ಗೋಣಿಕೊಪ್ಪ ಕಾಪ್ಸ್ ಶಾಲೆ

ಮಡಿಕೇರಿ: ಕೊರೊನಾ ಸೋಂಕಿನ ಕಾರಣದಿಂದಾಗಿ ಈ ಬಾರಿ ಕಾಪ್ಸ್ನಲ್ಲಿ ಕೈಲ್ ಪೊಳ್ದ್ ಹಬ್ಬವನ್ನು ಸಾಂಕೇತಿಕವಾಗಿ ಆಚರಿಸಲಾಯಿತು.

ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ಕೊಡಗಿನ ಆಯುಧ ಪೂಜೆ ಎಂದೇ ಕರೆಯಲ್ಪಡುವ ಕೈಲ್ ಪೊಳ್ದ್ ಹಬ್ಬವನ್ನು ಕಾಪ್ಸ್ನಲ್ಲಿ ಆನ್‌ಲೈನ್ ಮೂಲಕ ಆಚರಿಸಲಾಯಿತು.

ಈ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಯಿತು. ೬ನೇ ತರಗತಿಯ ವಿದ್ಯಾರ್ಥಿ ಸುವಿನ್, ಶಿಕ್ಷಕರಾದ ಬೆಳ್ಳಿಯಪ್ಪ ಹಾಗೂ ಸೋಮಯ್ಯ ಅವರು ಹಬ್ಬದ ಆಚರಣೆಯ ಮಹತ್ವವನ್ನು ತಿಳಿಸಿಕೊಟ್ಟರು. ಪ್ರಾಂಶುಪಾಲ ಡಾ. ಬೆನ್ನಿ ಕೊರಿಯೋಕೋಸ್ ಅವರು ಎಲ್ಲರಿಗೂ ಹಬ್ಬದ ಹಿನ್ನೆಲೆಯನ್ನು ತಿಳಿಸಿ ಶುಭಾಶಯಗಳನ್ನು ಕೋರಿದರು.