ಕಣಿವೆ. ಸೆ. ೯: ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಣ್ಣೀರುಹಳ್ಳ ಗ್ರಾಮದ ಮುಖ್ಯ ರಸ್ತೆಯಲ್ಲಿ ಚರಂಡಿ ಇಲ್ಲದ ಪರಿಣಾಮ ಮಳೆಯ ನೀರು ಮತ್ತು ಮನೆಗಳ ತ್ಯಾಜ್ಯ ನೀರು ಹೆದ್ದಾರಿಯಲ್ಲೇ ನಿಲುಗಡೆಗೊಳ್ಳುತ್ತಿದೆ. ಇದರಿಂದಾಗಿ ಸೊಳ್ಳೆಗಳ ಸಂತತಿ ಹೆಚ್ಚಾಗಿದೆ. ಕೂಡಲೇ ಚರಂಡಿ ನಿರ್ಮಿಸಿ ರಸ್ತೆಯಲ್ಲಿ ತ್ಯಾಜ್ಯ ನೀರು ನಿಲ್ಲದಂತೆ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.