ಭಾಗಮAಡಲ, ಸೆ. ೧೨: ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಕೇರಳ ರಾಜ್ಯದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಕರಿಕೆ ಚೆಕ್ ಪೋಸ್ಟ್ ಮೂಲಕ ಕೇರಳ ರಾಜ್ಯದ ಪಾಣತ್ತೂರಿನ ಪಣತಡಿ ಮೂಲದ ನಾಲ್ವರು ಕಾರ್ಮಿಕರು ಕಾರ್ ನಲ್ಲಿ (ಕೆ.ಎಲ್.-೧೪-ಕ್ಯೂ-೯೨೯೫) ೫ ಕೆ.ಜಿ. ತೂಕದ ಗೋಮಾಂಸ ಸಾಗಾಟ ಮಾಡುತ್ತಿರುವುದು ವಾಹನ ತಪಾಸಣೆ ವೇಳೆ ಪತ್ತೆಯಾಗಿದೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಲ್ಲಿಂದ ಗೋಮಾಂಸ ಸಿಕ್ಕಿತು ಎಂದು ತನಿಖೆಯ ನಂತರ ತಿಳಿದು ಬರಬೇಕಾಗಿದೆ. ಕಾರ್ಮಿಕರು ಕೇರಳ ರಾಜ್ಯಕ್ಕೆ ತೆರಳುತ್ತಿದ್ದರು ಎಂದು ಗೊತ್ತಾಗಿದೆ.