ಕಣಿವೆ, ಸೆ. ೯: ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಸಂಭ್ರಮದ ಹಬ್ಬವಾದ ಗೌರಿ ಹಬ್ಬ ಸಡಗರದಿಂದ ಗುರುವಾರ ನಾಡಿನೆಲ್ಲೆಡೆ ಜರುಗಿತು.
ಬೆಳಗಾಗುತ್ತಲೇ ಬೇಗನೆ ಎದ್ದ ಮಹಿಳೆಯರು ಮನೆಗಳ ಮುಂಬದಿಯ ಆವರಣವನ್ನು ಗೋಮೂತ್ರದಿಂದ ಸ್ವಚ್ಛಗೊಳಿಸಿ ರಂಗೋಲಿ ಹಚ್ಚಿ ಮನೆ ಬಾಗಿಲಿಗೆ ತೋರಣಗಳನ್ನು ಕಟ್ಟಿದರು. ಹಾಗೆಯೇ ಮನೆಗಳ ಆವರಣದಲ್ಲಿನ ತೆರೆದ ಬಾವಿ ಹಾಗೂ ಕೊಳವೆ ಬಾವಿಗಳ ಬಳಿ ಗಂಗಾ ಪೂಜೆ ನೆರವೇರಿಸಿದರು.
ಇದೇ ಸಂದರ್ಭ ನೆರೆ ಹೊರೆಯ ಹೆಂಗಳೆಯರು ಹಾಗೂ ಮಕ್ಕಳನ್ನು ಕರೆದು ಅರಿಶಿಣ ಕುಂಕುಮ, ತೆಂಗಿನಕಾಯಿ, ಸೀರೆಗಳು ತುಂಬಿದ ಮರದ ಬಾಗೀನಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು. ಬಳಿಕ ಮನೆಯಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ ಮನೆ ಮಂದಿಯೆಲ್ಲಾ ಸಾಮೂಹಿಕವಾಗಿ ಸವಿದರು. ಕೆಲವೆಡೆ ಮಕ್ಕಳಿಗೆ ಮಹಿಳೆಯರಿಗೆ ಬಳೆಗಳನ್ನು ತೊಟ್ಟು ಶುಭಾಶಯಗಳ ವಿನಿಮಯ ಮಾಡಿಕೊಂಡರು.
ಸೋಮವಾರಪೇಟೆಯ ವಿವಿಧೆಡೆ ಸ್ವರ್ಣಗೌರಿ ಪ್ರತಿಷ್ಠಾಪನೆ
ಸೋಮವಾರಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಸ್ವರ್ಣ ಗೌರಿ ಹಾಗೂ ಗಣೇಶ ಉತ್ಸವಕ್ಕೆ ಸಮಿತಿಗಳು ಸಿದ್ಧತೆ ಕೈಗೊಂಡಿದ್ದು, ಗೌರಿ ಹಬ್ಬದ ದಿನವಾದ ಇಂದು ಎಲ್ಲೆಡೆ ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಿತು.
ಸಾರ್ವಜನಿಕ ಗಣೇಶ ಉತ್ಸವ ಸಮಿತಿ ವತಿಯಿಂದ ಇಲ್ಲಿನ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಪಟ್ಟಣದ ಆನೆಕೆರೆಯಲ್ಲಿ ಗಂಗೆ ಪೂಜೆ ನೆರವೇರಿಸಲಾಯಿತು. ಬಸವೇಶ್ವರ ದೇವಾಲಯದಲ್ಲಿ ವೀರಶೈವ ಸಮಾಜದ ವತಿಯಿಂದ ಸ್ವರ್ಣಗೌರಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.
ಆನೆಕೆರೆಯಲ್ಲಿ ಸಂಪ್ರದಾಯದAತೆ ಅರ್ಚಕ ಮಿಥುನ್ ಶಾಸ್ತಿçà ಅವರ ಪೌರೋಹಿತ್ವದಲ್ಲಿ ಗಂಗೆ ಪೂಜೆ ನೆರವೇರಿಸಿ, ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಗೌರಿ ಮೂರ್ತಿಯನ್ನು ಕಡಲೆ ಹಿಟ್ಟಿನಿಂದ ಸಿಂಗರಿಸಿ ಪೂಜಿಸಲಾಯಿತು.
ಇದರೊಂದಿಗೆ ಮಹಿಳೆಯರು ಉತ್ಸವ ಮೂರ್ತಿಗೆ ಬಾಗಿನ ಅರ್ಪಿಸಿದರು. ದೇವಾಲಯಕ್ಕೆ ಆಗಮಿಸಿದ ಮಹಿಳಾ ಭಕ್ತಾದಿಗಳಿಗೆ ಮಡಿಲಕ್ಕಿ ನೀಡಲಾಯಿತು. ಇದರೊಂದಿಗೆ ಪಟ್ಟಣದ ಸೋಮೇಶ್ವರ ದೇವಾಲಯ, ಕಟ್ಟೆಬಸವೇಶ್ವರ ದೇವಾಲಯ, ರಾಮಮಂದಿರ, ಆಲೇಕಟ್ಟೆ ಭಾರತೀಯ ಯುವಕ ಸಂಘ ಸೇರಿದಂತೆ ಪೊಲೀಸ್ ಠಾಣಾ ವ್ಯಾಪ್ತಿಯ ೩೬ ಕಡೆಗಳಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ಆನೆಕೆರೆಗೆ ಬಾಗಿನ: ಜೀರ್ಣೋದ್ಧಾರಗೊಂಡು ಮೈದುಂಬಿರುವ ಪಟ್ಟಣದ ಆನೆಕೆರೆಗೆ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ವತಿಯಿಂದ ಬಾಗಿನ ಅರ್ಪಿಸಲಾಯಿತು. ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು ಸೇರಿದಂತೆ ಪದಾಧಿಕಾರಿಗಳು ಆನೆಕೆರೆಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಣೆ ಮಾಡಿದರು.
ಕೂಡಿಗೆಯಲ್ಲಿ ಗೌರಿ ಪೂಜೆ
ಕೂಡಿಗೆ: ಗೌರಿ ಗಣೇಶ ಚತುರ್ಥಿಯ ಮೊದಲ ದಿನ ಗೌರಿ ಪೂಜೆಯು ಸಂಪ್ರದಾಯದAತೆ ಕೂಡಿಗೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯಿತು.
ಮಹಿಳೆಯರು ವಿಶೇಷವಾಗಿ ಹೊಸ ಬಟ್ಟೆಯನ್ನು ಧರಿಸಿ ತಮ್ಮ ಮನೆ ಅಂಗಳದ ಮುಂದಿನ ಬಾಗಿಲುಗಳಿಗೆ ಸೂರ್ಯ ಉದಯಿಸುವ ಮುನ್ನ ಪೂಜೆ ಮಾಡಿ ನಂತರ ಸಮೀಪದ ಹೊಳೆಗೆ ತೆರಳಿ ಮಣ್ಣಿನ ಗೌರಿ ವಿಗ್ರಹವನ್ನು ಗಂಗಾ ಸ್ಥಳದಲ್ಲಿ ಪೂಜೆ ಸಲ್ಲಿಸಿ ನಂತರ ತಮ್ಮ ಮನೆಗಳಿಗೆ ತಂದು ಪೂಜೆ ಸಲ್ಲಿಸಿದರು. ಗೌರಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುವ ಸ್ಥಳಗಳಲ್ಲಿ ಇಲ್ಲಿನ ಯುವಕ ಮಂಡಳಿಯವರು ಗೌರಿ ವಿಗ್ರಹವನ್ನು ಪೂಜಿಸಿ ಪ್ರತಿಷ್ಠಾಪಿಸಿದ್ದಾರೆ.
ಪಲ್ಲಕ್ಕಿ ಉತ್ಸವ
ವೀರಾಜಪೇಟೆ: ಪಟ್ಟಣದ ಜೈನರ ಬೀದಿಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದಲ್ಲಿ ಪ್ರತಿ ವರ್ಷವು ಆಚರಿಸಿಕೊಂಡು ಬರುತ್ತಿರುವ ಗಣೇಶ ಚತುರ್ಥಿ ಅಂಗವಾಗಿ ಶ್ರೀ ಗೌರಮ್ಮನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಗೌರಮ್ಮನಿಗೆ ವಿಶೇಷ ಪೂಜೆ ಹಾಗೂ ಮಹಾಪೂಜೆ ನಡೆಯಿತು. ಈ ವೇಳೆ ದೇವಾಲಯ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಪಾಲ್ಗೊಂಡಿದ್ದರು.