ಸುಂಟಿಕೊಪ್ಪ, ಸೆ. ೯: ಪೊಲೀಸ್, ಆರೋಗ್ಯ, ಅಗ್ನಿಶಾಮಕ ತುರ್ತು ಸಂದರ್ಭಗಳಲ್ಲಿ ೧೧೨ ಕ್ಕೆ ಕರೆ ಮಾಡುವಂತೆ ಸಾರ್ವಜನಿಕರಿಗೆ ಸುಂಟಿಕೊಪ್ಪ ಠಾಣಾಧಿಕಾರಿ ಪುನೀತ್ ಕರೆ ನೀಡಿದರು.

ಕನ್ನಡ ವೃತ್ತದಲ್ಲಿ ಸಾರ್ವಜನಿಕರಿಗೆ ೧೧೨ ಸಹಾಯವಾಣಿಯ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಅಗ್ನಿ ಅನಾಹುತ ಇನ್ನಿತರ ತುರ್ತು ಸಂದರ್ಭದಲ್ಲಿ ೧೧೨ಕ್ಕೆ ಕರೆ ಮಾಡಿ ಮಾಹಿತಿಯನ್ನು ನೀಡಿದ್ದಲ್ಲಿ ಕೆಲವೇ ನಿಮಿಷಗಳಲ್ಲಿ ಆ ಭಾಗದ ಸಮಸ್ಯೆಗೆ ಸ್ಪಂದಿಸಲು ಆರೋಗ್ಯ, ಪೊಲೀಸ್ ಹಾಗೂ ಅಗ್ನಿಶಾಮಕ ಇಲಾಖೆಯ ಸೂಕ್ತ ಕಾರ್ಯಪಡೆಯು ಆಗಮಿಸಲಿದೆ. ಇದರಿಂದ ಸಾರ್ವಜನಿಕರ ಜೀವ ರಕ್ಷಣೆ, ಬಾರೀ ಅನಾಹುತಗಳನ್ನು ತಡೆಯಲು ಸಾಧ್ಯವಾಗಲಿದೆ. ಅದರಿಂದ ಸಾರ್ವಜನಿಕರು ೧೧೨ ಕ್ಕೆ ಕರೆ ಮಾಡುವಂತೆ ಸುಂಟಿಕೊಪ್ಪ ಠಾಣಾಧಿಕಾರಿ ಪುನಿತ್ ಮಾಹಿತಿ ನೀಡಿದರು.