ನಾಪೋಕ್ಲು, ಸೆ. ೯: ಏಸುಕ್ರಿಸ್ತರ ತಾಯಿ ಕ್ಯಾಥೋಲಿಕ್ ಕ್ರೆöÊಸ್ತರ ಮಾತೆ ಮರಿಯಮ್ಮ ಅವರ ಜನ್ಮದಿನೋತ್ಸವ ವನ್ನು ಇಲ್ಲಿನ ಸಂತ ಮೇರಿ ಮಾತೆಯ ದೇವಾಲಯದಲ್ಲಿ ಬುಧವಾರ ಸರಳವಾಗಿ ಆಚರಿಸಲಾಯಿತು. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಮಾರ್ಗಸೂಚಿಗಳನ್ನು ಅನುಸರಿಸಿ ದಿವ್ಯ ಬಲಿಪೂಜೆಯನ್ನು ಧರ್ಮಗುರು ಜ್ಞಾನ ಪ್ರಕಾಶ್ ನೆರವೇರಿಸಿದರು. ಬಲಿಪೂಜೆಗೂ ಮುನ್ನ ಕ್ರೆöÊಸ್ತ ಬಾಂಧವರು ದೇವಾಲಯಕ್ಕೆ ಆಗಮಿಸಿ ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡು, ಧರ್ಮಗುರು ಜ್ಞಾನಪ್ರಕಾಶ್ ಪ್ರಾರ್ಥನೆ ಸಲ್ಲಿಸಿ ಸರ್ವರಿಗೂ ಶುಭಕೋರಿ ಆಶೀರ್ವದಿಸಿದರು.
ಕೂಡಿಗೆಯಲ್ಲಿ ಮೇರಿ ಮಾತೆ ಹಬ್ಬ
ಕೂಡಿಗೆ: ಕೂಡಿಗೆಯ ಹೋಲಿ ಫ್ಯಾಮಿಲಿ ದೇವಾಲಯದ ಅವರಣದಲ್ಲಿ ಕೊರೊನಾ ನಿಯಮದ ಅಡಿಯಲ್ಲಿ ಮೇರಿ ಮಾತೆಯ ಹಬ್ಬವನ್ನು ಆಚರಣೆ ಮಾಡಲಾಯಿತು.
ಹಬ್ಬದ ಅಂಗವಾಗಿ ಸಮುದಾಯ ಬಾಂಧವರು ವಿಶೇಷ ಪ್ರಾರ್ಥನೆ ಮಾಡಿದರು. ದೇವಾಲಯದ ಫಾದರ್ ಚಾರ್ಲ್ಸ್ ನೊರೋನಾ ಅವರ ನೇತೃತ್ವದಲ್ಲಿ ನಡೆಯಿತು. ಪ್ರಮುಖರಾದ ನೆವಿಲ್ ಕೆ.ಎ., ಪೀಟರ್, ಸನ್ನಿ ಫಿಲೋಮಿನಾ ಅಂತೋಣಿ ಜೋಸೆಫ್ ಸೇರಿದಂತೆ ಅನೇಕ ಮಂದಿ ಪಾಲ್ಗೊಂಡಿದ್ದರು.