ಮಡಿಕೇರಿ, ಸೆ. ೧೧: ವಾಹನಕ್ಕೆ ದಾರಿ ಬಿಡುವ ವಿಚಾರಕ್ಕೆ ಸಂಬAಧಿಸಿದAತೆ ವ್ಯಕ್ತಿಯೊಬ್ಬನ ಮನೆ ತನಕ ಹಿಂಬಾಲಿಸಿಕೊAಡು ತೆರಳಿ ಹಲ್ಲೆ ಮಾಡಿದ ಘಟನೆ ನಗರದ ಜಲಾಶಯ ಬಡಾವಣೆಯಲ್ಲಿ ನಡೆದಿದೆ.
ತಾ.೯ರ ರಾತ್ರಿ ಜಲಾಶಯ ಬಡಾವಣೆಯ ನಿವಾಸಿ, ಮಂಜುನಾಥ್ ಜ್ಯೂವೆಲರಿ ಮಾಲೀಕ ಪ್ರಶಾಂತ್ ತಮ್ಮ ಕಾರಿನಲ್ಲಿ ಮನೆಗೆ ತೆರಳುವ ಸಂದರ್ಭ ಓಂಕಾರೇಶ್ವರ ದೇವಾಲಯ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಕಾರನ್ನು ಅಡ್ಡ ಹಾಕಿಕೊಂಡಿದ್ದರು. ಇದನ್ನು ಪ್ರಶಾಂತ್ ಪ್ರಶ್ನಿಸಿದ್ದು, ಬಳಿಕ ಮನೆಗೆ ತೆರಳಿದ್ದಾರೆ. ಆರೋಪಿಗಳು ಪ್ರಶಾಂತ್ ಅವರನ್ನು ಹಿಂಬಾಲಿಸಿಕೊAಡು ತೆರಳಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಏಕಾಏಕಿ ಹಾಕಿಸ್ಟಿಕ್ನಿಂದ ಹಲ್ಲೆ ಮಾಡಿದ್ದು, ಈ ಸಂಬAಧ ಪ್ರಶಾಂತ್ ಪುತ್ರಿ ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬAಧಿಸಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.