ಮಡಿಕೇರಿ, ಸೆ. ೯: ದುಸ್ಥಿತಿಯಲ್ಲಿರುವ ನಗರದ ಗಾಂಧಿ ಮೈದಾನವನ್ನು ಸುಸ್ಥಿತಿಯಲ್ಲಿಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಮ್ ಆದ್ಮಿ ಪಾರ್ಟಿಯ ಕೊಡಗು ಘಟಕ ಒತ್ತಾಯಿಸಿದೆ. ಪಕ್ಷದ ಪ್ರಮುಖರು ಜಿಲ್ಲಾಡಳಿತ ಮತ್ತು ನಗರಸಭೆಗೆ ಮನವಿ ಪತ್ರ ಸಲ್ಲಿಸಿ ಗಾಂಧಿ ಮೈದಾನದ ಅಂದಗೆಡಿಸಿರುವ ಬಗ್ಗೆ ವಿವರಿಸಿದರು. ಮಣ್ಣಿನ ರಾಶಿಯನ್ನು ತೆರವುಗೊಳಿಸಿ ಸ್ವಚ್ಛತೆಯನ್ನು ಕಾಪಾಡುವ ಮೂಲಕ ಜಿಲ್ಲಾಡಳಿತ ಗಾಂಧಿ ಜಯಂತಿಯನ್ನು ಗಾಂಧಿ ಮೈದಾನದಲ್ಲೇ ಆಚರಿಸಬೇಕು. ತಪ್ಪಿದಲ್ಲಿ ಕ್ರೀಡಾಭಿಮಾನಿಗಳು ಮತ್ತು ನಾಗರಿಕರ ಸಹಕಾರದೊಂದಿಗೆ ತೀವ್ರ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಆಪ್‌ನ ಕೊಡಗು ಜಿಲ್ಲಾ ಉಸ್ತುವಾರಿ ಕೋಳಿಬೈಲು ಚಿಣ್ಣಪ್ಪ ವೆಂಕಟೇಶ್ ಹಾಗೂ ಜಿಲ್ಲಾ ಸಂಚಾಲಕ ಹೆಚ್.ಬಿ.ಪೃಥ್ವಿ ಎಚ್ಚರಿಸಿದರು. ಗಾಂಧೀಜಿಯ ಹೆಸರನ್ನು ಹೊಂದಿರುವ ಮೈದಾನಕ್ಕೆ ಕಾಯಕಲ್ಪ ನೀಡುವ ಮೂಲಕ ಗಾಂಧಿ ಜಯಂತಿಯAದು ಮಹಾತ್ಮನಿಗೆ ಗೌರವ ಸಲ್ಲಿಸಬೇಕೆಂದು ಅವರುಗಳು ಮನವಿ ಮಾಡಿದರು. ಮನವಿ ಸಲ್ಲಿಸುವ ಸಂದರ್ಭ ಪಕ್ಷದ ಮಡಿಕೇರಿ ತಾಲೂಕು ಉಸ್ತುವಾರಿ ಹೆಚ್.ಜಿ. ಬಾಲಸುಬ್ರಮಣ್ಯ ಮತ್ತಿತರರು ಹಾಜರಿದ್ದರು.