ಮಡಿಕೇರಿ, ಸೆ. ೯: ನೆಹರು ಯುವ ಕೇಂದ್ರ. ಕೌಶಲ್ಯಾಭಿವೃದ್ಧಿ ಉದ್ಯಮಶೀಲತಾ ಯುವ ಕಾರ್ಯಕ್ರಮ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಡಗು, ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ತಾಲೂಕು ಯುವ ಒಕ್ಕೂಟ ಹಾಗೂ ಗ್ರಾಮ ಪಂಚಾಯಿತಿ ಹಾಕತ್ತೂರು, ಮಾರ್ಗದರ್ಶಿ ತ್ರಿನೇತ್ರ ಯುವಕ ಸಂಘ ತೊಂಬತ್ತು ಮನೆ ಹಾಕತ್ತೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಾಕತ್ತೂರಿನ ಮುಖ್ಯ ಬೀದಿಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಸ್ವಚ್ಛತಾ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಪ್ರತಿಜ್ಞಾ ವಿಧಿಯನ್ನು ಸಂಘದ ಅಧ್ಯಕ್ಷ ಪಿ.ಪಿ. ಸುಕುಮಾರ ಬೋಧಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಿರಣ, ಸದಸ್ಯರಾದ ಶೀಲಾವತಿ, ಅಭಿವೃದ್ಧಿ ಅಧಿಕಾರಿ ಚಂಗಪ್ಪ, ಯುವಕ ಸಂಘದ ಸ್ಥಾಪಕ ಅಧ್ಯಕ್ಷ ದಿವಾಕರ ಹಾಕತ್ತೂರಿನ ಆಟೋ ಮಾಲೀಕರು - ಚಾಲಕರು ಹಾಜರಿದ್ದರು. ಯುವಕ ಸಂಘದ ಕಾರ್ಯದರ್ಶಿ ಎಂ.ಎA. ಅಬೂಬಕರ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.