ಮಡಿಕೇರಿ, ಸೆ. ೯: ಅಮರಕವಿ ಹರಿದಾಸ ಅಪ್ಪನೆರವಂಡ ಅಪ್ಪಚ್ಚಕವಿಯ ಹುಟ್ಟು ಹಬ್ಬದ ನೆನಪಿನಲ್ಲಿ ಕೊಡವಾಮೆರ ಕೊಂಡಾಟ ಸಂಘಟನೆಯು ಕವಿಯ ನಾಲ್ಕು ನಾಟಕದ ಒಕ್ಕಣೆ (ಡೈಲಾಗ್) ಪೈಪೋಟಿಯನ್ನು ಆಯೋಜಿಸಿದೆ ಎಂದು ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್'ಬೆಳ್ಯಪ್ಪ ಅವರು ತಿಳಿಸಿದ್ದಾರೆ. ಅಪ್ಪಚ್ಚ ಕವಿ ಬರೆದಿರುವ ನಾಲ್ಕು ನಾಟಕದ ಯಾವುದಾದರೂ ಒಂದು ಒಕ್ಕಣೆ (ಡೈಲಾಗ್) ಅನ್ನು, ೧೩ ರಿಂದ ೧೭ ವಯಸ್ಸಿನ ಒಳಗಿರುವ ಮಕ್ಕಳು, ಲಿಂಗಭೇದವಿಲ್ಲದೆ, ನೋಡದೆ ಹೇಳುವುದರ ಮೂಲಕ, ಎರಡೂವರೆ ನಿಮಿಷ ಮೀರದಂತೆ ವೀಡಿಯೋ ಮಾಡಿ, ತಾ. ೧೫ ರೊಳಗೆ ಪೈಪೋಟಿ ಸಂಚಾಲಕಿ ಕುಲ್ಲಚಂಡ ವಿನುತ ಕೇಸರಿ ಅವರ ೮೬೯೪೮೮೫೬೭೬ ಸಂಖ್ಯೆಗೆ ವಾಟ್ಸಾಪ್ ಮಾಡಬೇಕು. ವಿಜೇತರಿಗೆ ಪ್ರಥಮ ೨೦೦೦ ದ್ವಿತೀಯ ೧೫೦೦ ತೃತೀಯ ೧೦೦೦ ನಗದು ಹಾಗೂ ಭಾಗವಹಿಸುವ ಎಲ್ಲರಿಗೂ ಅಭಿನಂದನಾ ಪತ್ರ ಕಳುಹಿಸಲಾಗುವುದು. ನಗದು ಬಹುಮಾನವನ್ನು ಕೊಡವಾಮೆರ ಕೊಂಡಾಟ ಸಂಘಟನೆಯ ಆಡಳಿತ ಮಂಡಳಿ ನಿರ್ದೇಶಕರೂ ಆಗಿರುವ ಕಾರೆರ ರಂಜು ನಂಜಪ್ಪ ಪ್ರಾಯೋಜಿಸಿದ್ದಾರೆ. ಕೊಡವ ಸಾಹಿತ್ಯ ಲೋಕದ ಮಿನುಗುತಾರೆ, ಅಮರ ಕವಿ ಅಪ್ಪನೆರವಂಡ ಅಪ್ಪಚ್ಚಕವಿಯ ಗೌರವಾರ್ಥ ಹೆಚ್ಚಿನ ಸ್ಪರ್ಧಾಳುಗಳು ಭಾಗವಹಿಸಬೇಕೆಂದು ಸಂಘಟನೆ ಪದಾಧಿಕಾರಿಗಳು ಕೋರಿದ್ದಾರೆ.