ಗೋಣಿಕೊಪ್ಪ ವರದಿ, ಸೆ. ೧೧: ಉಡುಪಿ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆದ ೨೩ ವಯೋಮಿತಿಯ ರಾಜ್ಯಮಟ್ಟದ ಅಥ್ಲೆಟಿಕ್ ಸ್ಪರ್ಧೆಯ ೨೦೦ ಮತ್ತು ೪೦೦ ಮೀಟರ್ ಓಟದಲ್ಲಿ ಜ್ಯೋತಿಕಾ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

೨೦೦ ಮೀ. ಅನ್ನು ೨೪.೯ ಸೆಕೆಂಡ್, ೪೦೦ ಮೀ. ಅನ್ನು ೫೭.೮ ಸೆಕೆಂಟ್‌ನಲ್ಲಿ ಕ್ರಮಿಸಿದ್ದಾರೆ.

ಗೋಣಿಕೊಪ್ಪ ಕಾವೇರಿ ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.