ನಾಪೋಕ್ಲು, ಸೆ. ೯: ಕಳೆದ ಎರಡು ತಿಂಗಳ ಹಿಂದೆ ಲೋಕೋಪ ಯೋಗಿ ಇಲಾಖೆ ನಗರದ ಗುಂಡಿಬಿದ್ದ ರಸ್ತೆಗಳಲ್ಲಿದ್ದ ಗುಂಡಿಯನ್ನು ಮುಚ್ಚಿ ಸಂಚಾರಕ್ಕೆ ತೊಂದರೆಯಾಗದAತೆ ಕ್ರಮಕೈಗೊಂಡಿತ್ತು. ಆದರೆ ಕಳಪೆ ಕಾಮಗಾರಿಯಿಂದ ನಗರದ ರಸ್ತೆಗಳು ಕೇವಲ ಎರಡೇ ತಿಂಗಳಲ್ಲಿ ಪುನಃ ಗುಂಡಿ ಬಿದ್ದಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ. ಕೂಡಲೇ ಸಂಬAಧ ಪಟ್ಟ ಲೋಕೋಪಯೋಗಿ ಇಲಾಖೆ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ. ಅಲ್ಲದೇ ಗ್ರಾಮ ಪಂಚಾಯಿತಿಯ ಎದುರಿನಲ್ಲೇ ದೊಡ್ಡ ಗುಂಡಿ ಇದ್ದು, ಗ್ರಾಮ ಪಂಚಾಯಿತಿಯವರು ಈ ಗುಂಡಿಯನ್ನು ಮುಚ್ಚಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ. - ದುಗ್ಗಳ