ಮಡಿಕೇರಿ, ಸೆ. ೯: ಕೋಟೆ ಗಣಪತಿ ದೇವಾಲಯದಲ್ಲಿ ಗೌರಿ ಗಣೇಶ ಹಬ್ಬಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಕೋವಿಡ್ ೧೯ ಹಿನ್ನೆಲೆ ಸರ್ಕಾರದ ನಿಯಮ ಪಾಲಿಸಿ, ಕೋಟೆ ಗಣಪತಿಗೆ ಪೂಜಾ ಕಾರ್ಯ ನಡೆಯಲಿದೆ. ಈಡುಗಾಯಿ ಪೂಜೆಗೆ ಅವಕಾಶವಿದ್ದು ರೂ. ೮೫ ಸಾವಿರ ರೂಪಾಯಿ ಈಡುಗಾಯಿ ವಿಲೇವಾರಿಗೆ ಟೆಂಡರ್ ಮೂಲಕ ಹರಾಜಾಗಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ, ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.