ಸೋಮವಾರಪೇಟೆ,ಸೆ.೯: ಕರ್ನಾಟಕ ಜಾನಪದ ಪರಿಷತ್‌ನ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ಪಟ್ಟಣದ ಪತ್ರಿಕಾಭವನದಲ್ಲಿ ಸ್ವರ್ಣಗೌರಿ ಉತ್ಸವ ಹಾಗೂ ಮಹಿಳೆಯರಿಗೆ ಬಾಗಿನ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿಷತ್‌ನ ಅಧ್ಯಕ್ಷ ಕೆ.ಎ. ಪ್ರಕಾಶ್ ವಹಿಸಿ ಮಾತನಾಡಿ, ಜಾನಪದ ಸೊಗಡಿನ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಹಬ್ಬಾಚರಣೆಗಳು ಪರಸ್ಪರ ಬಾಂಧವ್ಯ ವೃದ್ದಿಗೆ ಸಹಕಾರಿಯಾಗಿದೆ. ಪರಿಷತ್‌ನಲ್ಲಿರುವ ಮಹಿಳಾ ಸದಸ್ಯರಿಗೆ ಬಾಗಿನ ನೀಡುವ ಮೂಲಕ ಜಾನಪದ ಸಂಸ್ಕೃತಿಯ ಉಳಿವಿಗೆ ಪ್ರಯತ್ನ ನಡೆಸಲಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇನ್ನರ್‌ವೀಲ್ ಕ್ಲಬ್ ಮಾಜೀ ಅಧ್ಯಕ್ಷೆ ಕವಿತಾ ವಿರೂಪಾಕ್ಷ ಅವರು, ಮಹಿಳೆಯರಿಗೆ ಹೆಚ್ಚಿನ ಸಂಭ್ರಮ ತರುವ ಗೌರಿ ಹಬ್ಬವನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ಸಹೋದರತೆಯ ಸಾರವನ್ನು ಉಣಬಡಿಸುವ ಇಂತಹ ಸಹಕಾರಿಯಾಗಿದೆ. ಪರಿಷತ್‌ನಲ್ಲಿರುವ ಮಹಿಳಾ ಸದಸ್ಯರಿಗೆ ಬಾಗಿನ ನೀಡುವ ಮೂಲಕ ಜಾನಪದ ಸಂಸ್ಕೃತಿಯ ಉಳಿವಿಗೆ ಪ್ರಯತ್ನ ನಡೆಸಲಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇನ್ನರ್‌ವೀಲ್ ಕ್ಲಬ್ ಮಾಜೀ ಅಧ್ಯಕ್ಷೆ ಕವಿತಾ ವಿರೂಪಾಕ್ಷ ಅವರು, ಮಹಿಳೆಯರಿಗೆ ಹೆಚ್ಚಿನ ಸಂಭ್ರಮ ತರುವ ಗೌರಿ ಹಬ್ಬವನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ಸಹೋದರತೆಯ ಸಾರವನ್ನು ಉಣಬಡಿಸುವ ಇಂತಹ ಮೆಚ್ಚುವಂತಾದ್ದು ಎಂದು ಅಭಿಪ್ರಾಯಿಸಿದರು.

ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಎಸ್.ಮಹೇಶ್, ಜಾನಪದ ಪರಿಷತ್‌ನ ಗೌರವಾಧ್ಯಕ್ಷ ಎಸ್.ಎ. ಮರುಳೀಧರ್ ಅವರುಗಳು ಮಾತನಾಡಿದರು. ಕಾರ್ಯಕ್ರಮದಲ್ಲಿ ಜಾನಪದ ಪರಿಷತ್‌ನ ಮಹಿಳಾ ಸದಸ್ಯರು, ಸಾರ್ವಜನಿಕ ಮಹಿಳೆಯರಿಗೆ ಬಾಗಿನ ವಿತರಿಸಲಾಯಿತು.

ಪರಿಷತ್‌ನ ಕಾರ್ಯದರ್ಶಿ ಎಂ.ಎ. ರುಬೀನಾ, ಪದಾಧಿಕಾರಿಗಳಾದ ವಸಂತಿ ರವೀಂದ್ರ, ದೀಪಿಕಾ ಸುದರ್ಶನ್, ರಾಣಿ ರವೀಂದ್ರ, ಅಶ್ವಿನಿ ಕೃಷ್ಣಕಾಂತ್, ಶರ್ಮಿಳಾ ರಮೇಶ್, ಬಿ.ಪಿ. ಸುಮತಿ ಸೇರಿದಂತೆ ಇತರರು ಕಾರ್ಯಕ್ರಮ ನಿರ್ವಹಿಸಿದರು. ಸಾಹಿತ್ಯ ಘಟಕದ ಅಧ್ಯಕ್ಷ ನ.ಲ.ವಿಜಯ, ಸಾಂಸ್ಕೃತಿಕ ಘಟಕದ ಅಧ್ಯಕ್ಷ ಕೆ.ಸಿ. ಸುದರ್ಶನ್ ಅವರುಗಳು ಉಪಸ್ಥಿತರಿದ್ದರು.