ್ದರು. ವಿಜಯ್ ರೂಪಾನಿ ನಿನ್ನೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಪಟೇಲ್ ಘಾಟ್ ಲೋಡಿಯಾ ಕ್ಷೇತ್ರದ ಶಾಸಕರಾಗಿದ್ದಾರೆ. ಅವರಿಗಿಂತ ಮೊದಲು ಈ ಕ್ಷೇತ್ರವನ್ನು ಮಾಜಿ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಪ್ರತಿನಿಧಿಸುತ್ತಿದ್ದರು. ಪಟೇಲ್ ಸರ್ಕಾರ ರಚನೆ ಸಂಬAಧ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಅಪಘಾತದಲ್ಲಿ ಆರು ಮಂದಿ ದುರ್ಮರಣ
ಚಿಕ್ಕಬಳ್ಳಾಪುರ, ಸೆ. ೧೨: ಲಾರಿ ಹಾಗೂ ಜೀಪ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಜನ ಸ್ಥಳದಲ್ಲೇ ಮೃತಪಟ್ಟಿರುವ ಧಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಅಲವಾಟ ಗೇಟ್ ಬಳಿ ಭಾನುವಾರ ನಡೆದಿದೆ. ಇಂದು ಸಂಜೆ ೪ ಗಂಟೆ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದ್ದು, ಮೃತರ ಗುರುತು ಪತ್ತೆಯಾಗಿಲ್ಲ. ಜೀಪ್‌ನಲ್ಲಿ ಒಟ್ಟು ೧೧ ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಾಡಿಗೋಳ್ ಕ್ರಾಸ್‌ನಿಂದ ಚಿಂತಾಮಣಿಗೆ ಪ್ರಯಾಣಿಕರನ್ನು ಕರೆತರುತ್ತಿದ್ದ ಜೀಪ್‌ಗೆ ಎದುರುಗಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಜೀಪ್ ಸಂಪೂರ್ಣ ಜಖಂಗೊAಡಿದೆ.
ಸಮುದ್ರದ ದಡದಲ್ಲಿ ಯುವತಿಯ ಮೃತದೇಹ ಪತ್ತೆ
ಮಂಗಳೂರು, ಸೆ. ೧೨: ನಗರದ ಹೊಯ್ಗೆ ಬಜಾರ್‌ನ ಸಮುದ್ರದ ದಡದಲ್ಲಿ ಅಪರಿಚಿತ ಯುವತಿಯ ಮೃತದೇಹ ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ. ಮೃತ ಯುವತಿಯು ಸುಮಾರು ೫ ಅಡಿ ಎತ್ತರವಿದ್ದು, ಕಪ್ಪು ಬಣ್ಣದ ಟೀ-ಶರ್ಟ್, ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ. ಒಂದು ಕೈಯಲ್ಲಿ ಕೆಂಪು ದಾರ ಮತ್ತು ಕಪ್ಪು ಬಳೆ ಹಾಕಿಕೊಂಡಿದ್ದು, ಉದ್ದ ಕೂದಲು ಹೊಂದಿದ್ದಾರೆAದು ತಿಳಿದುಬಂದಿದೆ. ಮೃತದೇಹದ ಮೇಲೆ ಯಾವುದೇ ಗಾಯಗೊಂಡ ಕಲೆಗಳು ಮೇಲ್ನೋಟಕ್ಕೆ ಕಂಡುಬAದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದು, ಈ ಸಂಬAಧ ಮಂಗಳೂರು ದಕ್ಷಿಣ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.
೯೩ ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಗಳ ವಿಸರ್ಜನೆ
ಬೆಂಗಳೂರು, ಸೆ. ೧೨: ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ಗಣೇಶ ಚತುರ್ಥಿ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಸುಮಾರು ೯೩,೫೨೪ ಗಣೇಶ ಮೂರ್ತಿಗಳನ್ನು ಕಲ್ಯಾಣಿಗಳು ಮತ್ತು ಮೊಬೈಲ್ ಟ್ಯಾಂಕ್‌ಗಳಲ್ಲಿ ವಿಸರ್ಜನೆ ಮಾಡಲಾಗಿದೆ. ವಾರ್ಡ್ನಲ್ಲಿ ಒಂದಕ್ಕಿAತ ಹೆಚ್ಚು ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಮೆರವಣಿಗೆ ಕೈಗೊಳ್ಳುವ ಮೂಲಕ ಸರ್ಕಾರದ ಆದೇಶ ಉಲ್ಲಂಘಿಸಿದ ಪ್ರಕರಣಗಳು ನಡೆದಿವೆ. ಗಣೇಶ ಹಬ್ಬದ ಮೊದಲ ದಿನ ಎಂಟು ವಲಯಗಳಲ್ಲಿ ಒಟ್ಟು ೩೮೨ ಮೊಬೈಲ್ ಟ್ಯಾಂಕ್‌ಗಳು ೧೦ ಕಲ್ಯಾಣಿಗಳನ್ನು ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಉದ್ದೇಶದಿಂದ ಬಿಬಿಎಂಪಿ ನಿರ್ಮಿಸಿತ್ತು. ಶುಕ್ರವಾರ ಬೆಳಿಗ್ಗೆ ೭ ರಿಂದ ತಡರಾತ್ರಿವರೆಗೂ ಭಕ್ತಾದಿಗಳು ಗಣೇಶ ಮೂರ್ತಿ ವಿಸರ್ಜಿಸುತ್ತಿದ್ದ ದೃಶ್ಯ ಕಂಡುಬAತು. ೯೩,೫೮೪ ಮೂರ್ತಿಗಳನ್ನು ವಿಸರ್ಜಿಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ. ಪೂರ್ವ ವಲಯದಲ್ಲಿ ೭೬ ಮೊಬೈಲ್ ಟ್ಯಾಂಕ್ ವ್ಯವಸ್ಥೆ ಮಾಡಿದ್ದು, ೧೮೧೩ ಮತ್ತು ಹಲಸೂರು ಕೆರೆಯ ಕಲ್ಯಾಣಿಯಲ್ಲಿ ೧೯,೧೨೩ ಸೇರಿದಂತೆ ೨೦,೯೩೬ ಗಣೇಶ ಮೂರ್ತಿಗಳ್ನು ವಿಸರ್ಜಿಸಲಾಯಿತು. ಪಶ್ಚಿಮ ವಲಯದಲ್ಲಿ ೪೦ ಮೊಬೈಲ್ ಟ್ಯಾಂಕ್‌ನಲ್ಲಿ ೧೧,೮೬೦ ಹಾಗೂ ಸ್ಯಾಂಕಿ ಕೆರೆ ಕಲ್ಯಾಣಿಯಲ್ಲಿ ೧೫,೬೫೦ ಗಣೇಶ ಮೂರ್ತಿ ಸೇರಿದಂತೆ ಒಟ್ಟು ೨೭,೫೧೦ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ದಕ್ಷಿಣ ವಲಯದಲ್ಲಿ ೪೬ ಮೊಬೈಲ್ ಟ್ಯಾಂಕ್ ಮತ್ತು ಯಡಿಯೂರು ಕೆರೆ ಕಲ್ಯಾಣಿ, ವಿವೇಕಾನಂದ ಕಲ್ಯಾಣಿಯಲ್ಲಿ ಒಟ್ಟು ೩೩,೦೦೬ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ದಾಸರಹಳ್ಳಿಯಲ್ಲಿ ೧೬ ಮೊಬೈಲ್ ಟ್ಯಾಂಕ್‌ನಲ್ಲಿ ೪೬೮ ಮತ್ತು ಚೊಕ್ಕಸಂದ್ರದ ಕೆರೆ ಕಲ್ಯಾಣಿಯಲ್ಲಿ ೨೪೩ ಸೇರಿ ೭೧೧ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಮಹದೇವಪುರದಲ್ಲಿ ೨೬೫೦, ಬೊಮ್ಮನಹಳ್ಳಿಯಲ್ಲಿ ೨೨೯೬, ಯಲಹಂಕದಲ್ಲಿ ೨೨೭೬ ಮತ್ತು ರಾಜರಾಜೇಶ್ವರಿ ನಗರದಲ್ಲಿ ೪೧೩೯ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ.
ಉಗ್ರರ ದಾಳಿ : ಪೊಲೀಸ್ ಅಧಿಕಾರಿಗೆ ಗಾಯ
ಶ್ರೀನಗರ, ಸೆ. ೧೨: ನಗರದ ಖನ್ಯಾರ್ ಪ್ರದೇಶದಲ್ಲಿ ಭಾನುವಾರ ನಡೆದ ಉಗ್ರರ ದಾಳಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಗಾಯ ಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಮಧ್ಯಾಹ್ನ ೧.೩೫ರ ಸುಮಾರಿಗೆ ಖನ್ಯಾರ್‌ನಲ್ಲಿ ಭಯೋತ್ಪಾದಕರು ಪೊಲೀಸ್ ನಾಕಾ ಪಾರ್ಟಿಯ ಮೇಲೆ ಗುಂಡು ಹಾರಿಸಿದರು. ದಾಳಿಯಲ್ಲಿ ಖನ್ಯಾರ್‌ನ ಪಿಎಸ್‌ಐ (ಪ್ರೊಬೇಷನರಿ ಸಬ್ ಇನ್ಸ್ಪೆಕ್ಟರ್) ಅರ್ಷಿದ್ ಅಹ್ಮದ್ ಅವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಗಾಯ ಗೊಂಡ ಅಧಿಕಾರಿಯನ್ನು ಚಿಕಿತ್ಸೆಗಾಗಿ ಇಲ್ಲಿನ ಎಸ್‌ಎಂಹೆಚ್‌ಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಭದ್ರತಾ ಪಡೆ ಇಡೀ ಪ್ರದೇಶವನ್ನು ಸುತ್ತುವರಿದಿದ್ದಾರೆ ಮತ್ತು ದಾಳಿಕೋರರನ್ನು ಹಿಡಿಯಲು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ವರ್ಗಾವಣೆ ವಿಚಾರ : ಸುಪ್ರೀಂ ಕೋರ್ಟ್ ತೀರ್ಪು
ನವದೆಹಲಿ, ಸೆ. ೧೨: ತನ್ನ ಉದ್ಯೋಗಿಯನ್ನು ಎಲ್ಲಿಗೆ ವರ್ಗಾವಣೆ ಮಾಡಬೇಕೆಂಬುದು ಸಂಸ್ಥೆಗೆ ಬಿಟ್ಟ ವಿಚಾರ. ತನ್ನನ್ನು ಇದೇ ಸ್ಥಳಕ್ಕೆ ವರ್ಗಾವಣೆ ಮಾಡಿ ಎಂದು ಸೂಚಿಸುವ ಅಧಿಕಾರ ಉದ್ಯೋಗಿಗೆ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪಿತ್ತಿದೆ. ಮಹಿಳಾ ಉಪನ್ಯಾಸಕರೊಬ್ಬರು ಈ ಸಂಬAಧ ಅಲಾಹಾಬಾದ್ ಹೈಕೋರ್ಟ್ನಲ್ಲಿ ೨೦೧೭ರಲ್ಲಿ ದಾವೆ ಹೂಡಿದ್ದರು. ತಮಗೆ ಬೇಕಾದ ಕಡೆ ಕಾಲೇಜು ಸಂಸ್ಥೆ ವರ್ಗಾವಣೆ ಮಾಡುತ್ತಿಲ್ಲ ಎಂದು ಅವರು ಅರ್ಜಿ ಸಲ್ಲಿಸಿದ್ದರು. ಅಲಾಹಾಬಾದ್ ಹೈಕೋರ್ಟ್ ಅದು ಸಂಸ್ಥೆಯವರಿಗೆ ಬಿಟ್ಟ ವಿಚಾರ. ಅವರಿಗೆ ಎಲ್ಲಿ ಅವಶ್ಯಕತೆ ಇರುತ್ತದೆಯೋ ಅಲ್ಲಿಗೆ ವರ್ಗಾವಣೆ ಮಾಡುವುದು ಅವರ ಅಧಿಕಾರ ಎಂದು ತೀರ್ಪು ನೀಡಿತ್ತು. ಅರ್ಜಿದಾರರು ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಬಾರಾಮುಲ್ಲಾ ಜಿಲ್ಲೆಯಲ್ಲಿ ಮೇಘಸ್ಫೋಟ
ಬಾರಾಮುಲ್ಲಾ, ಸೆ. ೧೨: ಉಗ್ರರ ದಾಳಿಗಳ ನಡುವೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಂದು ಆತಂಕ ಸೃಷ್ಟಿಯಾಗಿದೆ. ಬಾರಾಮುಲ್ಲಾ ಜಿಲ್ಲೆಯಲ್ಲಿ ಕಫರ್‌ನಾರ್ ಬಹಕ್‌ನಲ್ಲಿ ಮೇಘಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ನಾಪತ್ತೆಯಾಗಿದ್ದ ಐವರ ಪೈಕಿ ಓರ್ವ ಮೃತದೇಹ ಪತ್ತೆಯಾಗಿದ್ದು, ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ನಾಪತ್ತೆಯಾಗಿರುವ ನಾಲ್ವರು ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆಂದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಪಾಕಿಸ್ತಾನದಿಂದ ಕಾಬೂಲ್‌ಗೆ ವಾಣಿಜ್ಯ ವಿಮಾನ ಸೇವೆ
ಇಸ್ಲಾಮಾಬಾದ್, ಸೆ. ೧೨: ಪಾಕಿಸ್ತಾನ ಅಂರ‍್ರಾಷ್ಟಿçÃಯ ಏರ್ ಲೈನ್ಸ್ (ಪಿಐಎ) ಇಸ್ಲಾಮಾಬಾದ್‌ನಿಂದ ಕಾಬೂಲ್‌ಗೆ ಮುಂದಿನ ವಾರದಿಂದ ವಾಣಿಜ್ಯ ವಿಮಾನಗಳನ್ನು ಪ್ರಾರಂಭಿಸಲಿದೆ. ತಾಲಿಬಾನ್ ಕಳೆದ ತಿಂಗಳು ಅಧಿಕಾರ ವಹಿಸಿಕೊಂಡ ಬಳಿಕ ಅಫ್ಘಾನಿಸ್ತಾನಕ್ಕೆ ವಿದೇಶವೊಂದು ಪ್ರಾರಂಭಿಸುತ್ತಿರುವ ಮೊದಲ ವಾಣಿಜ್ಯ ವಿಮಾನಗಳ ಸೇವೆ ಇದಾಗಿದೆ. ಆ. ೩೦ ರಂದು ೧೨೦,೦೦೦ ಮಂದಿ ರಕ್ಷಣೆಯ ಸಂದರ್ಭ ಕಾಬೂಲ್ ವಿಮಾನ ನಿಲ್ದಾಣ ಹಾನಿಗೊಳಗಾಗಿತ್ತು. ತಾಲಿಬಾನ್ ಕತಾರಿಯ ತಾಂತ್ರಿಕ ಸಹಾಯ ಪಡೆದು ಕಾಬೂಲ್ ಅಂರ‍್ರಾಷ್ಟಿçÃಯ ವಿಮಾನ ನಿಲ್ದಾಣವನ್ನು ಪುನಾರಂಭ ಮಾಡಲು ಯತ್ನಿಸುತ್ತಿದೆ. ನಮಗೆ ಅಫ್ಘಾನಿಸ್ತಾನಕ್ಕೆ ವಿಮಾನಗಳ ಕಾರ್ಯಾಚರಣೆ ನಡೆಸಲು ಎಲ್ಲಾ ತಾಂತ್ರಿಕ ಕ್ಲಿಯರೆನ್ಸ್ಗಳೂ ದೊರೆತಿವೆ. ಸೆ. ೧೩ ರಂದು ಕಾಬೂಲ್‌ಗೆ ಇಸ್ಲಾಮಾಬಾದ್‌ನಿಂದ ಮೊದಲ ವಾಣಿಜ್ಯ ವಿಮಾನ ತೆರಳಲಿದೆ ಎಂದು ಪಿಐಎ ವಕ್ತಾರ ಅಬ್ದುಲ್ಲಾ ಹಫೀಜ್ ಖಾನ್ ಹೇಳಿದ್ದಾರೆ.