ಕರಿಕೆ, ಸೆ. ೧೧: ರಾಜ್ಯದ ಗಡಿ ಗ್ರಾಮ ಕರಿಕೆಯ ಚೆಂಬೇರಿ ಚೆಕ್ ಪೋಸ್ಟ್ಗೆ ವೀರಾಜಪೇಟೆ ಶಾಸಕ ಹಾಗೂ ಸರಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷರಾದ ಕೆ.ಜಿ.ಬೋಪಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲಿನ ಕೋವಿಡ್ ತಪಾಸಣಾ ಸಿಬ್ಬಂದಿಗಳಿAದ ಮಾಹಿತಿ ಪಡೆದು ಕೇರಳದಿಂದ ಬರುವವರಿಗೆ ಆರ್ಟಿಪಿಸಿಆರ್ ಕಡ್ಡಾಯ ಹಾಗೂ ದಿನೇ ದಿನೇ ಕೇರಳದಲ್ಲಿ ಪಾಸಿಟಿವ್ ಪ್ರಮಾಣ ಏರಿಕೆಯಾಗುತ್ತಿದ್ದು, ಎರಡು ವ್ಯಾಕ್ಸಿನ್ ಆದವರು ಕೂಡ ಎಚ್ಚರಿಕೆಯಿಂದ ಇರಬೇಕು ಅಲ್ಲದೆ ಗ್ರಾಮದವರು ಆದಷ್ಟು ಕೇರಳಕ್ಕೆ ಕರಿಕೆ, ಸೆ. ೧೧: ರಾಜ್ಯದ ಗಡಿ ಗ್ರಾಮ ಕರಿಕೆಯ ಚೆಂಬೇರಿ ಚೆಕ್ ಪೋಸ್ಟ್ಗೆ ವೀರಾಜಪೇಟೆ ಶಾಸಕ ಹಾಗೂ ಸರಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷರಾದ ಕೆ.ಜಿ.ಬೋಪಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲಿನ ಕೋವಿಡ್ ತಪಾಸಣಾ ಸಿಬ್ಬಂದಿಗಳಿAದ ಮಾಹಿತಿ ಪಡೆದು ಕೇರಳದಿಂದ ಬರುವವರಿಗೆ ಆರ್ಟಿಪಿಸಿಆರ್ ಕಡ್ಡಾಯ ಹಾಗೂ ದಿನೇ ದಿನೇ ಕೇರಳದಲ್ಲಿ ಪಾಸಿಟಿವ್ ಪ್ರಮಾಣ ಏರಿಕೆಯಾಗುತ್ತಿದ್ದು, ಎರಡು ವ್ಯಾಕ್ಸಿನ್ ಆದವರು ಕೂಡ ಎಚ್ಚರಿಕೆಯಿಂದ ಇರಬೇಕು ಅಲ್ಲದೆ ಗ್ರಾಮದವರು ಆದಷ್ಟು ಕೇರಳಕ್ಕೆ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದಾಗ ಪ್ರತಿಕ್ರಿಯೆ ನೀಡಿದ ಶಾಸಕರು, ಇನ್ನೂ ಕೆಲವೇ ದಿನಗಳಲ್ಲಿ ಶಾಲೆಗಳು ಪ್ರಾರಂಭವಾಗುವುದರಿAದ ಬೇರೆ ಸ್ಥಳದಲ್ಲಿ ವಸತಿಗೆ ವ್ಯವಸ್ಥೆ ಕಲ್ಲಿಸಲು ಸ್ಥಳ ಪರಿಶೀಲನೆ ನಡೆಸುವಂತೆ ಜಿ.ಪಂ. ಉಪ ಕಾರ್ಯದರ್ಶಿ ಹಾಗೂ ಕೋವಿಡ್ ನೋಡಲ್ ಅಧಿಕಾರಿ ಲಕ್ಷಿö್ಮ ಯವರಿಗೆ ಕರೆ ಮಾಡಿ ಸೂಚನೆ ನೀಡಿದರು. ಆಸ್ಪತ್ರೆಯ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಭೇಟಿ ಕೋವಿಡ್ ಲಸಿಕೆ, ಔಷಧಿ ದಾಸ್ತಾನು ಬಗ್ಗೆ ಮಾಹಿತಿ ಪಡೆದು ಲಸಿಕೆ ಸಂಗ್ರಹಕ್ಕೆ ಶೀತಲೀಕರಣ ವ್ಯವಸ್ಥೆ ಇಲ್ಲದಿರುವ ಬಗ್ಗೆ ಜಿಲ್ಲಾ ಆರೋಗ್ಯಧಿಕಾರಿಯವರು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ನೀಡಲು ತಿಳಿಸಿದರು. ನಂತರ ಗ್ರಾಮಸ್ಥರ ಪರವಾಗಿ ಶಕ್ತಿ ಕೇಂದ್ರ ಪ್ರಮುಖರಾದ ಹೊಸಮನೆ ಹರೀಶ್ ಪ್ರಮುಖ ಸಮಸ್ಯೆಗಳಾದ ಅಕ್ರಮ ಸಕ್ರಮ, ದೂರವಾಣಿ, ರಸ್ತೆ ಮತ್ತು ಕೇರಳದ ಪಾಣತ್ತೂರು ಮೂಲಕ ಸುಳ್ಯಕ್ಕೆ ಹೋಗಲು ಅವಕಾಶ ಕಲ್ಪಿಸುವ ಬಗ್ಗೆ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಸಮಿತಿ ಅಧÀ್ಯಕ್ಷ ಶಾಂತೆಯAಡ ರವಿಕುಶಾಲಪ್ಪ, ಮಡಿಕೇರಿ ಮೂಡ ಅಧÀ್ಯಕ್ಷ ರಮೇಶ್ ಹೊಳ್ಳ, ಡಿವೈಎಸ್ಪಿ ಗಜೇಂದ್ರ ಪ್ರಸಾದ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಭಾಗಮಂಡಲ ಉಪನಿರೀಕ್ಷಕ ಮಹದೇವ್, ಪ್ರಮುಖರಾದ ಕೋಡಿ ಪೊನ್ನಪ್ಪ, ಕವಿತಾ ಪ್ರಭಾಕರ, ಐಸಾಕ್, ಪಂಚಾಯಿತಿ ಸದಸ್ಯರುಗಳಾದ ನಾರಾಯಣ ಕೆ.ಎ., ದೀಪಿಕಾ ಸೇರಿದಂತೆ ಇತರೆ ಪ್ರಮುಖರು ಹಾಜರಿದ್ದರು.
- ಸುಧೀರ್ ಹೊದ್ದೆಟ್ಟಿ