ಭಾಗಮಂಡಲ, ಸೆ. ೧೧: ಭಾಷೆ, ಸಂಸ್ಕೃತಿ, ಪರಂಪರೆ ಉಳಿವಿಗೆ ಶಿಬಿರಗಳು ಸಹಕಾರಿಯಾಗಿದೆ. ಇದರಿಂದ ಮುಂದಿನ ಪೀಳಿಗೆಗೆ ಸಂಸ್ಕೃತಿಯ ಪರಿಚಯ ಮಾಡಿದಂತಾಗುತ್ತಿದೆ ಎಂದು ಭಾಗಮಂಡಲ ಕಾವೇರಿ ಕಾಲೇಜಿನ ಪ್ರಾಂಶುಪಾಲ ಕುಂದಲ್ಪಾಡಿ ದಿವಾಕರ್ ಶ್ಲಾಘಿಸಿದರು.
ಅರೆಭಾಷೆ ಅಕಾಡೆಮಿ ಮತ್ತು ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ವತಿಯಿಂದ ಭಾಗಮಂಡಲ ಕೆವಿಜಿ ಐ.ಟಿ.ಐ. ಕಾಲೇಜಿನಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಅರೆಭಾಷೆ ಸಂಸ್ಕೃತಿ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಆಧುನಿಕತೆಯ ಜೊತೆಜೊತೆಗೆ ನಮ್ಮ ಭಾಷೆ ಕೂಡ ಬೆಳೆಯಬೇಕು .ಈ ನಿಟ್ಟಿನಲ್ಲಿ ಶಿಬಿರ ಹಾಗೂ ಇನ್ನಿತರ ಕಾರ್ಯಕ್ರಮ ನಡೆಸುವುದರೊಂದಿಗೆ ಮುಂದಿನ ಪೀಳಿಗೆಗೆ ಸಂಸ್ಕೃತಿ ಪರಿಚಯಿಸುವ ಕೆಲಸವಾಗುತ್ತಿದೆ. ಇದರಿಂದ ಸಂಸ್ಕೃತಿಯ ಉಳಿವು ಸಾಧ್ಯ. ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು ಹೆಚ್ಚಿನವರು ಮುಂದಿನ ದಿನಗಳಲ್ಲಿ ಮದುವೆ ಮತ್ತು ಇನ್ನಿತರ ಕಾರ್ಯಕ್ರಮಗಳಲ್ಲಿ ಶಿಬಿರದಲ್ಲಿ ಕಲಿತಿದ್ದನ್ನು ಪಸರಿಸುವ ಕೆಲಸ ಮಾಡಿದರೆ ಸಂಸ್ಕೃತಿ ಮತ್ತಷ್ಟು ಗಟ್ಟಿಯಾಗಲಿದೆ ಎಂದರು.
ಕುಲ್ಲಚೆಟ್ಟಿ ಕಾಶಿ ಮಾತನಾಡಿ, ಕೆಲಸವಾಗುತ್ತಿದೆ. ಇದರಿಂದ ಸಂಸ್ಕೃತಿಯ ಉಳಿವು ಸಾಧ್ಯ. ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು ಹೆಚ್ಚಿನವರು ಮುಂದಿನ ದಿನಗಳಲ್ಲಿ ಮದುವೆ ಮತ್ತು ಇನ್ನಿತರ ಕಾರ್ಯಕ್ರಮಗಳಲ್ಲಿ ಶಿಬಿರದಲ್ಲಿ ಕಲಿತಿದ್ದನ್ನು ಪಸರಿಸುವ ಕೆಲಸ ಮಾಡಿದರೆ ಸಂಸ್ಕೃತಿ ಮತ್ತಷ್ಟು ಗಟ್ಟಿಯಾಗಲಿದೆ ಎಂದರು.
ಕುಲ್ಲಚೆಟ್ಟಿ ಕಾಶಿ ಮಾತನಾಡಿ, (ಮೊದಲ ಪುಟದಿಂದ) ಗೌರವಿಸಬೇಕು. ತಲತಲಾಂತರದಿAದ ನಡೆದು ಬಂದ ಸಂಸ್ಕೃತಿ ಮತ್ತು ಭಾಷೆಯನ್ನು ನಾವು ಕಲಿತು ಉಳಿಸಿಕೊಳ್ಳದಿದ್ದರೆ ಮುಂದಿನ ಸಂಪ್ರದಾಯಗಳು ನಶಿಸಿ ಹೋಗುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ರಾಜ್ಯದ ಹಲವು ಕಡೆಗಳಲ್ಲಿ ಸಂಸ್ಕೃತಿ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕೆ ಹೆಚ್ಚಾಗಿ ಯುವಜನರು ಪಾಲ್ಗೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ. ಸಂಸ್ಕೃತಿಯ ಜೊತೆಗೆ ಸಾಹಿತ್ಯಕ್ಕೂ ಕೂಡ ಒತ್ತು ನೀಡಿ ಇತರ ಜನಾಂಗದವರಲ್ಲಿ ಕಲಾವಿದರನ್ನು ಕೂಡ ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತ ಬಂದಿದೆ ಎಂದರು.
ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ಅಧ್ಯಕ್ಷ ಕಿಶೋರ್ ಕುದುಕುಳಿ ಉದ್ಘಾಟಿಸಿ ಪ್ರಾಸ್ತಾವಿಕ ಮಾತನಾಡಿದರು. ಕೊಡಗು ಗೌಡ ಸಂಸ್ಥೆಯ ನಿರ್ದೇಶಕÀ ದೇವಂಗೋಡಿ ಹರ್ಷ, ಗ್ರಾಮ ಪಂಚಾಯಿತಿ ಸದಸ್ಯ ಜಯಂತ್ ಉಪಸ್ಥಿತರಿದ್ದರು ಸಂಪನ್ಮೂಲ ವ್ಯಕ್ತಿಗಳಾಗಿ ಆನೆರ ಲಾಲು, ಕಲ್ಲುಮುಟ್ಲು ಗಣೇಶ್, ತಳೂರು ಯಶೋದ ಸೋಮಣ್ಣ, ಮತ್ತಾರಿ ರಾಜ, ಕಡ್ಲೇರ ತುಳಸಿ ಮೋಹನ್, ಕೇಕಡ ಇಂದುಮತಿ, ಒಕ್ಕೂಟದ ಕಾರ್ಯದರ್ಶಿ ಚಲನ ನಿಡ್ಯಮಲೆ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೋಳಿಬೈಲು ದರ್ಶಿನಿ ಲಾವಣ್ಯ ಪ್ರಾರ್ಥಿಸಿ, ಅಕಾಡೆಮಿ ನಿರ್ದೇಶಕ ದಯಾನಂದ ಕೂಡಕಂಡಿ ನಿರೂಪಿಸಿ,. ಹೊದೆಟ್ಟಿ ಸುದೀರ್ ಸ್ವಾಗತಿಸಿ, ಕಲ್ಪನಾ ಹೊಸಗದ್ದೆ ವಂದಿಸಿದರು. ಸಂಸ್ಕೃತಿ ಉಳಿವಿಗೆ ಶಿಬಿರ ಸಹಕಾರಿ - ದಿವಾಕರ್