ಸೋಮವಾರಪೇಟೆ, ಸೆ. ೧೨: ಕರ್ನಾಟಕ ಜಾನಪದ ಪರಿಷತ್‌ನ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ಸ್ಥಳೀಯ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಗೌರಿ ಉತ್ಸವ-ಬಾಗಿನ ವಿತರಣೆ ಕಾರ್ಯಕ್ರಮದಲ್ಲಿ ಮಹದೇಶ್ವರ ಬ್ಲಾಕ್‌ನ ಹಿರಿಯ ಲೇಖಕಿ, ಜಾನಪದ ಕಲಾವಿದೆ ಸುಲೋಚನಾ ಪ್ರಸನ್ನ ಅವರನ್ನು ಸನ್ಮಾನಿಸ ಲಾಯಿತು. ಪರಿಷತ್‌ನ ಅಧ್ಯಕ್ಷ ಕೆ.ಎ. ಪ್ರಕಾಶ್, ಗೌರವಾಧ್ಯಕ್ಷ ಮುರಳೀಧರ್, ಪ.ಪಂ. ಪ್ರಭಾರ ಅಧ್ಯಕ್ಷ ಸಂಜೀವ, ಇನ್ನರ್‌ವೀಲ್ ಮಾಜಿ ಅಧ್ಯಕ್ಷೆ ಕವಿತಾ ವಿರೂಪಾಕ್ಷ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.