ಕಣಿವೆ, ಸೆ. ೯ : ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಗ್ರಾಮಗಳಲ್ಲಿ ಕೈಗೊಂಡಿರುವ ಭತ್ತದ ಬೆಳೆಯೊಳಗೆ ಇದ್ದ ಕಳೆಯನ್ನು ಕೀಳುವ ಕಾರ್ಯದಲ್ಲಿ ಕಾರ್ಮಿಕರು ಮಗ್ನರಾಗಿದ್ದಾರೆ.
ಕುಶಾಲನಗರ ತಾಲೂಕಿನ ತೊರೆನೂರು, ಹೆಬ್ಬಾಲೆ, ಶಿರಂಗಾಲ ಹಾಗೂ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಭತ್ತದ ಗದ್ದೆಗಳ ಕಳೆ ಕಿತ್ತು ಎರಡನೇ ಹಂತದ ರಾಸಾಯನಿಕ ಗೊಬ್ಬರ ಹಾಕುವಲ್ಲಿ ಕೃಷಿಕರು ಮಗ್ನರಾಗಿರುವುದು ಕಂಡುಬರುತ್ತಿದೆ.